ಲೋಕದರ್ಶನ ವರದಿ
ಧಾರವಾಡ 10: ಉತ್ತರ ಕನರ್ಾಟಕದ ಪ್ರಥಮ ಇಂಜನಿಯರ ಚನ್ನವೀರಗೌಡ ಅಣ್ಣಾ ಶಿದ್ರಾಮಗೌಡ ಪಾಟೀಲರು. ನೂರು ವರ್ಷಗಳ ಹಿಂದೆ ಶಿಕ್ಷಣ ಪಡೆಯುವದೇ ಬಹಳ ಕಷ್ಟವಾಗಿತ್ತು. ಇಂತಹ ಕಾಲಘಟ್ಟದಲ್ಲಿ ಇಂಜನೀಯರ ಪದವಿ ಪಡೆಯುವದು ಸಾಮಾನ್ಯವಲ್ಲ ಎಂದು ಹುಬ್ಬಳ್ಳಿ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಅಶೋಕ ಶೆಟ್ಟರ ಹೇಳಿದರು. ಅವರು ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ, ಚನ್ನವೀರಗೌಡ ಅಣ್ಣಾ ಶಿದ್ರಾಮಗೌಡ ಪಾಟೀಲ ದತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಡಾ. ಶೆಟ್ಟರ ನೂರು ವರ್ಷಗಳ ಹಿಂದೆ ಶಿಕ್ಷಣವೆನ್ನುವುದು ಗೊತ್ತಿಲ್ಲದ ವಿದ್ಯೆಯಾಗಿತ್ತು. ಆದರೆ ಚೆನ್ನವೀರಗೌಡ ಅಣ್ಣಾ ಇವರು ಯಾರ ಮಾರ್ಗದರ್ಶನವಿಲ್ಲದೆ ಉತ್ತರ ಕನರ್ಾಟಕದಲ್ಲಿ ಇಂಜನೀಯರ ಎನ್ನುವ ಪದವೆ ಗೊತ್ತಿಲ್ಲದ ವೇಳೆಯಲ್ಲಿ ಪುಣೆಗೆ ಹೋಗಿ ಎಲ್.ಸಿ.ಎ. ಪದವಿ ಪಡೆದು ಇಂಜನೀಯರರಾಗಿದ್ದು, ಆಶ್ಚರ್ಯಕರ ಸಂಗತಿ. ಇದು ಇವರ ಅಗಾಧ ಪ್ರಯತ್ನ ಹಾಗೂ ದೇವರ ಕೃಪೆ. ಇವರು ದೊಡ್ಡ ಜಮೀನದಾರರು. ಇವರಿಗೆ ಉನ್ನತ ಶಿಕ್ಷಣ ಪಡೆದು ನೌಕರಿ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಇವರು ತಮ್ಮ ಮನದೊಳಗೆ ಉತ್ತರ ಕನರ್ಾಟಕದ ದುಸ್ಥಿತಿಯನ್ನು ಕಂಡು ಇಲ್ಲಿ ಸುಧಾರಣೆಯನ್ನು ತರಬೇಕು, ಸಮಾಜಕ್ಕೆ ಉಪಯುಕ್ತವಾಗುವಂತ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಬೇಕೆಂಬ ಮಹಾತ್ವಾಕಾಂಕ್ಷೆ ಹೊಂದಿ ಪುಣೆಗೆ ಹೋಗಿ ಇಂಗ್ಲೆಂಡಿನ ಎಲ್.ಸಿ.ಎ. ಪದವಿ ಪಡೆದುಕೊಂಡವರು.
ಇವರು 1904 ರಲ್ಲಿ ಧಾರವಾಡ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಟೌನ ಹಾಲ್ ನೀಲನಕ್ಷೆ ತಯಾರಿಸಿ ಆ ಕಟ್ಟಡ ನಿಮರ್ಾಣವಾಗುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸರಕಾರದವರು ಇವರ ಸುಮಾರು 1200 ಎಕರೆ ಭೂಮಿಯನ್ನು ಸ್ವಾದೀನ ಮಾಡಿಕೊಂಡಾಗ ಇವರು ಯಾವುದೇ ತಕರಾರು ಮಾಡದೇ ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟವರು. ಉತ್ತರ ಕನರ್ಾಟಕವನ್ನು ಕಟ್ಟಿದವರು ಇಂತವರೆ, ಯಾವ ರಾಜ ಮಹರಾಜರು ಅಲ್ಲ. ಇವರು ಕೆ.ಎಲ್.ಇ. ಸಂಸ್ಥೆಯ ಸಪ್ತಋಷಿಗಳ ಜೊತೆಗೆ ಒಡನಾಟ ಹೊಂದಿದವರು. ಇದನ್ನು ಹತೋಟಿಗೆ ತರಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ. ಬಿ. ದೇಸಾಯಿಯವರು ಮಾತನಾಡಿ, ಇಂದು ಸಮಾಜ ಬಹಳಷ್ಟು ಬದಲಾವಣೆಯಾಗಿದೆ. ಸಮಾಜದಲ್ಲಿ ಎಷ್ಟು ಒಳ್ಳೆಯ ಕೆಲಸಗಳಾಗುತ್ತಿವೆಯೋ ಅಷ್ಟೇ ಕೆಟ್ಟ ಕೆಲಸಗಳೂ ಆಗುತ್ತಿವೆ. ಕೆಟ್ಟ ಕೆಲಸಗಳನ್ನು ಹತೋಟಿಗೆ ತರಬೇಕೆಂದರೆ, ಒಳ್ಳೆಯ ಮಾರ್ಗದರ್ಶಕರು ಬೇಕು. ಮೊದಲಿನಿಂದಲೂ ಉತ್ತರ ಕನರ್ಾಟಕ ಸರಕಾರದಿಂದ ನಿರ್ಲಕ್ಷಕ್ಕೆ ಒಳಪಟ್ಟಿದೆ. ಯಾವ ರಾಜಕಾರಣಿಯು ಇದರ ಅಭಿವೃದ್ಧಿ ಬಯಸಿಲ್ಲ. ಈ ಭಾಗದಿಂದ ಹೋದ ಜನಪ್ರತಿನಿಧಿಗಳೇ ಬೆಂಗಳೂರು ಅಭಿವೃದ್ಧಿ ಬಯಸುತ್ತಾರೆ, ಬೆಂಗಳೂರಿನಲ್ಲಿ ಮನೆ ಮಾಡಿಕೊಳ್ಳುತ್ತಾರೆ. ತಮ್ಮ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಇಂದು ರಾಜಕೀಯದಲ್ಲಿ ಮಯರ್ಾದೆ ಇಲ್ಲ. ಆದ್ದರಿಂದ ನಾನು ಹಿಂದೆ ಸರಿದಿದ್ದೇನೆ. ಸಮಾಜದ ಕಳಕಳಿ ಇದ್ದಲ್ಲಿ ಶಿಕ್ಷಣ ಸಂಸ್ಥೆಗಳು ಎಂದಾದರೂ ಬಡಮಕ್ಕಳಿಗೆ ತಮ್ಮ ಸಂಸ್ಥೆಗಳಲ್ಲಿ ಉಚಿತವಾಗಿ, ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತಿವೆ ಎನ್ನುವ ಬಗ್ಗೆ ಸಮಾಜಕ್ಕೆ ತಿಳಿಸಲಿ ಎಂದು ಖಾರವಾಗಿ ನುಡಿದರು.
ಧಾರವಾಡ ಶ್ರೀಕ್ಷೇತ್ರ ಮುರುಘಾಮಠದ ಪೂಜ್ಯಶ್ರೀ ಮ.ನಿ.ಪ್ರ. ಮಲ್ಲಿಕಾಜರ್ುನ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಂಕಲಗಿ ಎನ್.ಎಸ್.ಎಫ್ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಶಶಿರೇಖಾ ಚಂದ್ರಕಾಂತ ಬರಗಾಲಿ ಅವರನ್ನು ದತ್ತಿದಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಿ. ಚನ್ನವೀರಗೌಡ ಅಣ್ಣಾ ಶಿದ್ರಾಮಗೌಡ ಪಾಟೀಲರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಂಘದ ಕಾಯರ್ಾಧ್ಯಕ್ಷರಾದ ಶಿವಣ್ಣ ಬೆಲ್ಲದ, ಎಂ. ಯು. ಪಾಟೀಲ ಉಪಸ್ಥಿತರಿದ್ದರು. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ದತ್ತಿದಾನಿ ಸಿ. ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಿ ಆಶಯ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ, ಮನೋಜ ಪಾಟೀಲ, ಶಾಂತೇಶ ಗಾಮನಗಟ್ಟಿ ಹಾಗೂ ಎಂ. ವ್ಹಿ. ಪಾಟೀಲ, ಶಿದ್ರಾಮಣ್ಣ ಲಕ್ಷ್ಮೇಶ್ವರ, ಪ್ರಭಣ್ಣ ನಡಕಟ್ಟಿ, ಡಾ. ಮಲ್ಲಿಕಾಜರ್ುನ ಪಾಟೀಲ, ನಾಗರಾಜ ಪಟ್ಟಣಶೆಟ್ಟಿ, ಎಸ್. ಎಸ್. ಸೋಮಾಪುರ, ವೀರಣ್ಣ ಒಡ್ಡೀನ, ಎನ್. ಆರ್. ಬಾಳಿಕಾಯಿ, ಬಿ. ವಿ. ಶಿರೂರ, ರಾಜೇಂದ್ರ ಸಾವಳಗಿ, ಶ್ರೀನಿವಾಸ ವಾಡಪ್ಪಿ, ಬಸಲಿಂಗಯ್ಯ ಹಿರೇಮಠ, ಮಾರ್ಕಂಡೇಯ ದೊಡಮನಿ, ಚನಬಸಪ್ಪ ಅವರಾಧಿ, ಬಿ. ಕೆ. ಹೊಂಗಲ, ಎಂ. ಬಿ. ಹೆಗ್ಗೇರಿ, ಯರಗಟ್ಟಿ, ಕುಲಕಣರ್ಿ ಹಾಗೂ ಪಾಟೀಲ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.