ಗವಿಸಿದ್ಧೇಶ್ವರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಭಾನುವಾರ ಒಂದು ದಿನದ ಪ್ರಸಾದ ವ್ಯವಸ್ಥೆ

One day prasada arrangement for students of Gavisiddheshwar hostel on Sunday

ಗವಿಸಿದ್ಧೇಶ್ವರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ  ಭಾನುವಾರ ಒಂದು ದಿನದ ಪ್ರಸಾದ ವ್ಯವಸ್ಥೆ

ಕೊಪ್ಪಳ 22 :ಗವಿಮಠ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶ್ರೀಗಳ ಕ್ಲಾಸ್ ಮೆಟ್ಸ್‌ ನವರಿಂದ ಪ್ರಸಾದ ವ್ಯವಸ್ಥೆ - ವೃದ್ಧಾಶ್ರಮದಲ್ಲಿಯೂ ವೃದ್ಧರಿಗೂ ಊಟದ ವ್ಯವಸ್ಥೆ   ಕೊಪ್ಪಳ  ಗವಿಸಿದ್ಧೇಶ್ವರ ಮಹಾವಿದ್ಯಾಲಯದ 1997-98 ನೇ ಸಾಲಿನ  ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕ್ಲಾಸ್ ಮೆಟ್ಸ್‌ ನವರು  ಗವಿಸಿದ್ಧೇಶ್ವರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ  ಭಾನುವಾರ ಒಂದು ದಿನದ ಪ್ರಸಾದ ವ್ಯವಸ್ಥೆಯನ್ನು ಮಾಡಿಸಿದರು. ಗೋಧಿ ಹುಗ್ಗಿ, ಅನ್ನಸಾಂಬರ್ ಹಾಗೂ ಫಲ್ಯವನ್ನು ಮಾಡಿ, ಮಕ್ಕಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಖುದ್ದು ಶ್ರೀಗಳು ಸಹ ತಮ್ಮ ಪದವಿ ತರಗತಿ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ನಲ್ಲಿ ಕೆಲಕಾಲ ಕಳೆದರು. ಹಾಸ್ಟೆಲ್ ನಲ್ಲಿ ಅಳವಡಿಸಿರುವ ಹೊಸ ಹೊಸ ವ್ಯವಸ್ಥೆಗಳನ್ನು ತಮ್ಮ  ಪದವಿ ತರಗತಿಯವರಿಗೆ ತಾವೇ ವಿವರಿಸಿದರು. ವೃದ್ಧಾಶ್ರಮದಲ್ಲಿ ಊಟ ಹಿ ಇದಕ್ಕೂ ಮೊದಲು  ಸುರಭಿ ವೃದ್ಧಾಶ್ರಮದಲ್ಲಿ  ಅಲ್ಲಿದ್ದ ವೃದ್ಧರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿದರು.  ಅವರೊಂದಿಗೆ ಕೆಲಕಾಲ ಕಳೆದು, ಅವರ ಯೋಗಕ್ಷೇಮವನ್ನು ವಿಚಾರಿಸಿ, ಅವರೊಂದಿಗೆ ಕೆಲಕಾಲ ಕಳೆದರು. ಶ್ರೀಶೈಲ ಅಳವಂಡಿ, ಕನಕಪ್ಪ, ಬಸವರಾಜ ಒಂಟಿ, ಶಂಭು ಪಾಟೀಲ್, ಗುರು  ಈಳಿಗೇರ, ಸೋಮರಡ್ಡಿ ಅಳವಂಡಿ, ಗುರುಬಸವ ಹಿರೇಮಠ, ರಾಜಮಹ್ಮದ್, ಇಬ್ರಾಹಿಂ, ನಾಗನಗೌಡ, ಶರಣಪ್ಪ ಶೆಟ್ಟರ್, ಉಮೇಶ, ನಿಂಗರಾಜ, ಸಂಜೀವ ವಾಲ್ಮಿಕಿ,  ಗೀರೀಜಾ  ಪೊಲೀಸ್ ಪಾಟೀಲ್, ವೀಣಾ ದೇಶಪಾಂಡೆ, ಪ್ರಮೀಳಾ, ಸುಮಂಗಲಾ ಸಜ್ಜನ, ವಿಜಯಲಕ್ಷ್ಮಿ ಬಳ್ಳೊಳ್ಳಿ, ಗೀತಾ ಪತ್ತಾರ ಸೇರಿದಂತೆ ಸ್ನೇಹಬಳಗ ಇದ್ದರು. 22ಕೆಪಿಎಲ್22 ಕೊಪ್ಪಳ ನಗರದ  ಗವಿಸಿದ್ಧೇಶ್ವರ ಮಹಾವಿದ್ಯಾಲಯದ 1997-98 ನೇ ಸಾಲಿನ ಪದವಿ ತರಗತಿ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಿದರು. ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳು ಸಹ ಉಪಸ್ಥಿತರಿದ್ದರು.