ಬೆಳೆ ಅಂದಾಜು ಸಮೀಕ್ಷೆಗೆ ನೇಮಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ

ಕೊಪ್ಪಳ 18: ಬೆಳೆ ಅಂದಾಜು ಸಮೀಕ್ಷೆ ಕಾರ್ಯಕ್ಕೆ ನೇಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಬೆಳೆ ಕಟಾವು ಕಾರ್ಯಕರ್ತರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಅವರು (ಜುಲೈ.18) ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಆಥರ್ಿಕ ಮತ್ತು ಸಾಂಖ್ಯಿಕ ನಿದರ್ೇಶನಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ತಾಲ್ಲೂಕಾ ಮಟ್ಟ ಹಾಗೂ ಗ್ರಾಮ ಪಂಚಾಯತ ಮಟ್ಟದ ಅಧಿಕಾರಿಗಳಿಗೆ  ಹಮ್ಮಿಕೊಂಡಿದ್ದ ಬೇಳೆ ಕಟಾವು ಪ್ರಯೋಗಗಳ ತರಬೇತಿ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.   

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಆಹಾರ ಮತ್ತು ಆಹಾರೇತರ ಬೆಳೆಗಳ ಸರಾಸರಿ ಇಳುವರಿ ಭಿತ್ತನೆಗೆ ಬೆಳೆಗಳ ಆದ್ಯತೆ, ಬೆಳೆಗೆ ಬರುವ ಕೀಟ, ರೋಗ ಬಾಧೆಗಳು, ಬೆಳೆ ನಷ್ಟ ಮುಂತಾದವುಗಳನ್ನು ತಿಳಿಯಲು ಸಕರ್ಾರ ಬೆಳೆ ಸಮೀಕ್ಷೆಯನ್ನು ಆರಂಭಿಸಿದೆ.  ಇದಕ್ಕೆ ನೇಮಿಸಿದ ಮೂಲ ಕಾರ್ಯಕರ್ತರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು.  ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಹಂತ ಹಂತವಾಗಿ ಕಾರ್ಯನಿರ್ವಹಿಸುತ್ತಿವೆ. ಸಮೀಕ್ಷೆ ಕಾರ್ಯವು ರೈತರಿಗೆ ಬೆಳೆ ವಿಮೆ ಸೇರಿದಂತೆ ಸಕರ್ಾರದ ಇತರ ಯೋಜನೆಗಳಿಗೆ ಪೂರಕವಾಗಿರುವುದರಿಂದ ಈ ಕಾರ್ಯಕ್ಕೆ ನೇಮಿಸಿದ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು.  ಕೃಷಿ ಇಲಾಖೆಯಿಂದ ಬಿಡುಗಡೆಯಾದ ತಂತ್ರಾಂಶವನ್ನು ಬಳಸಿಕೊಂಡು ವಿಮಾ ಅಧಿಕಾರಿಗಳೊಂದಿಗೆ ನಿಯಮಾನುಸಾರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.  ಯಾವುದೇ ನಿರ್ಲಕ್ಷ್ಯ ತೋರಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಬೆಳೆ ಕಟಾವು ಕಾರ್ಯಕರ್ತರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕೃಷಿ ಇಲಾಖೆಯ ಜಂಟಿ ನಿದರ್ೇಶಕಿ ಶಬಾನ ಎಂ. ಶೆಖ್ರವರು ಮಾತನಾಡಿ, 2016-17 ನೇ ಸಾಲಿನಿಂದ ತಂತ್ರಾಂಶ ಆಧಾರಿತ ಬೆಳೆ ಸಮೀಕ್ಷೆ ನಡೆಯುತ್ತಿದೆ.  ಅಧಿಕಾರಿಗಳು ಈ ತಂತ್ರಾಂಶದ ಕುರಿತು ಸಂಪೂರ್ಣ ತಿಳಿದುಕೊಂಡು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.  ಬೆಳೆ ಸಮೀಕ್ಷೆಯ ಎಲ್ಲ ಹಂತದ ಪ್ರಕ್ರಿಯೆ ಕುರಿತು ತಂತ್ರಾಂಶದಲ್ಲಿ ಮಾಹಿತಿ ಇದೆ.  ಅದರನುಸಾರ ಕಟಾವಿನ ಸಮಯದಲ್ಲಿ ವಿವಿಧ ಹಂತಗಳ ಛಾಯಾ ಚಿತ್ರಗಳನ್ನು ಮತ್ತು ವಿಡಿಯೋವನ್ನು ಮಾಡುವುದು ಕಡ್ಡಾಯ.  ಒಂದೇ ತೆರನಾದ ಛಾಯಚಿತ್ರ ಇರದಂತೆ ಎಚ್ಚರ ವಹಿಸಿ. ಇದರಿಂದ ವಿಮಾ ಕಂಪನೆಯವರ ಆಕ್ಷೇಪಣೆಗಳನ್ನು ನಿರ್ವಹಿಸಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.  

ತೋಟಗಾರಿಕೆ ಇಲಾಖೆಯ ಉಪನಿದರ್ೇಶಕ ಕೃಷ್ಣ ಉಕ್ಕುಂದರವರು ಮಾತನಾಡಿ, ಬೆಳೆ ಸಮೀಕ್ಷೆ ತಂತ್ರಾಂಶವು ವರ್ಷದಿಂದ ವರ್ಷಕ್ಕೆ ಉನ್ನತೀಕರಣಗೊಳ್ಳುತ್ತಿದೆ.  ಅದಕ್ಕೆ ತಕ್ಕಂತೆ ಅಧಿಕಾರಿಗಳು ತಂತ್ರಾಂಶದ ಹೊಸ ಕಾರ್ಯಶೈಲಿಯನ್ನು ಅರಿತು ಬೆಳೆ ಅಂದಾಜು ವಿಮೆ ಸಮೀಕ್ಷೆಯನ್ನು ನಡೆಸಬೇಕು.  ಬೆಳೆ ವಿಮೆಯ ಲಾಭವನ್ನು ಜಿಲ್ಲೆಯ ರೈತರಿಗೆ ಒದಗಿಸಬೇಕು.  ಈಗಾಗಲೇ ಸಮೀಕ್ಷಾ ಅಧಿಕಾರಿಗಳಿಗೆ ಒದಗಿಸಲಾದ ಯೋಜನಾ ಪಟ್ಟಿಯಲ್ಲಿ ನೀಡಲಾದ ಬೆಳೆಗಳ ಸಮೀಕ್ಷೆಯನ್ನು ಮಾತ್ರ ಮಡಬೇಕು. ನೀರಾವರಿ ಮತ್ತು ಮಳೆ ಆಶ್ರಿತ ಬೆಳೆ ಇದ್ದರೆ ಆಯಾ ಬೆಳೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.  ಪ್ರತಿ ಪ್ರಯೋಗಕ್ಕೂ ಮೂಲ ಸವರ್ೇ ನಂಬರ್ ಸೇರಿದಂತೆ ಹೆಚ್ಚುವರಿಯಾಗಿ ಅದಕ್ಕೆ 4 ಸವರ್ೇ ನಂಬರ್ಗಳನ್ನು ಅಪಲೋಡ್ ಮಾಡಬೇಕು.  ಆಯ್ಕೆಯಾದ ಸವರ್ೇ ನಂಬರಿನ ರೈತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಟಾವಿನ ದಿನಾಂಕ ಮತ್ತು ಸಮಯವನ್ನು ಒಂದು ದಿನ ಮುಂಚಿತವಾಗಿ ವಿಮಾ ಕಂಪನಿಯ ಅಧಿಕಾರಿಗಳಿಗೆ ತಿಳಿಸಬೇಕು.  ಬೆಳೆ ಸಮೀಕ್ಷೆ ಕಾರ್ಯವನ್ನು ಸಿ.ಸಿ.ಇ ನಿಯಮದ ಪ್ರಕಾರವೇ ಕೈಗೊಳ್ಳಬೇಕು ಎಂದು ಬೆಳೆ ಸಮೀಕ್ಷೆಯ ವಿವಿಧ ಹಂತಗಳು ಹಾಗೂ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.  

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿರವರು ಮಾತನಾಡಿ, ಇಲಾಖೆ ತಂತ್ರಾಂಶವು ಸಂಪೂರ್ಣ ಕನ್ನಡ ಭಾಷೆಯಲ್ಲಿಯೇ ಇದ್ದು, ಸಮೀಕ್ಷೆ ಕಾರ್ಯಕ್ಕೆ ಸಹಕಾರಿಯಾಗಿದೆ.  ನಮುನೆ-1 ಮತ್ತು ನಮೂನೆ-2 ನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಕಡ್ಡಾಯವಾಗಿ ಸಮೀಕ್ಷೆಗೆ ನೇಮಿಸಿದ ಮೂಲಕಾರ್ಯಕರ್ತರೇ ತಂತ್ರಾಂಶದಲ್ಲಿ ಭತರ್ಿ ಮಾಡಬೇಕು ಹಾಗೂ ಕ್ಷೇತ್ರ ಭೇಟಿಗೆ ಮೂಲಕಾರ್ಯಕರ್ತರೆ ಖುದ್ದು ಹಾಜರಾಗಬೇಕು.  ಪ್ರಸಕ್ತ ವರ್ಷ ಏಐಸಿ ವಿಮಾ ಕಂಪನಿಯು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ಆ ಕಂಪನಿ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ಬೆಳೆ ಕಟಾವು ದಿನ ಅವರನ್ನು ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕಾಯರ್ಾಗಾರದಲ್ಲಿ ಕೃಷಿ ಇಲಾಖೆಯಿಂದ ಬೆಳೆ ಕಟಾವಿಗೆ ಸಂಬಂಧಿಸಿದ ಕಿಟ್ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.  ತರಬೇತಿ ಕಾಯರ್ಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ರವರು ಆಗಮಿಸಿ ಬೆಳೆ ಕಟಾವು ಕಾರ್ಯಕರ್ತರಿಗೆ ಬೆಳೆ ಕಟಾವು ಕಿಟ್ಗಳನ್ನು ವಿತರಿಸಿದರು.  ನಂತರ ಮಾತನಾಡಿ ಬೆಳೆ ಕಟಾವು ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಿ.  ಕರ್ತವ್ಯದಲ್ಲಿ ಯಾವುದೇ ಲೋಪದೋಷಗಳು ಇರಬಾರದು.  ತಮಗೆ ನೀಡಲಾದ ಕ್ಷೇತ್ರಗಳಿಗೆ ಭೇಟಿ ನೀಡಿ ಸರಿಯಾಗಿ ನಿಯಮಾನುಸಾರವಾಗಿ ಸಮೀಕ್ಷೆಯನ್ನು ಮಾಡಲೆಬೇಕು.  ತಪ್ಪಿದಲ್ಲಿ ನಿಧರ್ಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.