ಸಂಬರಗಿ: ಅಧಿಕಾರಿಗಳು ರಸ್ತೆ ಕಾಮಗಾರಿ ಪರಿಶೀಲನೆ

ಲೋಕದರ್ಶನ ವರದಿ

ಸಂಬರಗಿ 16:  ಜಂಬಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಾಮಾಜಿಕ ಪರಿಶೋಧನಾ ಅವಧಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಅಥಣಿ ತಾಲೂಕಾ ಸಾಮಾಜಿಕ ಪರಿಶೋಧನಾ ಸಂಯೋಜಕರು ದೇಮಪ್ಪ ಮುಗಡ್ಲಿ ಇವರು ಪರಿಶೀಲನೆ ಮಾಡಿ ಸೂಚನೆ ನೀಡಿದರು.

ಜಂಬಗಿ ಗ್ರಾಮದ ಅಪ್ಪಾ ಚವ್ಹಾನ ಸೀಮೆಯಿಂದ ರಾವು ಭಾತಮಾರೆ ಸೀಮೆವರೆಗೆ ರಸ್ತೆ ನಿಮರ್ಾಣ, ಶಿವನೂರ ಗ್ರಾಮದ ಮೇಟ್ರಿಕ ಪೂರ್ವ ವಸತಿ ನಿಲಯದ ಕಂಪೌಂಡ ನಿಮರ್ಾಣ, ಜಂಬಗಿ ಗ್ರಾಮದ ರಾಮ ಪಾಟೀಲ ಮನೆಯಿಂದ ನರೋಟೆ ತೋಟದ ವರೆಗೆ ರಸ್ತೆ ನಿಮರ್ಾಣ. ಕಲ್ಲೋತ್ತಿ ಗ್ರಾಮದಲ್ಲಿ ಒಳ ಚರರಂಡಿ, ಹಣಮಾಪೂರ ಗ್ರಾಮದಲ್ಲಿ ರಸ್ತೆ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಪಂಚಾಯತಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಈ ವೇಳೆ ಪಂಚಾಯತಿ ಅಧಿಕಾರಿಯಾದ ಸೋಮನಾಥ ಕುಂಬಾರ, ಪ್ರಶಾಂತ ವಾಘಮಾರೆ, ವಿಜಯ ಉಪ್ಪಾರ ಹಾಜರಿದ್ದರು.