ಗೆಲುವಿಗಾಗಿ ಹಲವಾರು ಬಾರಿ ಸೋಲನ್ನು ಭಾವಿಸಬೇಕಾಗುತ್ತದೆ-ಅಂತಿಮ ಪೊಂಗಲ್

One has to feel defeat several times to win—the ultimate Pongal

ಗೆಲುವಿಗಾಗಿ ಹಲವಾರು ಬಾರಿ ಸೋಲನ್ನು ಭಾವಿಸಬೇಕಾಗುತ್ತದೆ-ಅಂತಿಮ ಪೊಂಗಲ್ 

ಧಾರವಾಡ 13: ಯಾವುದೇ ಕ್ಷೇತ್ರದಲ್ಲಾದರೂ ಸತತ ಪರಿಶ್ರಮ, ತಾಳ್ಮೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಂತೂ ಪ್ರತಿದಿನ ಅಭ್ಯಾಸ ಅತಿ ಅವಶ್ಯ. ಸೋಲುಂಟಾದಾಗ ಕುಗ್ಗದೇ ಅದನ್ನೆ ಸವಾಲನ್ನಾಗಿ ಸ್ವೀಕರಿಸಿ, ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆಯಬೇಕೆಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ, ಅಂತರಾಷ್ಟ್ರೀಯ ಕುಸ್ತಿಪಟು, ಎರಡು ಬಾರಿ ವಿಶ್ವ ಚಾಂಪಿಯನ್, ಓಲಂಪಿಯನ್ ಕುಮಾರಿ. “ಅಂತಿಮ ಪಂಗಲ್‌” ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ 71ನೇ ಅಂತರ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್‌ ಕ್ರಿಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  

ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಒಂದು ಅವಿಭಾಜ್ಯ ಅಂಗ. ನಾವು ಕ್ರೀಡೆಯಲ್ಲಿ ಒಂದು ಬಾರಿ ಗೆಲ್ಲಬೇಕಾದರೇ, ಹಲವಾರು ಬಾರಿ ಸೋಲನ್ನು ಅನುಭವಿಸಬೇಕಾಗುತ್ತದೆ. ಇಂತಹ ಅತ್ಯುತ್ತಮ ವ್ಯವಸ್ಥಿತವಾದ ಕ್ರೀಡಾಕೂಟವನ್ನು ನೋಡಿ ಅತ್ಯಂತ ಸಂತಸವಾಗುತ್ತಿದೆ ಎಂದು ಹೇಳಿದರು. 

ಇನ್ನೋರ್ವ ಅತಿಥಿ ಏಷ್ಯನ್ ಓಲಂಪಿಯನ್ ಅಂತರಾಷ್ಟ್ರೀಯ ಕುಸ್ತಿಪಟು ಕುಮಾರಿ ಮನೀಷಾ ಅವರು ಮಾತನಾಡಿ ಕ್ರೀಡೆಗೆ ಯಾವುದೇ ಭೇದ ಭಾವವಿಲ್ಲ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಖಂಡಿತ ಸಾಧ್ಯ ಎಂದು ಹೇಳಿದರು.  

ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ಮಾತನಾಡಿ ಧಾರವಾಡ ಹಲವಾರು ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ. ಜೆ.ಎಸ್‌.ಎಸ್ ಅತ್ಯಂತ ಯಶಸ್ವಿಯಾಗಿ ಈ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರದ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. 

ಧ್ವಜಾರೋಹಣ ನೆರವೇರಿಸಿ ಕ.ವಿ.ವಿ ಯ ಕುಲಪತಿಗಳಾದ ಡಾ. ಎಂ.ಬಿ ಪಾಟೀಲ್ ಅವರು ಮಾತನಾಡಿ ಅಂತರಾಷ್ಟ್ರೀಯ ಕುಸ್ತಿಪಟುಗಳು ಧಾರವಾಡಕ್ಕೆ ಆಗಮಿಸಿ ನಮ್ಮ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಮೂಲಕ ಇಲ್ಲಿನ ಕ್ರೀಡಾಪಟುಗಳ ಸಹ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡಿದ್ದಾರೆ ಎಂದು ಹೇಳಿದರು. ಈ ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವ ಜೆ.ಎಸ್‌.ಎಸ್ ಸಂಸ್ಥೆಗೆ ಧನ್ಯವಾದಗಳು ತಿಳಿಸಿದರು. 

ಕ.ವಿ.ವಿ ಯ ಕುಲಸಚಿವರಾದ ಕೆ. ಚೆನ್ನಪ್ಪರವರು ಮಾತನಾಡಿ ವಿದ್ಯಾಕಾಶಿ ಧಾರವಾಡ ಕ್ರೀಡೆಗಳಿಗೂ ತವರುಮನೆ ಆಗಲಿ. ಇಲ್ಲಿಂದ ಹಲವಾರು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಹಾರೈಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಮಾತನಾಡಿ ಅಧ್ಯಯನದ ಜೊತೆಗೆ ಕ್ರೀಡೆಯಲ್ಲಿಯು ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಕ್ರೀಡೆಯಲ್ಲಿ ಫಲಿತಾಂಶ ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಇದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ನಾಯಕತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

ಜಿನೇಂದ್ರ ಕುಂದಗೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ, ಮಾತನಾಡಿದರು. ಶ್ರವಣಯೋಗಿ ವಂದಿಸಿದರು ಮಹಾಂತೀಯ ನಿರೂಪಿಸಿದರು. ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಮಹಾವೀರ ಉಪಾದ್ಯೆ, ಕೆ. ನಾಗಚಂದ್ರ ಉಪಸ್ಥಿತರಿದ್ದರು