ಕಾಂಗ್ರೇಸೇತರ ಸರಕಾರ ನಡೆಸಿದ ಕೀರ್ತಿ ವಾಜಪೇಯಿಗೆ ಸಲ್ಲುತ್ತದೆ : ವಿಶ್ವನಾಥ ಹರವಿ
ಶಿಗ್ಗಾವಿ 25 : ಭಾರತ ದೇಶದ ಇತಿಹಾಸದಲ್ಲಿ ಮೊದಲ ಭಾರಿಗೆ ಕಾಂಗ್ರೇಸೇತರ ಪೂರ್ಣಾವಧಿ ಸರಕಾರ ನಡೆಸಿದ ಕೀರ್ತಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು.
ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ, ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 100 ವರ್ಷದ ಜನ್ಮದಿನದ ಸ್ಮರಣಾರ್ಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಒಂದು ಪಕ್ಷ ಮತ್ತು ಒಂದು ಕುಟುಂಬದ ಹಿಡಿತದಲ್ಲಿದ್ದ ರಾಷ್ಷ್ರದ ರಾಜಕಾರಣವನ್ನು ಹೊರತಂದ ದೇಶದ ಮೇಧಾವಿ ಅಲ್ಲದೇ ಪಾರದರ್ಶಕತೆಗೆ ಮಾದರಿ ರಾಜಕಾರಣಿಯಾಗಿದ್ದರು ಎಂದರು. ಓಬಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಸುಭಾಷ ಚವ್ಹಾಣ, ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರೇಣಕನಗೌಡ ಪಾಟೀಲ, ಪ್ರತೀಕ ಕೊಳೆಕರ, ಸಚಿನ ಮಡಿವಾಳರ, ಕಾಶಿನಾಥ ಕಳ್ಳಿಮನಿ, ವಿನಯ ಮುಂಡಗೋಡ, ಸಂತೋಷ ದೊಡ್ಡಮನಿ, ಸಂತೋಷ ಸುಬೇದಾರ, ವಿನಾಯಕ ಶ್ಯಾಡಂಬಿ, ಪ್ರಶಾಂತ ಕರೂರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.