ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿ ಇಲ್ಲಾ ಮನೆಗೆ ನಡೆಯಿರಿ: ಹಾಲಪ್ಪ ಎಚ್ಚರಿಕೆ

ಲೋಕದರ್ಶನ ವರದಿ

ಯಲಬುಗರ್ಾ 06: ಗ್ರಾಮ ಪಂಚಾಯತ ಪಿಡಿಓಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ನೀವು ಕರ್ತವ್ಯ ನಿರ್ವಹಿಸುವ ಹಳ್ಳಿಗಳ್ಳಿ ವಾಸ್ತವ್ಯ ಹೂಡದೆ ಕೇವಲ ಪಟ್ಟಣದಲ್ಲಿ ಇದ್ದರೆ ಜನರ ಸಮಸ್ಯೆಗೆ ನಿಮ್ಮಿಂದ ಏನು ಮಾಡಲು ಸಾದ್ಯವಿಲ್ಲಾ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಬರಗಾಲದ ನಿಮಿತ್ಯ ಕುಡಿಯುವ ನೀರು ಹಾಗೂ ಇನ್ನೀತರ ಸೌಲಭ್ಯ ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಅವರು ಮಾತನಾಡಿದರು.

ನೀವು ಸರಕಾರಿ ಕೆಲಸ ಸಿಗುವವರೆಗೂ ಒಂದು ರೀತಿ ಇದ್ದು ಸರಕಾರಿ ಕೆಲಸ ಸಿಕ್ಕ ಕೂಡಲೇ ನೀವು ಎಲ್ಲರಂತೆ ಆಗುವದು ಯಾವ ನ್ಯಾಯ? ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸದೆ ನಿಮ್ಮ ಪಾಡಿಗೆ ನೀವು ಯಾವಾಗಲೋ ಹೋಗಿ ಬಂದರೆ ಸಾರ್ವಜನಿಕರ ಪಾಡೆನು ನಿಮಗೆ ತೊಂದರೆ ಇದ್ದರೆ ಕೆಲಸ ಬಿಟ್ಟು ಬಿಡಿ ಆದರೆ ಬೇಜವಾಬ್ದಾರಿ ಕೆಲಸ ಮಾಡಿದರೆ ಸಹಿಸಲು ಸಾದ್ಯವಿಲ್ಲ ನಿಮ್ಮ ನಿರ್ಲಕ್ಷದಿಂದ ನಮ್ಮ ತಾಲೂಕಿನಲ್ಲಿ ಯಾವ ಯೋಜನೆಗಳು ಸಂಪೂರ್ಣ ಯಶಸ್ವಿಯಾಗುತ್ತಿಲ್ಲಾ ಸರಕಾರದಿಂದ ನೂರಾರು ಕೋಟಿ ಅನುದಾನ ಬಂದರು ಪ್ರಯೋಜನವಾಗುತ್ತಿಲ್ಲಾ ಯಾವುದೋ ಏಜನ್ಸಿಯವರು ಬಂದು ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ಅರೆಬರೆ ಕಾಮಗಾರಿಗಳನ್ನ ಮಾಡಿ ಹಣ ಎತ್ತಿಕೊಂಡು ಹೋದರು ಸಹಿತ ನಿಮಗೆ ಮಾಹಿತಿ ಇಲ್ಲಾ ಎಂದರೆ ನೀವು ಮಾಡುವ ಕೆಲಸಗಳಾದರು ಏನು? ಎಂದು ಅಧಿಕಾರಿಗಳಿಗಳನ್ನ ತರಾಟೆಗೆ ತೆಗೆದುಕೊಂಡರು.

ಗ್ರಾಪಂ ಪಿಡಿಓಗಳ ಮೇಲೆ ಸಾಕಷ್ಟು ಜವಾಬ್ದಾರಿ ಇದ್ದು ನಿಮ್ಮ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ ಎಂದರೆ ಹೇಗೆ, ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕು ಇಗಾಗಲೇ ಕುಡಿಯುವ ನೀರಿಗಾಗಿ ಹಣ ಮಂಜೂರು ಆಗಿದ್ದು ಸಮಸ್ಯೆಗಳಿರುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನ ಪರಿಹರಿಸಿ ಜನತೆಗೆ ಶುದ್ಧ ನೀರು ಒದಗಿಸಬೇಕು. ತಾಲೂಕಿನಲ್ಲಿ ಬರಗಾರವಿರುವದರಿಂದ ಯುವ ಜನತೆ ಕೂಲಿ ಅರಸಿ ಗುಳೆ ಹೋಗುವ ಸಂಬವವಿದೆ ಆದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಸಲ ನೀಡಬೇಕು.

ಗ್ರಾಪಂನಲ್ಲಿ ಆಶ್ರಯ ಮನೆ ಹಂಚಿಕೆಯು ಒಂದು ವ್ಯವಹಾರವಾಗಿದ್ದು ತಿಳಿದು ಬಂದಿದೆ ಬಡ ಜನತೆ ನೀವು ಕೇಳಿದಷ್ಟು ಹಣ ಎಲ್ಲಿಂದ ತರಬೇಕು ಇದು ನಿಜವಾದ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಿರಿ ಎಂದರು.

ಗ್ರಾಮ ಲೆಕ್ಕಾಧಿಕಾರಿಗಳನ್ನ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಎಷ್ಟು ಹಳ್ಳಿಗಳಿಗೆ ಸ್ಮಶಾನವಿಲ್ಲಾ ಎಂಬುವ ಮಾಹಿತಿ ನಿಮಗೆ ಇಲ್ಲಾ ಎಂದರೆ ನೀಮ್ಮ ಕರ್ತವ್ಯವಾದರು ಏನು, ರೈತರನ್ನು ಅಲೆದಾಡಿಸುವ ಕೆಲಸವಾಗಬಾರದು ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಇಲ್ಲವಾದಲ್ಲಿ ನಿಮ್ಮನ್ನೆ ಹೋಣೆಗಾರರನ್ನಾಗಿ ಮಾಡಲಾಗುವದು ಕುಡಿಯುವ ನೀರನ್ನು ಒದಗಿಸುವ ಜವಾಬ್ದಾರಿ ನಿಮ್ಮ ಮೇಲು ಇದೆ ಅದನ್ನು ಸರಿಯಾಗಿ ನಿರ್ವಹಿಸಿ ಎಂದರು.

ತಹಶೀಲ್ದಾರ ರಮೇಶ ಅಳವಂಡಿಕರ್, ಕುಕನೂರು ತಹಸೀಲ್ದಾರ ರವಿರಾಜ ದಿಕ್ಷೀತ್, ಕೃಷಿ ಇಲಾಖೆಯ ಅಧಿಕಾರಿ ಹಾರೋನ್ ರಷೀದ್, ತಾಪಂನ ಹನುಮಂತಗೌಡ ಪಾಟೀಲ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓಗಳು, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.