ರೈತರ ಜಮೀನಿಗೆ ನೀರು ಹರಿಸಲು ಅಧಿಕಾರಿಗಳಿಗೆ ಯಾದವಾಡ ಸೂಚನೆ

ರಾಮದುರ್ಗ 28: ನೀರಾವರಿ ಇಲಾಖೆಯ ಶಿರಸಂಗಿ ಉಪವಿಭಾಗಕ್ಕೆ ಸಂಬಂಧಿಸಿದ 26 ನೇ ಹಂಚುಕಾಲುವೆ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಲಖನಾಯ್ಕನಕೊಪ್ಪ, ಮುದೇನಕೊಪ್ಪ, ಮುಳ್ಳೂರ, ಕಲ್ಲೂರ, ಜಾಲಿಕಟ್ಟಿ ಗ್ರಾಮದ ರೈತರ ಜಮೀನಿಗೆ ಕಾಲುವೆ ನೀರು ಹರಿಯದೇ ಇರುವ ಕಾರಣ ಆಕ್ರೋಶಗೊಂಡ ನೂರಾರು ರೈತರು ಶಾಸಕ ಮಹಾದೇವಪ್ಪ ಯಾದವಾಡ ಗಮನಕ್ಕೆ ತಂದ ತಕ್ಷಣವೇ ರೈತರ ಸಮಸ್ಯೆಯನ್ನು ಶಾಸಕರು ಬಗೆ ಹರಿಸಿದರು.

ಕಳೆದ ಒಂದು ತಿಂಗಳಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿದು ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ಧಾರೆ. ಆದರೆ ಮುಳ್ಳೂರ ಸುತ್ತಮುತ್ತಲಿನ ಗ್ರಾಮದ ರೈತರ ಜಮೀನಿಗೆ ಇನ್ನುವರೆಗೂ ನೀರು ಹರಿಯದೇ ಇದ್ದರಿಂದ ರೈತರ ಜಮೀನಿನ ಬೆಳೆಗಳು ಒಣಗುವ ಸ್ಥಿತಿ ಬಂದು, ಜನ, ಜಾನುವಾರುಗಳಿಗೂ ಕುಡಿಯುವ ನೀರಿನ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡ ರೈತರ ನೋವನ್ನು ತೋಡಿಕೊಂಡರು.

ಸಮಸ್ಯೆಗೆ ಶೀಘ್ರವಾಗಿ ಪ್ರತಿಕ್ರಿಯಿಸಿದ ಶಾಸಕರು ಖುದ್ದಾಗಿ ರೈತರೊಂದಿಗೆ ಕಾಲುವೆ ವ್ಯಾಪ್ತಿಯ ರೈತರ ಜಮೀನಿಗೆ ಬೇಟಿ ನೀಡಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ನೀರು ಹರಿಸಲು ಸೂಚನೆ ನೀಡಿದರು.

ಹಾಳು ಬಿದ್ದಂತಾದ ಕಾಲುವೆಯನ್ನು ಸ್ವಚ್ಛಗೊಳಿಸಿ, ನಿಯಮಿತವಾಗಿ ಕಾಲುವೆಯಲ್ಲಿ ನೀರು ಹರಿದು ರೈತರಿಗೆ ಅನುವು ಮಾಡಿಕೊಡಬೇಕು. ಒಂದು ವೇಳೆ ರೈತರಿಂದ ದೂರು ಕೇಳಿಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇ.ಇ ಎಸ್. ಎಲ್. ಪಾಟೀಲ, ಶಿಸರಂಗಿ ಎ.ಇ.ಇ ಮೋನಿಪಾಟೀಲ ಸುರೇಬಾನ ಎ.ಇ.ಇ ನಾಗರಾಜ, ಲಖನಾಯ್ಕನಕೊಪ್ಪದ ಕೃಷ್ಣಾನಂದ ಸ್ವಾಮೀಜಿ, ರೈತ ಮುಖಂಡರಾದ ಸದಾಶಿವ ರೋಗನ್ನವರ, ಭೀಮಪ್ಪ ಬೀಡಕಿ, ಎಂ. ಎಚ್. ಸೋಮಗೊಂಡ, ನೀರಾವರಿ ಇಲಾಖೆಯ ಮಹಾ ಮಂಡಳದ ಮಾಜಿ ಅಧ್ಯಕ್ಷ ಬಸಣ್ಣ ತುಪ್ಪದ, ಮಲ್ಲಿಕಾಜರ್ುನ ದೂಪದ ಸೇರಿದಂತೆ ಇತರರಿದ್ದರು.