ಧಾರವಾಡ 27: ಭಾರತದ ಯಾವುದೇ ಸಂಪ್ರದಾಯಗಳು ಮೂಢನಂಬಿಕೆಗಳು ಅಲ್ಲ. ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿವೆ ಎಂದು ಡಾ. ಬಿ.ಪಿ. ಮಠದ ಅವರು ಹೇಳಿದರು.
ಅವರು ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ, ಶಕುಂತಲಾ, ಡಾ. ಎಸ್.ವ್ಹಿ. ಅಯ್ಯನಗೌಡರ ದತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿ, ರಂಗೋಲಿ ಮತ್ತು ಸಂಸ್ಕೃತಿ ವಿಷಯ ಕುರಿತು ಮಾತನಾಡುತ್ತಿದ್ದರು.
ರಂಗೋಲಿ ಅನ್ನುವುದು ಒಂದು ಕಲೆ. ಇದನ್ನು ಭಾರತದಲ್ಲಿ ಬಹುಶಃ 90 ರಷ್ಟು ಹೆಣ್ಣುಮಕ್ಕಳು ಶಾಲೆಗೆ ಹೋಗದೆ ರಂಗೋಲಿಯ ಬಗ್ಗೆ ಓದದೇ ಅವರ ತಾಯಂದಿರಿಂದ, ಅಜ್ಜಿಯರಿಂದ, ಅಕ್ಕಂದಿರಿಂದ ಕಲಿತ ಒಂದು ಪಾರಂಪರಿಕ ಕಲೆ. ರಂಗೋಲಿಯ ಹಿಂದುಗಡೆ ಒಂದು ಸಂಪ್ರದಾಯವಿದೆ. ವೈಚಾರಿಕತೆ ಇದೆ. ಒಂದು ವೈಜ್ಞಾನಿಕತೆ ಇದೆ. ರಂಗೋಲಿಯನ್ನು ವೇದ ಕಾಲದಲ್ಲಿಯೂ ಹಾಕುತ್ತಿದ್ದರು. ರಾಮಾಯಣ, ಮಹಾಭಾರತ ಕಾಲದಲ್ಲಿ ಹಾಕುತ್ತಿದ್ದರು ಎನ್ನುವ ಬಗ್ಗೆ ಪುರಾವೆಗಳಿವೆ. ರಂಗೋಲಿಯ ಬಗ್ಗೆ ಕರಾವಳಿ ಪ್ರದೇಶದಲ್ಲಿಯ ಬಾರಕೂರು ಶಾಸನ ಮತ್ತು ಕೊಲ್ಲಾಪೂರ ಪ್ರದೇಶದಲ್ಲಿ ಪತ್ತೆಯಾದ ಶಾಸನದಲ್ಲಿ ಉಲ್ಲೇಖವಿದೆ. ರಂಗೋಲಿಯಲ್ಲಿ ಅಡಗಿರುವ ವೈಜ್ಞಾನಿಕತೆ, ಸಂಪ್ರದಾಯ ಬಗ್ಗೆ ಇನ್ನೂ ಯಾರಿಗೂ ಆಳವಾಗ ತಿಳಿದಿಲ್ಲ. ಹಿಂದಿನವರೂ ಹಾಕುತ್ತಾರೆ ಈಗಿನವರೂ ನಾವು ಹಾಕಬೇಕು ಅನ್ನುವ ರೂಢಿ ಬಳಕೆಯಲ್ಲಿದೆ. ಆದರೆ, ರಂಗೋಲಿಯನ್ನು ಹಾಕುವುದರಿಂದ ಹತ್ತಾರು ಶನಿಗಳು ಓಡಿಹೋಗುತ್ತವೆ. ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಹಾಕಿದರೆ ಅತಿ ಶ್ರೇಷ್ಠ ಎನ್ನುತ್ತಾರೆ. ಏಕೆಂದರೆ ಆ ಅಕ್ಕಿ ಹಿಟ್ಟನ್ನು ಇರುವೆಗಳು, ಸಣ್ಣ ಸಣ್ಣ ಕೀಟಗಳು ಸೇವಿಸಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ. ನಮಗೆ ಅರಿವಿಲ್ಲದೆ ನಾವು ಹತ್ತಾರು ಕೀಟಗಳ ಹೊಟ್ಟೆಯನ್ನು ತುಂಬಿಸುತ್ತೇವೆ ಎಂದರು.
ರಂಗೋಲಿ ಶುಭ ಕಾರ್ಯಗಳಿಗೂ ಬೇಕು, ಅಶುಭ ಕಾರ್ಯಗಳಿಗೂ ಬಳಕೆಯಾಗುತ್ತದೆ. ಮಾಟ-ತಂತ್ರ ಮಾಡುವ ಸಮಯದಲ್ಲಿ ಮತ್ತು ಸ್ಮಶಾನದಲ್ಲಿ ಹೆಣವನ್ನು ಹುಗಿಯುವ ಜಾಗದ ಸುತ್ತ ರಂಗೋಲಿಯನ್ನು ಹಾಕುತ್ತಾರೆ. ಮುಂಜಾನೆ ಎದ್ದು ಅಂಗಳವ ಗುಡಿಸಿ ಚೆಂದಾದ ರಂಗೋಲಿ ಹಾಕಿದರೆ ದೇವರು ಕುಲುಕುಲು ನಕ್ಕು ನಲಿಯುತ್ತಾನೆ ಎಂಬ ನಂಬಿಕೆಯಿದೆ. ಯಜ್ಞ ಯಾಗಾದಿಗಳನ್ನು ಮಾಡುವ ಸಮಯದಲ್ಲಿ ಅಗ್ನಿ ಕುಂಡದ ಸುತ್ತ ರಂಗೋಲಿಯನ್ನು ಹಾಕುತ್ತಾರೆ. ಆಧುನಿಕ ರಂಗೋಲಿಗಳು ದಿನಕ್ಕೆ ಲಕ್ಷಗಟ್ಟಲೆ ಹುಟ್ಟಿಕೊಳ್ಳುತ್ತವೆ. ಸಾಹಿತ್ಯದಲ್ಲಿ ರಂಗೋಲಿ ಇದೆ. ಸಂಸ್ಕೃತಿಯಲ್ಲಿ ರಂಗೋಲಿ ಇದೆ. ಆದಿ ಪಂಪನ ಕಾಲದಲ್ಲಿಯೂ ರಂಗೋಲಿ ಇತ್ತು. ರಂಗೋಲಿ ಹಾಕುವುದರಿಂದ ಸಂಯಮ ವಿಕಿರಣಗಳು ಮನೆಯ ಪ್ರವೇಶ ಮಾಡುವುದಿಲ್ಲ. ರಂಗೋಲಿಯು ವಚನದಲ್ಲಿ, ದಾಸರ ಪದದಲ್ಲಿ, ಜಾನಪದದಲ್ಲಿ ಹಾಡಿದ ಬಗ್ಗೆ ದಾಖಲೆ ಇದೆ. ಭಾರತದಲ್ಲಿ ಸ್ವಚ್ಛ ಅಭಿಯಾನದ ಜೊತೆ ರಂಗೋಲಿ ಅಭಿಯಾನ ಪ್ರಾರಂಭಿಸಬೇಕು. ರಂಗೋಲಿಗಳನ್ನು ಹಾಕುವುದನ್ನು ಎಲ್ಲ ಧರ್ಮ ಪ್ರದೇಶ, ಜನಾಂಗಗಳಲ್ಲಿಯೂ ಕಾಣುತ್ತೇವೆ. ರಂಗೋಲಿಯ ಬಗ್ಗೆ ವೈಜ್ಞಾನಿಕವಾದ ಆಳವಾದ ಅಧ್ಯಯನಗಳು ಆಗದೇ ಇರುವುದು ದುರದೃಷ್ಟಕರ. ರಂಗೋಲಿ ಬಗ್ಗೆ ವೈಜ್ಞಾನಿಕ ಸಂಶೋಧನಗಳು ಆಗಬೇಕಿದೆ. ಎಲ್ಲಾ ಮೂಲಾಕ್ಷರಗಳಿಗೂ ರಂಗೋಲಿಯಲ್ಲಿರುವ ಚುಕ್ಕೆಗಳೇ ಆಧಾರ. ರಂಗೋಲಿ ಹಾಕುವ ರೀತಿಯೇ ಮುಂದೆ ಅಕ್ಷರವಾಗಿ ಅಭಿವೃದ್ಧಿ ಹೊಂದಿವೆ ಎಂದು ಭಾಷಾ ತಜ್ಞರು ಹೇಳುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಮಾತನಾಡಿ, ರಂಗೋಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದ್ದು, ಅದರ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳು ಆಗಬೇಕಾಗಿದೆ. ನಮ್ಮ ಯುವಪೀಳಿಗೆಯು ನಮ್ಮ ಹಿರಿಯರಿಂದ ಬಂದ ರಂಗೋಲಿ ಸಂಸ್ಕೃತಿಯ ಕಲೆಯನ್ನು ಉಳಿಸಿಕೊಂಡು ಹೋಗಬೇಕು ಎಂದರು. ವೇದಿಕೆ ಮೇಲೆ ಎಸ್.ವ್ಹಿ. ಅಯ್ಯನಗೌಡರ ದಂಪತಿಗಳು ಉಪಸ್ಥಿತರಿದ್ದರು.
ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಉಪಾಧ್ಯಕ್ಷ ನಿಂಗಣ್ಣ ಕುಂಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.
ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕುಂಬಿ ಹಾಗೂ ಡಾ. ಮನಗುಂಡಿ, ಡಾ. ಬಸವರಾಜ ತಲ್ಲೂರ, ಪ್ರೊ. ಎಸ್.ಬಿ. ಜೋಗೂರ, ಡಿ.ಎಚ್. ಮೋರೆ, ಡಾ. ಚಂದ್ರಶೇಖರ ರೊಟ್ಟಿಗವಾಡ, ಪ್ರಭು ಹಂಚಿನಾಳ, ಚನಬಸಪ್ಪ ಅವರಾದಿ, ನಿಂಗಪ್ಪ ಮಾಯಕೊಂಡ, ಎಂ.ಬಿ. ಹೆಗ್ಗೇರಿ, ಲಕ್ಷ್ಮಣ ಪುರದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.