ವಿಧಾನ ಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಲು ಅವಕಾಶ ನಿಡದಿದಕ್ಕೆ ಬೆಳಗಾವಿ ದಕ್ಷಿಣ ಶಾಸಕ ಹಾಗೂ ಬೆಳಗಾವಿ ಉತ್ತರ ಶಾಸಕರ ಧರಣಿ

ವಿಧಾನ ಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಲು ಅವಕಾಶ ನಿಡದಿದಕ್ಕೆ 

ಬೆಳಗಾವಿ ದಕ್ಷಿಣ ಶಾಸಕ ಹಾಗೂ ಬೆಳಗಾವಿ ಉತ್ತರ ಶಾಸಕರ ಧರಣಿ

ಲೋಕದರ್ಶನ ವರದಿ

ಬೆಳಗಾವಿ 16: ದಿ. 13ರಂದು ಬೆಳಗಾವಿ ಸುವರ್ಣ ಸೌಧದ ವಿಧಾನ ಸೌಧದಲ್ಲಿ ಖಾಸಗಿ ನಿರ್ಣಯವನ್ನು ಮಂಡಿಸಲು ಬೆಳಗಾವಿ ದಕ್ಷಿಣ ಶಾಸಕರಾದ ಅಭಯ ಪಾಟೀಲ ಅವರಿಗೆ ಅವಕಾಶ ಸಿಗದಿದ್ದನ್ನು ಆಕ್ಷೇಪಿಸಿ ಇಂದು ಶುಕ್ರವಾರದಂದು ಸುವರ್ಣ ಸೌಧದ ಪಶ್ಚಿಮ ದ್ವಾರದಲ್ಲಿ ಬೆಳಗಾವಿ ದಕ್ಷಿಣ ಶಾಸಕ ಹಾಗೂ ಬೆಳಗಾವಿ ಉತ್ತರ ಶಾಸಕರು ಪ್ರತಿಭಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಬೆಳಗಾವಿಯ ಇಬ್ಬರೂ ಶಾಸಕರು ಬೆಳಗಾವಿ ಅಭಿವೃಧ್ದಿಗೆ ಖಾಸಗಿ ನಿರ್ಣಯವನ್ನು ಮಂಡಿಸಲು ಸಮಯದ ಅಭಾವ ಇದ್ದರೆ ಬೆಳಗಾವಿಯಲ್ಲಿ ಅಧಿವೇಶನ ಏಕೆ? ಮತ್ತು ಖಾಸಗಿ ನಿರ್ಣಯವನ್ನು ಮಂಡಿಸಲು ಕಾಲಾವಕಾಶದ ಕೊರತೆ ಇದ್ದರೆ ಬೆಳಗಾವಿ ಅಧಿವೇಶನ ಯಾವ ಪುರಶಾರ್ಥಕ್ಕೆ ಎಂಬ ಘೋಷಣೆಗಳೊಂದಿಗೆ ತಮ್ಮ ಪ್ರತಿಭಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ವಿಧಾನ ಸಭೆಯ ವಿರೋದ ಪಕ್ಷದ ನಾಯಕರಾದ ಬಿ.ಎಸ್.ಯಡಿಯುರಪ್ಪನವರು ಹಾಗೂ ಇತರ ಎಲ್ಲ ನಾಯಕರು ಪ್ರತಿಭಟನೆ ನಿರತ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ರವರನ್ನು ಸಮಾಧಾನ ಪಡಿಸಿದರು ನಂತರದಲ್ಲಿ ನಾಯಕರ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.