29ರಂದು ಡಾ ಡಿ.ಎಸ್. ಕರ್ಕಿ ಪ್ರಶಸ್ತಿ ಪ್ರದಾನ ಸಮಾರಂಭ
ಬೆಳಗಾವಿ 21: ಡಿಸೆಂಬರ್ 29ರಂದು ಡಾ ಡಿ.ಎಸ್. ಕರ್ಕಿ ಪ್ರಶಸ್ತಿ ಪ್ರದಾನ ಇಲ್ಲಿನ ಡಾ. ಡಿಎಸ್ ಕರ್ಕಿ ಪ್ರತಿಷ್ಠಾನ ಟ್ರಸ್ಟ್ ಪ್ರತಿ ವರ್ಷ ನೀಡುವ ಡಾ ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ 2024 ಗೆ ಪುರಸ್ಕೃತ 3 ಕೃತಿಗಳು ಆಯ್ಕೆಯಾಗಿವೆ. ಕುಮಾರಿ ಮಧು ಕಾರಗಿ, ಬ್ಯಾಡಗಿ ಇವರ ’ತೆರೆಯದ ಬಾಗಿಲು’ ಪ. ಗು. ಸಿದ್ದಾಪುರ, ಕೋಲಾರ ಇವರ ’ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತ’ ಹಾಗೂ ಸುಧಾ ಪಾಟೀಲ, ಬೆಳಗಾವಿ ಇವರ ’ಹೆಜ್ಜೆ ಗುರುತು’ ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿ ಪ್ರಧಾನ ಸಮಾರಂಭವು ರವಿವಾರ ದಿನಾಂಕ 29ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿದೆ. ಗದಗಿನ ತೋಂಟದಾರ್ಯ ಮಠದ ಪೂಜ್ಯರು ಡಾ ಸಿದ್ದರಾಮ ಸ್ವಾಮೀಜಿಯವರು ಸಾನಿಧ್ಯ ನೀಡಲಿದ್ದಾರೆ.ಇವರೊಡನೆ ತಮ್ಮ ಕೃತಿಗಳನ್ನು ಕಳಿಸಿದ ಎಲ್ಲಾ ಕವಿಗಳಿಗೂ ಹಾರ್ದಿಕವಾಗಿ ಅಭಿನಂದಿಸುತ್ತೇವೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ ಗೀರೀಶ್ ಕರ್ಕಿ ಮತ್ತು ಸತೀಶ್ ಕರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.