12 ರಂದು ಸಕ್ಕರೆ ಕಾಖರ್ಾನೆಯ ಮಾಲಿಕರ ಸಭೆ 13 ರಂದು ರೈತ ಮುಖಂಡರ ಸಭೆ

ಲೋಕದರ್ಶನ ವರದಿ

ಮುಧೋಳ 09: ಜಿಲ್ಲೆಯ ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ನ.12 ರಂದು ಸಕ್ಕರೆ ಕಾಖರ್ಾನೆಯ ಮಾಲಿಕರ ಸಭೆಯನ್ನು ಕರೆಯಲಾಗಿದ್ದು ಅವರ ಜೊತೆ ಮಾತನಾಡಿದ ಬಳಿಕ ನ.13 ರಂದು ರೈತ ಮುಖಂಡರ ಸಭೆ ಕರೆದು ಚಚರ್ಿಸುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಹೇಳಿದರು. 

ಶುಕ್ರವಾರ ಸಂಜೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ದಿ.ರಮೇಶ ಗಡದನ್ನವರ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ ನಾನು ಒಬ್ಬ ರೈತನಾಗಿದ್ದು ರೈತರ ಸಮಸ್ಯೆಗಳು ಏನು ಎಂಬುದರ ಕುರಿತು ನನಗೆ ಅರಿವು ಇದೆ,ಕಾರಣ ರೈತರ ಹೋರಾಟಕ್ಕೆ ನನ್ನದು ಸಂಪೂರ್ಣ ಬೆಂಬಲ ಇದ್ದು, ಪ್ರತಿವರ್ಷ ರೈತರು ಹೋರಾಟದ ಮೂಲಕವೇ ಕಬ್ಬಿನ ದರ ಪಡೆಯುವಂತಾಗಿದೆ ಈ ಪದ್ದತಿ ನಿಲ್ಲಬೇಕು, ಕಬ್ಬಿನ ದರ ಘೋಷಣೆ ಕುರಿತು ತಾವು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ಹಾಗೂ ಸಕ್ಕರೆ ಇಲಾಖೆಯ ಸಚಿವರ ಜೊತೆ ಮಾತನಾಡಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಗೊಳಿಸುವಂತೆ ತಾವು ಮನವಿ ಮಾಡಿಕೊಂಡಿರುವದಾಗಿ ತಿಳಿಸಿದರು.

ನಾನೊಬ್ಬ ವಿಧಾನ ಪರಿಷತ್ ಸದಸ್ಯನಾಗಿರುವದರಿಂದ ಸಕರ್ಾರ ಹಾಗೂ ಜಿಲ್ಲಾಡಳಿತ ಜೊತೆ ಚಚರ್ಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿರುವದಾಗಿ ತಿಳಿಸಿದ ಅವರು ರೈತರ ಹೋರಾಟಕ್ಕೆ ತಮ್ಮದು ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದ ಅವರು ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ದಿನಾಂಕದವರೆಗೆ ರೈತರು ಶಾಂತತೆಯಿಂದ ಹೋರಾಟ ನಡೆಸುವಂತೆ ಮನವಿ ಮಾಡಿದರು. 

ಹೋರಾಟಕ್ಕೆ ನನ್ನದು ಸಂಪೂರ್ಣ ಬೆಂಬಲ ಇದೆ, ಸಮ್ಮಿಶ್ರ ಸಕರ್ಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯೊಂದಿಗೆ ಹಾಗೂ ಸಕ್ಕರೆ ಆಯುಕ್ತರ (ನಿದರ್ೇಶಕರ)ಜೊತೆ ಮಾತನಾಡಿ ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚಚರ್ೆಮಾಡಿ ಕಬ್ಬಿಗೆ ಯೊಗ್ಯ ಬೆಲೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಮುಧೋಳ ಶಾಸಕ ಗೋವಿಂದ ಕಾರಜೋಳ ಹೇಳಿದರು. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ದಿ.ರಮೇಶ ಗಡದನ್ನವರ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಕಬ್ಬು ಬೆಳೆಗಾರರ ಹೋರಾಟದ ಸ್ಥಳಕ್ಕೆ ಗುರುವಾರದಂದು ಭೇಟಿ ನೀಡಿ ರೈತ ಹೋರಾಟಗಾರರ ಜೊತೆ ಕಬ್ಬು ಬೆಳೆಗಾರರ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಅವರು ಚಚರ್ಿಸಿದರು,ರಾಜ್ಯದಲ್ಲಿ ಬಿಜೆಪಿ ಸಕರ್ಾರ ಆಡಳಿತದಲ್ಲಿದ್ದಾಗ ಸಕ್ಕರೆ ಇಲಾಖೆಯ ನಿದರ್ೇಶಕರ ಹಾಗೂ ಕಬ್ಬು ಬೆಳೆಗಾರರ ಮುಖಂಡರ ಸಭೆಯನ್ನು ಕರೆದು ರೈತರಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ,ಈಗ ರಾಜ್ಯದಲ್ಲಿ ಸಮ್ಮಿಶ್ರ ಸಕರ್ಾರ ಆಡಳಿತದಲ್ಲಿದ್ದೂ ಇಲ್ಲದಂತಾಗಿದೆ ಸಕರ್ಾರ ಒಮ್ಮೆಯಾದರೂ ಕಬ್ಬು ಬೆಳೆಗಾರರ ಮುಖಂಡರ ಸಭೆ ಕರೆದು ಅವರ ಜೊತೆ ಮಾತನಾಡಿ ಬೇಡಿಕೆಗಳನ್ನು ಈಡೇರಿಸಬೇಕಾಗಿತ್ತು ಆದರೆ ಇದನ್ನು ಮಾಡದೆ ಇರುವುದು ಕಬ್ಬು ಬೆಳೆಗಾರರ ಬಗ್ಗೆ ಸಕರ್ಾರ ನಿರ್ಲಕ್ಷ್ಯಧೋರಣೆ ತಾಳಿರುವುದು ಕಂಡು ಬರುತ್ತದೆ ಎಂದರು. ರೈತಮುಖಂಡರಾದ ಕೆ.ಟಿ.ಪಾಟೀಲ, ದಯಾನಂದ ಪಾಟೀಲ, ಗೋವಿಂದಪ್ಪ ಗುಜ್ಜನವರ, ದುಂಡಪ್ಪ ಲಿಂಗರಡ್ಡಿ, ಜೆ.ಬಿ.ಕೋಪಕರ, ರಾಜೂಗೌಡ ಪಾಟೀಲ, ಉದಯಸಿಂಗ ಫಡತಾರೆ, ಬಸವಂತ ಕಾಂಬಳೆ ರಂಗನಗೌಡ ಪಾಟೀಲ, ಉದಯ ಸಾರವಾಡ, ಬಸವಂತ ಕಾಂಬಳೆ, ವಿಶ್ವನಾಥ ಉದಗಟ್ಟಿ, ಈರಪ್ಪ ಹಂಚಿನಾಳ, ಸುಭಾಷ ಶಿರಬೂರ, ಹನಮಂತ ನಬಾಬ, ಕಲ್ಮೇಶ ಹಣಗೋಜಿ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.