8ನೇ ತರಗತಿಯ ವಿದ್ಯಾರ್ಥಿಯಾದ ನಿರುಪಾದಿ ಹರಿಜನ ಭಟ್ಕಳದಲ್ಲಿ ತೆರೆದ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ
ಯಲಬುರ್ಗಾ22 : ತಾಲೂಕಿನ ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾದ ನಿರುಪಾದಿ ಹರಿಜನ ಭಟ್ಕಳದಲ್ಲಿ ತೆರೆದ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ನಡೆದಿತ್ತು. ಮೃತ ನಿರುಪಾದಿ ಹರಿಜನ್ ಅವರ ಮನೆಗೆ ಭೇಟಿ ಕೊಟ್ಟು ಕುಟುಂಬ ದವರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನವೀನಕುಮಾರ್ ಈ ಗುಳಗಣ್ಣವರ ಈ ಸಂದರ್ಭದಲ್ಲಿ ವಿಜಯ ತಾಳಕೇರಿ, ಕಲ್ಯಾಣಪ್ಪ ಶೆಟ್ಟರ್, ಮಲ್ಲಪ್ಪ ಸಜ್ಜನ್, ಮಂಜುನಾಥ್ ಸಿಂದೋಗಿ,ಶಿವನಗೌಡ ರವಿಕುಮಾರ್ ಚಿಕ್ಕವಠಲ ಕುಂಟ ಬಾಲಪ್ಪ ಜರಕುಂಟಿ, ಕರಬೀರ್ಪ, ಯಮನೂರ ಧೂಳಿ, ರಮೇಶ್ ಗದ್ದಿ ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.