ಲೋಕದರ್ಶನ ವರದಿ
ಗದಗ: ಹಾಲುಮತ ಸಮಾಜದ ಧಾಮರ್ಿಕ ಶಕ್ತಿಯನ್ನು ಒಗ್ಗೂಡಿಸಲು ಇದೇ ನವೆಂಬರ್ 26ರಂದು ಕನಕ ಜಯಂತಿ ಅಂಗವಾಗಿ ದ್ವೀತಿಯ ಬಾರಿಗೆ ಕನಕ ಮಾಲಾಧಾರಣೆ ಅಭಿಯಾನ ಆರಂಭಿಸಲಾಗಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕನಕ ಮಾಲಾಧಾರಿಗಳಾಗಿ ಕಾಗಿನೆಲೆಯ ಶ್ರೀಮಠಕ್ಕೆ ಆಗಮಿಸಬೇಕೆಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಹೇಳಿದರು.
ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಕನಕ ಮಾಲಾಧಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಹಾಲುಮತ ಸಮುದಾಯವು ರಾಜಕೀಯವಾಗಿ ಶೈಕ್ಷಣಿಕವಾಗಿ ಹಾಗೂ ಆಥರ್ಿಕವಾಗಿ ಪ್ರಗತಿಯಲ್ಲಿದ್ದರೂ ಧಾಮರ್ಿಕವಾಗಿ ಹಾಲುಮತ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಹಾಗೂ ಯುವ ಸಮುದಾಯಕ್ಕೆ ಸ್ಫೂತರ್ಿ ತುಂಬಲು ಹಾಲುಮತ ಸಮಾಜದ ಧಾಮರ್ಿಕ ಶಕ್ತಿ ಕೇಂದ್ರವಾದ ಕಾಗಿನೆಲೆ ಗುರುಪೀಠದ ಶ್ರೀಗಳ ಅಪ್ಪಣೆ ಮೇರಿಗೆ ಕನಕ ಮಾಲಾಧಾರಿಗಳ ಅಭಿಯಾನ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕನಕ ಮಾಲಾಧಾರಿಗಳಾಗಿ ಕಾಗಿನೆಲೆ ಶ್ರೀಮಠದಲ್ಲಿ ನಡೆಯುವ ಕನಕ ಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ ಅವರು ಎಲ್ಲ ಸಮಾಜದ ಬಾಂಧವರೂಂದಿಗೆ ಅನ್ಯೋನ್ಯವಾಗಿ ಜೀವನ ನಡೆಸುತ್ತಿರುವ ಹಾಲುಮತ ಸಮುದಾಯದವರು ಯಾರ ಭಾವನೆಗಳಿಗೂ ತೊಂದರೆಯಾಗದಂತೆ ಕನಕ ಮಾಲಾಧಾರಿಗಳಿಗೆ ಕಾಗಿನೆಲೆ ಶ್ರೀಮಠಕ್ಕೆ ಆಗಮಿಸಬೇಕೆಂದು ಹೇಳಿದರು.
ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ ಅವರು ಮಾತನಾಡಿ, ಇಂದಿನ ಯುವ ಸಮೂಹ ಆಧುನಿಕತೆಗೆ ಮಾರುಹೋಗಿ ನಮ್ಮ ಹಾಲುಮತ ಸಂಸ್ಕೃತಿಯನ್ನು ದೂರ ಮಾಡುತ್ತಿದ್ದಾರೆ. ಧಾರ್ಶನಿಕರನ್ನು ಗೌರವಿಸುವ ಹಾಗೂ ಯುವ ಸಂಸ್ಕಾರವನ್ನು ನೀಡಲು ಕನಕ ಮಾಲೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹಾಲುಮತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸೋಮನಗೌಡ ಪಾಟೀಲ, ಸಂಘಟನಾ ಕಾರ್ಯದಶರ್ಿಗಳಾದ ರಮೇಶ ಹೊನ್ನಿನಾಯ್ಕರ್, ಮುತ್ತು ಜಡಿ, ತಾಲ್ಲೂಕ ಅಧ್ಯಕ್ಷ ಮಹೇಶ ಕೆರಕಲಮಟ್ಟಿ, ಪದಾಧಿಕಾರಿಗಳಾದ ಮಂಜುನಾಥ ಜಂತ್ಲಿ, ವಸಂತ ಅಗಸಿಮನಿ, ನಾಗರಾಜ ಅಣ್ಣಿಗೇರಿ, ಚಂದ್ರು ಮುದೇನಗುಡಿ, ದೇವಪ್ಪ ಹದ್ಲಿ, ದೇವಪ್ಪ ಕರಿಮೇಟಿ, ದೊಡ್ಡಹನಮಪ್ಪ ಗಂಗಪ್ಪನವರ, ಸಂಗಪ್ಪ ಮಾರನಬಸರಿ, ಮೈಲಾರಪ್ಪ ಸಾಸ್ವಿಹಳ್ಳಿ,ಭೀಮಪ್ಪ ನೀರಲಗಿ, ತಿಪ್ಪಣ್ಣ ಗಂಗಪ್ಪನವರ, ಶಿವಪುತ್ರಪ್ಪ ಗಂಗಪ್ಪನವರ ಸೇರಿದಂತೆ ಹುಯಿಲಗೋಳ ಗ್ರಾಮದ ಗುರು-ಹಿರಿಯರು ಪಾಲ್ಗೊಂಡಿದ್ದರು.