ದಿ.26 ರಂದು ಕಟ್ಟಡ ಕಾರ್ಮಿಕರ ರಾಜ್ಯಮಟ್ಟದ ಬೃಹತ್ ಸಮಾವೇಶ
ಕೊಪ್ಪಳ 23: ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ (ಕೆ ಎಸ್ ಸಿ ಡಬ್ಲ್ಯೂ ಸಿ ಯು) ವತಿಯಿಂದ ಬೆಂಗಳೂರಿನ ಪುಟ್ಟಣ್ಣ ಚಟ್ಟಿ ಪುರ ಭವನ್ ದಲ್ಲಿ ದಿನಾಂಕ 26ರ ಗುರುವಾರ ಬೆಳಿಗ್ಗೆ 9:00 ಗಂಟೆಗೆ ಕಟ್ಟಡ ಕಾರ್ಮಿಕರ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದೆ ಎಂದು ಸಂಘದ ಜಿಲ್ಲಾ ಸಂಚಾಲಕ ಎಸ್ ಮಹದೇವಪ್ಪ ಹೇಳಿದರು.
ಅವರು ಸೋಮವಾರ ಇಲ್ಲಿನ ಪತ್ರಿಕಾ ಭವನ್ ದಲ್ಲಿ ಏರಿ್ಡಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಆವರು ರದ್ದುಪಡಿಸಿರುವ ಕಟ್ಟಡ ಕಾರ್ಮಿಕರ ಎರಡು ಕಾನೂನು ಪುನಃ ಸ್ಥಾಪನೆ ಮಾಡಬೇಕು ಇದರ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲಾಗುವುದು, ಕಾರ್ಮಿಕರಿಗೆ ಲೇಬರ್ ಕೋಡ್ ಗಳನ್ನು ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಯಲ್ಲಿ ಸಂಗ್ರಹವಾಗಿರುವ ಹಣವನ್ನು ಕೇಂದ್ರ ಸರ್ಕಾರ ಈ ಶ್ರಮ ನಲ್ಲಿ ನೋಂದಾಯಿತ ಕಾರ್ಮಿಕರಿಗೆ ವರ್ಗಾಯಿಸಬಾರದು, ಕಾರ್ಮಿಕರ ಪಿಂಚಣಿ ಹಣ 5000 ವರೆಗೆ ಹೆಚ್ಚಿಸಬೇಕು ಕಾರ್ಮಿಕರಿಗೆ ವಸತಿ ಸೌಕರ್ಯ ಒದಗಿಸಿಕೊಡಬೇಕು, ನೊಂದಣಿ ಮತ್ತು ಮರು ನೊಂದಣಿ ಪ್ರಕ್ರಿಯೆಯಲ್ಲಿ ಅನಾವಶ್ಯಕ ತೊಂದರೆಯನ್ನು ಕಾರ್ಮಿಕರಿಗೆ ಕೊಡಬಾರದು, ನೈಜ ಕಾರ್ಮಿಕರ ಅರ್ಜಿ ಪರಿಗಣಿಸಬೇಕು, ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ,ವೃತ್ತಿವಾರು ಮಂಡಳಿಗಳನ್ನು ಸ್ಥಾಪಿಸಿ ಸರ್ಕಾರದ ಬಜೆಟ್ ನಿಂದ ಶೇಕಡ ಮೂರರಿಂದ ಐದು ಪರ್ಸೆಂಟ್ ಹಣ ಮೀಸಲಿಟ್ಟು ಎಲ್ಲಾ ಆಸಗಂಟಿತ ಕಾರ್ಮಿಕರಿಗೆ ಸಾಮಾಜಿಕ ಸೌಲಭ್ಯ ಒದಗಿಸಬೇಕು, ಇತ್ಯಾದಿ ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಬೆಂಗಳೂರಿನಲ್ಲಿ ಇದೇ ದಿನ 26ರ ಗುರುವಾರ ಕಟ್ಟಡ ಕಾರ್ಮಿಕರ ರಾಜ್ಯಮಟ್ಟದ ಬೃಹತ್ ಸಮಾವೇಶ ಜರುಗಿಸಲಾಗುವುದು ಎಂದು ಜಿಲ್ಲಾ ಸಂಚಾಲಕ ಎಸ್ ,ಮಹದೇವಪ್ಪ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು,ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರುಗಳಾದ ಸಂಘಟನೆಯ ಮೈಲಪ್ಪ ಕಂಬದ ಮಟ್ಟಿ, ಬೀರ್ಪ ಲೇಬುಗೇರಿ ,ಸಂತೋಷ್ ಕೆ ಅಳವಂಡಿ ,ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.