ಲೋಕದರ್ಶನ ವರದಿ
ಮುಧೋಳ 21:ಸೌಹಾರ್ದಯುತ ಸಂಬಂಧಗಳನ್ನು ಹೊಂದಿರುವ ಬಣಜಿಗ ಹಾಗೂ ಪಂಚಮಸಾಲಿ ಲಿಂಗಾಯತ ಸಮಾಜಗಳಲ್ಲಿ ಯಾವುದೇ ರೀತಿಯಲ್ಲಿ ಸ್ವಾಸ್ಥ್ಯ ಹಾಳುಗೆಡವಲು ಪ್ರಯತ್ನ ಮಾಡಬಾರದು ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ
ಬಿ. ಬಿ. ಬಿಸನಕೊಪ್ಪ ಹೇಳಿದರು.
ನಗರದ ಕಾನಿಪ ಸಂಘದ ಕಾಯರ್ಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಗಲಕೋಟ ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ ಕೇವಲ ಉದಾಹರಣೆಯಾಗಿ ಹೇಳಿದ ಕಿತ್ತೂರ ರಾಣಿ ಚನ್ನಮ್ಮನ ಇತಿಹಾಸದಲ್ಲಿ ಮಲ್ಲಪ್ಪ ಶೆಟ್ಟರನ್ನು ಅವಹೇಳನ ಮಾಡಿದರೆಂದು ಕೆಲವರು ತಮ್ಮ ಸ್ವಹಿತಾಸಕ್ತಿಗೋಸ್ಕರ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದೆ. ಬಣಜಿಗ ಹಾಗೂ ಪಂಚಮಸಾಲಿ ಸಮಾಜದಲ್ಲಿ ಸಾಕಷ್ಟು ಸಂಬಂಧಗಳು ಸಹ ಏರ್ಪಟ್ಟಿದ್ದು ಸಮಾಜ ಒಂದೇ ಎಂದೇ ಪರಿಗಣಿತವಾಗಿದೆ. ದಯವಿಟ್ಟು ಸಮಾಜದ ಮಧ್ಯೆ ಸೌಹಾರ್ದ ಏರ್ಪಡಿಸಬೇಕೆ ಹೊರತು ಯಾವುದೇ ವೈಷಮ್ಯ ಮೂಡಿಸುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದಶರ್ಿ ಎ. ಎಸ್. ಚೌಧರಿ, ಎಸ್. ಬಿ. ದಾನಪ್ಪಗೋಳ, ರಾಮನಗೌಡ ನಾಡಗೌಡ ಉಪಸ್ಥಿತರಿದ್ದರು.