ಶೋಷಿತ ಸಮುದಾಯಗಳ ಮಹಾ ಒಕ್ಕೂಟ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆ
ಧಾರವಾಡ 25 : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಉದ್ದೇಶದಿಂದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಧಾರವಾಡ ಪ್ರವಾಸಿ ಮಂದಿರದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ವೆಂಕಟೇಶ್ ಸಗಬಾಲ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು ಸರ್ವ ಧರ್ಮಿಯರು ಒಗ್ಗಟ್ಟಿನಿಂದ ಇಂತಹ ಜಯಂತಿಗಳ ಆಚರಣೆ ಮಾಡಬೇಕು. ಕಾರ್ಯಕ್ರಮದ ಸಂಘಟಿಕರು ಎಲ್ಲರನ್ನ ಒಗ್ಗೂಡಿಸುವ ಕೆಲಸ ಮಾಡಬೇಕು ಹಾಗೂ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಲು ತಿಳಿಸಿದರು. ಈ ಸಭೆಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ವೆಂಕಟೇಶ್ ಸಗಬಾಲ್ ಮಾತನಾಡಿ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ವಿವರಿಸಿದ್ದರು.ಮರಾಠ ಸಮಾಜದ ಮುಖಂಡರಾದ ಭೀಮಪ್ಪ ಕಸಾಯಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಮಹಾಪೌರ ದಾನಪ್ಪ ಕಬ್ಬೇರ್. ಮುಖಂಡರುಗಳಾದ ಅಶೋಕ್ ದೊಡ್ಡಮನಿ,ಕಲ್ಮೇಶ್ ಹಾದಿಮನಿ. ಆನಂದ್ ಮುಶನ್ ನವರ್. ಸಿಂಡಿಕೇಟ್ ಸದಸ್ಯ ಮಹೇಶ್ ಹುಲ್ಲಣ್ಣನವರ್, ಲಕ್ಷ್ಮಣ್ ಬಕಾಯಿ, ನಂದೀಶ್ ನಾಯ್ಕರ್, ಕಿಶೋರ್ ದಾಮೋದರ್, ಅಶೋಕ್ ಭಂಡಾರಿ, , ಸೇರಿದಂತೆ ಮೊದಲಾದವರು ಸಭೆಯಲ್ಲಿ ಮಾತನಾಡಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು ಒಟ್ಟಾರೆಯಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನವನ್ನ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹುಟ್ಟು ಹಬ್ಬದ ನಿಮಿತ್ಯ ಅವರಿಗೆ ಅಹಿಂದ್ ನಾಯಕರ ಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಜು ಕುಂದಗೋಳ, ಸಿದ್ದಣ್ಣ ಪ್ಯಾಟಿಯವರ, ಸಲೀಂ ಸಂಗನಮುಲ್ಲಾ, ಬಸವರಾಜ್ ಬಸಲಗುಂದಿ, ಶಂಕರ್ ದೊಡ್ಡಮನಿ,ಪಕೀರ್ಪ ಯಕ್ಕೇರಿ, ನಿಪ್ಪಾಣಿ. ರೋಣ, ಪಿಕೆ ನಿರ್ಲಕಟ್ಟಿ ಉಮರ್ ಖಾನಚಪ್ಪರಬಂದ್. ಶ್ರೀನಿವಾಸ್ ಉಣಕಲ್. ಸೇರಿದಂತೆ ಶೋಷಿತ ಸಮುದಾಯದ ಮುಖಂಡರುಗಳು ಇದ್ದರು