ನ. 3ರಿಂದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ, ಜನಸಂಪರ್ಕ ಸಭೆ

ಧಾರವಾಡ 31: ಸಕರ್ಾರದ ಆದೇಶದಂತೆ ಧಾರವಾಡ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಪ್ರತಿ ತಿಂಗಳಿಗೆ ಒಂದು ದಿನ ಜಿಲ್ಲೆಯ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನಸಂಪರ್ಕ ಸಭೆಯನ್ನು ನಡೆಸುತ್ತಿದ್ದಾರೆ. ಅದರಂತೆ ನವೆಂಬರ್ ತಿಂಗಳ 3 ಮತ್ತು 4 ರಂದು ಧಾರವಾಡ ತಾಲ್ಲೂಕಿನ ಉಪ್ಪಿನಬೆಟ್ಟಗೆರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಮತ್ತು ಜನಸಂಪರ್ಕಸಭೆಯನ್ನು ಆಯೋಜಿಸಲಾಗಿದೆ.

            ಕುರಿತು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿತು.

                 ನವೆಂಬರ್ 3 ಸಂಜೆ ಉಪ್ಪಿನಬೆಟ್ಟಗೇರಿ ಗ್ರಾಮಕ್ಕೆ ತೆರಳುವ ಜಿಲ್ಲಾಧಿಕಾರಿಗಳು ಅಂದು ರಾತ್ರಿ ಗ್ರಾಮದಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 4 ರಂದು ಬೆಳಿಗ್ಗೆ ಗ್ರಾಮದಲ್ಲಿ ಶ್ರಮದಾನ ಹಾಗೂ ಕೆರೆ ಸ್ವಚ್ಚತೆ ಕಾರ್ಯದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಭಾಗವಹಿಸುವರು. ನಂತರ ಬೆಳಿಗ್ಗೆ 10:30 ರಿಂದ ಆರಂಭವಾಗುವ ಜನಸಂಪರ್ಕಸಭೆಯಲ್ಲಿ ಭಾಗವಹಿಸುವರು. ಸಂದರ್ಭದಲ್ಲಿ ಗ್ರಾಮಸ್ಥರ ಹಾಗೂ ಸುತ್ತಲಿನ ಗ್ರಾಮಗಳ ಜನರ ಕುಂದುಕೊರತೆಗಳನ್ನು ಆಲಿಸಿ, ಅಜರ್ಿಗಳನ್ನು ಸ್ವೀಕರಿಸುವರು. ಮತ್ತು  ಸಾಧ್ಯವಿರುವ ದೂರುಗಳನ್ನು  ಸ್ಥಳದಲ್ಲಿಯೇ ಪರಿಹರಿಸಲು ಸೂಕ್ತ ಕ್ರಮ  ಜರುಗಿಸುವರುಇಂದಿನ ಸಭೆಯಲ್ಲಿ ನೂಲ್ವಿ ಗ್ರಾಮ ಮತ್ತು ಹಿರೇಹೊನ್ನಳ್ಳಿ ಗ್ರಾಮದ ಜನಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರಿಂದ  ಸ್ವೀಕರಿಸಿದ ದೂರು, ಬೇಡಿಕೆಯ ಅಜರ್ಿಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ  ಹುಬ್ಬಳ್ಳಿ ಹಾಗೂ ಕಲಘಟಗಿ ತಹಶೀಲ್ದಾರರಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು ಮತ್ತು ವಿವಿಧ ಇಲಾಖೆಗಳು ಸಾರ್ವಜನಿಕರ ಅಹವಾಲುಗಳನ್ನು ಸೂಕ್ತ ರೀತಿಯಲ್ಲಿ  ವಿಲೇವಾರಿ ಮಾಡಿರುವ ಬಗ್ಗೆ ವಿವರ ಪಡೆದರು.

                ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಲ್ಲಾ ಪಂಚಾಯತ ಉಪ ಕಾರ್ಯದಶರ್ಿ ಎಸ್.ಜಿ.ಕೊರವರ, ಉಪ ವಿಭಾಗಾಧಿಕಾರಿ ಗೀತಾ ಕೌಲಗಿ, ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ, ಹುಬ್ಬಳ್ಳಿ ತಹಶೀಲ್ದಾರ ಶಶಿಧರ ಮಾಡ್ಯಾಳಆಹಾರ ಇಲಾಖೆಯ ಹಿರಿಯ ಉಪನಿದರ್ೆಶಕ ಸದಾಶಿವ ಮಜರ್ಿ, ಕೃಷಿ ಇಲಾಖೆಯ ಜಂಟಿ ನಿದರ್ೆಶಕ ಟಿ.ಎಸ್.ರುದ್ರೇಶಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆರ್.ಎಂ.ದೊಡ್ಡಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೆಶಕ ಬಸವರಾಜ ವರವಟ್ಟಿ, ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಆರ್.ಹಿರೇಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿ.ಬಿ.ಮುರನಾಳ, ತಾಲ್ಲೂಕಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಸ್.ಖಾದ್ರೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.