ಸಂಬರಗಿ 05: ಸಮೀಪದ ಖಿಳೇಗಾಂವ ಗ್ರಾಮದಲ್ಲಿ ಶಂಕಿತ ಡೆಂಗ್ಯೂವಿನಿಂದ ಇಬ್ಬರು ಬಾಲಕಿಯರು ಸಾವನಪ್ಪಿದ್ದ ವರದಿಯಾಗುತ್ತಿದ್ದಂತೆ ಇಂದು ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜೇಂದ್ರ ಅವರು ವಿಡಿಯೋ ಕಾನ್ಪರನ್ಸ್ ಮೂಲಕ ನಿದರ್ೇಶನ ನೀಡಿದ್ದು ಅದರಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಫಾಗಿಂಗ್ ವ್ಯವಸ್ಥೆ, ಸ್ವಚ್ಛತಾ ಕಾರ್ಯ ಪ್ರ್ರಾರಂಭಿಸಲಾಗಿದೆ ಎಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರವಿ ಬಂಗಾರೆಪ್ಪವರ ತಿಳಿಸಿದರು.
ಅವರು ಮಂಗಳವಾರ ಖಿಳೇಗಾಂವ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜೇಂದ್ರ ಅವರ ನಿದರ್ೇಶನದಂತೆ ಎಲ್ಲ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಫಾಗಿಂಗ್ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಜನಜಾಗೃತಿ ಮೂಡಿಸುವ ಮೂಲಕ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮಲೇರಿಯಾ ಮತ್ತು ಡೆಂಗ್ಯೂ ಕಂಡು ಬರುತ್ತದೆ. ಅದಕ್ಕಾಗಿ ಮಕ್ಕಳು, ಮಹಿಳೆಯರು, ಮೈತುಂಬ ಬಟ್ಟೆ ಧರಿಸುವುದು ಸೂಕ್ತ ಎಂದರು.
ಖಿಳೇಗಾಂವ ಗ್ರಾಮದಲ್ಲಿ ಶಂಕಿತ ಡೆಂಗ್ಯೂಗೆ ಈಗಾಗಲೇ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು ಅದಕ್ಕಾಗಿ ನಾಗರಿಕರು ಮುಂಜಾಗ್ರತವಾಗಿ ತಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಕರೆ ನೀಡಿದ ಅವರು ಮಲೇರಿಯಾವು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವದರಿಂದ ಹರಡುತ್ತದೆ. ಇದರಿಂದ ದಿನಬಿಟ್ಟು ದಿನ ವಿಪರೀತ ಚಳಿ ಜ್ವರ ಬರುತ್ತವೆ. ನಂತರ ತಲೆನೋವು, ಮೈಕೈ ನೋವು ನಿಶಕ್ತಿ ಉಂಟಾಗುತ್ತದೆ. ಹಾಗೆ ಆದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಡೆಂಗ್ಯೂ ರೋಗವು ಏಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಈ ಸೊಳ್ಳೆ ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ. ಅದಕ್ಕಾಗಿ ಮನೆಯ ಸುತ್ತಮುತ್ತಲು ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಹಾಗೂ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿ ಹೇಳಿದರು.
ಭರದ ಸ್ವಚ್ಛತೆ;- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜೇಂದ್ರ ಅವರು ವಿಡಿಯೋ ಕಾನ್ಪರನ್ಸ್ ಮೂಲಕ ಜಿಲ್ಲೆಯ ಎಲ್ಲ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ವಿಡಿಯೋ ಕಾನ್ಪರನ್ಸ್ ಮೂಲಕ ನಿದರ್ೇಶನ ನೀಡುತ್ತಿದ್ದಂತೆ ಖಿಳೇಗಾಂವ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಯವರು ಕೆಲಸಗಾರರ ಮೂಲಕ ಗ್ರಾಮದ ತುಂಬೆಲ್ಲ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದ್ದು, ಪ್ರತಿ ವಾಡರ್ುಗಳಲ್ಲಿ ಭರದ ಸ್ವಚ್ಛತೆ ಹಾಗೂ ಫಾಗಿಂಗ್ ನಡೆಯುತ್ತಿದೆ.
ಖಿಳೇಗಾಂವ ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ವೈದೈಕೀಯ ಸಿಬ್ಬಂದಿಯಾದ ಸುನಿತಾ ಸನ್ನಕ್ಕಿ, ಎಸ್.ಸಿ.ಸಾರವಾಡಕರ, ಮಹಾದೇವ ಸಕಾನಟ್ಟಿ, ಸುರೇಶ ವಾಲಿಕರ ಸೇರಿದಂತೆ ಆರೋಗ್ಯ ಸಿಬ್ಬಂದಿ ಇಲ್ಲಿ ಬೀಡುಬಿಟ್ಟಿದ್ದಾರೆ.