21ರಂದು ಕನಕಗಿರಿಯಲ್ಲಿ ರೈತ ಹುತಾತ್ಮ ದಿನಾಚರಣೆ

ಲೋಕದರ್ಶನ ವರದಿ

ಕೊಪ್ಪಳ 15: ಕರ್ನಾಟಕ  ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇದೇ ತಿಂಗಳ 21ರಂದು ಕನಕಗಿರಿ ಎಪಿಎಂಸಿ ಯಾಡರ್್ನಲ್ಲಿ ರಾಜ್ಯ ಮಟ್ಟದ 39 ನೇ ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಮತ್ತು ರೈತರ ಬೃಹತ್ ಸಮಾವೇಶ ಸಂಘದ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘ ರಾಜ್ಯ ಉಪಾಧ್ಯಕ್ಷ ಬಸವನಗೌಡ ಪೋಲಿಸ್ ಪಾಟೀಲ್ ತಿಳಿಸಿದ್ದಾರೆ. 

ಅವರು ಸೋಮವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ರಾಜ್ಯಾದ್ಯಂತ ಹೋರಾಟದಲ್ಲಿ ಮಡಿದ ರೈತರ ನೆನಪಿಗಾಗಿ ರೈತರ ಹುತಾತ್ಮ ದಿನ ಆಚರಿಸಲಾಗುವುದು. ದೇಶದಲ್ಲಿ ರೈತರ ಜೀವನ ಡೋಲಾಯಮಾನವಾಗಿದೆ. ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ನಿರಂತರ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ರೈತರ ಗಮನ ಸೆಳೆಯಲು ಮತ್ತು ಆಗುತ್ತಿರುವ ಅನ್ಯಾಯ ಸರಿಪಡಿಸಲು ಕಾರ್ಯಕ್ರಮದ ಮೂಲಕ ಒತ್ತಾಯಿಸಲಾಗುವುದು ಎಂದರು.

ಮುಂದುವರೆದು ಮಾತನಾಡಿದ ಅವರು ರಾಜಸ್ತಾನದಲ್ಲಿ ಇತ್ತೀಚಿಗೆ ನಡೆದ ರೈತರ ಮೇಲಿನ ಪ್ರಕರಣ ತಗಿಸಲು ರೈತರ ಹೋರಾಟದಿಂದ ಯಶಸ್ವಿಯಾಗಿದೆ ಎಂದ ಅವರು ಕನಕಗಿರಿಯಲ್ಲಿ ನಡೆಯಲಿರುವ ರೈತರ ಹುತಾತ್ಮ ದಿನಾಚರಣೆಯ ಮೂಲಕ ರೈತರ ಸಂಘಟಿಸಿ ಅವರ ಸಮಸ್ಯಗಳ ಬಗೆಹರಿಸಲು ಮತ್ತು ಅವರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಈ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘಟನೆಗಳ ಭೇದ ಭಾವ ಮರೆತು ಪಾಲ್ಗೊಳ್ಳುವಂತೆ ಸಂಘ ರಾಜ್ಯ ಉಪಾಧ್ಯಕ್ಷ ಬಸವನಗೌಡ ಪೋಲಿಸ್ ಪಾಟೀಲ್ ಮನವಿಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಅಕ್ಕಮಹಾದೇವಿ ಪಾಟೀಲ್, ಬಸಮ್ಮ ತೊಂಡಿಹಾಳ, ಶಾರದ ಹಡಗಲಿ, ಶಿವಕುಮಾರ ಸೇರಿದಂತೆ ಅನೇಕರು ಇದ್ದರು.