ಬೆಳಗಾವಿ27 : ರಾಜ್ಯದ ಗಡಿ ಪ್ರದೇಶಗಳಲ್ಲಿ ಅನ್ಯ ಭಾಷಿಕರೊಂದಿಗೆ ಸೌಹಾರ್ದತೆಯನ್ನು ಬೆಳೆಸುವುದರೊಂದಿಗೆ ಕನ್ನಡಿಗರ ಭಾಷಾ ಸ್ವಾಬಿಮಾನದ ಜಾಗೃತಿ ಮೂಡಿಸಲು ಜಾಗೃತಿಯಾತ್ರೆಯನ್ನು ನವೆಂಬರ್ 5 ರಂದು ಬೆಂಗಳೂರಿನ ಟೌನಹಾಲ್ ಮುಂಬಾಗದಲ್ಲಿ ಉದ್ಘಾಟನೆ ಗೊಳಿಸಲಾಗುವುದೆಂದು ಕನರ್ಾಟಕ ಶುದ್ದಿಕರಣ ವೇದಿಕೆಯ ರಾಜ್ಯಾದ್ಯಕ್ಷ ಹೆಚ್ಚ್.ಕೃಷ್ಣಪ್ಪ ಗುಣಸಾಗರ ಹೇಳಿದರು.
ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದ 52 ಗಡಿ ಪ್ರದೇಶಗಳಲ್ಲಿ ಕನ್ನಡ ಬಾವೈಕ್ಯತೆಯನ್ನು ಹೆಚ್ಚಿಸಬೇಕು, ಕನ್ನಡಿಗರಿಗೆ ಅನ್ಯ ಬಾಷಿಗರೊಂದಿಗೆ ಸೌಹಾರ್ದತೆಯನ್ನು ಬೆಳೆಸುವದು, ಕನ್ನಡ ಬಾಷೆ ರಾಜ್ಯದಲ್ಲಿ ಪ್ರಥಮ ಆದ್ಯತೆ ನಿಡಬೇಕು ಎಂದು ಕನ್ನಡಿಗರ ಸ್ವಾಭಿಮಾನದ ಕನ್ನಡಾಂಭೆಯ ಜಾಗೃತಿ ಯಾತ್ರೆಯನ್ನು ನವೆಂಬರ್ 5 ರಂದು ಬೆಂಗಳೂರಿನ ಟೌನಹಾಲ್ ಮುಂಬಾಗದಲ್ಲಿ ಉದ್ಘಾಟನೆಗೊಂಡು 17 ದಿನಸ ಗಡಿ ಪ್ರದೇಶದಲ್ಲಿ ಕನ್ನಡಿಗರ ಅಭಿಮಾನದ ತೇರು ಸಾಗುತ್ತದೆ ಎಂದರು.ಹಾಗೂ ಮೂರು ತಿಂಗಳಿಂದಲೂ ಈ ಕಾರ್ಯಕ್ರಮದ ಸಕಲ ಸಿದ್ಧತೆಯನ್ನು 32 ತಾಲೂಕಿನ ಮುಖಂಡರು ಜೊತೆಗೂಡಿ ಯಶಸ್ವಿಗಾಗಿ ನಡೆಸಲಿದ್ದಾರೆಂದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಸುರೇಶ ಕುರಂಗಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಲತಾ ಕಾಂಬ್ಳೆ, ರವಿ ಕಾಂಬ್ಳೆ, ಗಂಗಾಧರ ಹಿರೇಮಠ, ರೇಣುಕಾ ಡಾಂಗೆ, ರೋಹಿನಿ ಕಾಂಬ್ಳೆ, ಮತ್ತಿತರರು ಉಪಸ್ಥಿತರಿದ್ದರು.