ಗದಗ 16: ಗದಗ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪ.ಜಾ), 66-ಗದಗ, 67-ರೋಣ ಮತ್ತು 68-ನರಗುಂದ ಇವುಗಳ 1-1-2018 ಕ್ಕೆ ಅನ್ವಯಿಸಿದ ಕರಡು ಮತದಾರರ ಯಾದಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರರ ಕಚೇರಿಗಳಲ್ಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್ ಸೈಟ್ ತಿತಿತಿ.ಛಿಜಠಞಚಿಡಿಟಿಚಿಣಚಿಞಚಿ.ಞಚಿಡಿ.ಟಿಛಿ.ಟಿ ನಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದು, ಕರಡು ಮತದಾರ ಪಟ್ಟಿಗೆ 1-1-2019 ಕ್ಕೆ 18 ವರ್ಷ ಪೂರ್ಣಗೊಳಿಸುವ ಹಾಗೂ ಮತಪಟ್ಟಿಯಲ್ಲಿ ಹೆಸರು ಇರದವರಿಗೆ ಹೆಸರು ಸೇರಿಸಲು ಹಾಗೂ ಈಗಾಗಲೇ ಇರುವ ದತ್ತಾಂಶಗಳ ತಿದ್ದುಪಡಿ ಇದ್ದಲ್ಲಿ ಅವುಗಳ ಕುರಿತು ಹಕ್ಕು ಆಕ್ಷೇಪಣೆ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ. ವಿಶೇಷವಾಗಿ ಯುವಜನರು ಸೇರಿದಂತೆ ಅರ್ಹ ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಂಡು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ನಮೂನೆ 6 ರಲ್ಲಿ ಅಜರ್ಿ ಸಲ್ಲಿಸಲು ಅವಕಾಶವಿದೆ ಎಂದು ಕೈಗಾರಿಕಾಭಿವೃದ್ಧಿ ಆಯುಕ್ತರು ಹಾಗೂ ಗದಗ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ದರ್ಪಣ್ ಜೈನ್ ಅವರು ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ದಿನಾಂಕ: 01-01-2019 ಕ್ಕೆ ಇರುವಂತೆ 18 ವರ್ಷ ಮೇಲ್ಪಟ್ಟ ವಯಸ್ಸು ಹೊಂದಿದವರು, ಮತದಾರರ ಯಾದಿಗಳಲ್ಲಿ ಹೆಸರು ಇಲ್ಲದವರು ತಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ, ಸಂಬಂಧಪಟ್ಟ ತಹಶೀಲ್ದಾರರಿಗೆ ಉಪವಿಭಾಗಾಧಿಕಾರಿಗಳಿಗೆ, ಅಜರ್ಿಗಳನ್ನು ಇತ್ತೀಚಿನ ಪಾಸ್ಪೋರ್ಟ ಸೈಜ್ ಪೋಟೋ ಹಾಗೂ ವಿಳಾಸದ ಹಾಗೂ ವಯಸ್ಸಿನ ಬಗ್ಗೆ ದಾಖಲೆಗಳೊಂದಿಗೆ ಸಲ್ಲಿಸಬೇಕು. ಯಾವುದೇ ಲೋಪದೋಷಗಳಿಲ್ಲದೇ ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆ ನಡೆಸಲು ಮತದಾರ ಪಟ್ಟಿ ಮಹತ್ವದ್ದಾಗಿದೆ. ಜಿಲ್ಲೆಯಲ್ಲಿ ಒಟ್ಟು 959 ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಿಗೆ ಬಿ.ಎಲ್.ಓ ಗಳನ್ನು ನೇಮಿಸಲಾಗಿದೆ. ಇವರ ಕಾರ್ಯ ಹಾಗೂ ಮತಪರಿಷ್ಕರಣೆ ಕಾರ್ಯದ ಪರಿಶೀಲನೆ ಜರುಗಿಸಲು ಒಟ್ಟು 87 ತಾಲೂಕು ಮಟ್ಟದ ಅಧಿಕಾರಿಗಳನ್ನು ಮೇಲ್ವಿಚಾರಣಾದಿಕಾರಿಗಳನ್ನು ನೇಮಿಸಲಾಗಿದೆ. ಎಂದು ದರ್ಪಣ ಜೈನ್ ತಿಳಿಸಿದರು.
ಪ್ರಸ್ತುತ ಕರಡು ಮತದಾರ ಪಟ್ಟಿಯಲ್ಲಿ 425661 ಪುರುಷ ಮತದಾರರು 418194 ಮಹಿಳಾ ಮತದಾರರು ಹಾಗೂ 52 ಇತರೆ ಮತದಾರರು ಒಳಗೊಂಡಂತೆ ಒಟ್ಟು 843907 ಮತದಾರರ ಹೆಸರು ದಾಖಲಾಗಿರುತ್ತವೆ. ಜಿಲ್ಲೆಯ ಕರಡು ಮತದಾರ ಪಟ್ಟಿಯಲ್ಲಿ 983 ಲಿಂಗಾನುಪಾತವಿರುತ್ತದೆ. ಒಟ್ಟು ಅಂದಾಜು ಜನಸಂಖ್ಯೆಗೆ ಶೇ. 73.47 ರಷ್ಟು ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುತ್ತಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಯುವಜನರ ಮತದಾರರಾಗಿ ಹೆಸರು ಸೇರಿಸಲು ನವೆಂಬರ್ 20 ರವರೆಗೆ ಅವಕಾಶವಿದ್ದು ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಮತದಾರ ಪರಿಷ್ಕರಣೆ ಕುರಿತಂತೆ ಸಹಾಯವಾಣಿ ಸ್ಥಾಪಿಸಲಾಗಿದ್ದು ದೂರವಾಣಿ ಸಂಖ್ಯೆ 234880 ಸಂಪಕರ್ಿಸಬಹುದಾಗಿದೆ. ಎಂದು ದರ್ಪಣ್ ಜೈನ್ ನುಡಿದರು.
ಸುದ್ದಿಗೋಷ್ಟಿಯಲ್ಲಿ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಸ್ವೀಪ್ ಸಮಿತಿಯ ಸದಸ್ಯ ಕಾರ್ಯದಶರ್ಿ ಟಿ. ದಿನೇಶ, ಉಪವಿಭಾಗಾಧಿಕಾರಿ ಪಿ.ಎಸ್, ಮಂಜುನಾಥ, ಉಪಸ್ಥಿತರಿದ್ದರು.