ನಿಜ ಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸ: ಪೂರ್ವಭಾವಿ ಸಭೆ

Nija Sharan Ambiga Chaudhary's Jatrotsa: Preliminary Meeting

ನಿಜ ಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸ: ಪೂರ್ವಭಾವಿ ಸಭೆ 

     ರಾಣಿಬೆನ್ನೂರ 31: ವಚನಕಾರರಲ್ಲಿ ಶ್ರೇಷ್ಠರಾಗಿ, ಸಮಾಜದಲ್ಲಿನ ಅಂಕು ಡೊಂಕು ತಿದ್ದುವದರ ಮೂಲಕ ವೈಚಾರಿಕ ಕ್ರಾಂತಿ ಹರಿಸಿದ ಅಂಬಿಗರ ಚೌಡಯ್ಯನವರು ವಚನಕಾರರಿಗೆ ಪ್ರಜ್ವಲವನಾಗಿ ಬೆಳಗುವ ಧೃವತಾರೆಯಾಗಿ ಎಲ್ಲರ ಮೈನಗಳಲ್ಲಿ ನಿಲ್ಲುವಂತೆ ಮಾಡಿರುವ ನಿಜ ಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸವವು ಜ. 14 ಮತ್ತು 15 ರಂದು ಎರಡು ದಿನಗಕಾಲ ನರಶೀಪುರ ಗುರು ಪೀಠದಲ್ಲಿ ನಡೆಯಲಿದೆ ಸಮಾಜ ಬಾಂಧವರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ತಾಲೂಕಾ ಗಂಗಾಮತ ಸಮಾಜದ ಅಧ್ಯಕ್ಷ ರಾಜು ಜಡಮಲಿ ಹೇಳಿದರು.  

  ರವಿವಾರ ರಾಮನಗರದ  ಶಿರಡಿ ಸಾಯಿಬಾಬ ದೇವಸ್ಥಾನದ ಸಭಾಭವನದಲ್ಲಿ  ನಿಜ ಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ವಾಲ್ ಪೋಷ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು,  ಅತ್ಯಂತ ನಿರ್ಭಿಡೆಯ ಸಮಾಜ ಸುಧಾರಕ, ಆಧ್ಯಾತ್ಮಿಕ ಅನುಭಾವಿಯಾಗಿದ್ದ ಚೌಡಯ್ಯ ಮೂಲತಹ ನಿಜಶರಣರಾಗಿದ್ದರು. ಆತನಲ್ಲಿ ಬಸವಣ್ಣನವರ ವೈಚಾರಿಕತೆ, ಅಲ್ಲಮಪ್ರಭುವಿನ ಅನುಭಾವಿಕ ನಿಲುವು ಬೆರೆತು-ವಿಶಿಷ್ಟ ಅನುಭವ ಮತ್ತು ಅನುಭಾವಗಳೆರಡೂ ಸೇರಿ ಮಹಾತ್ಮನೆನಿಸಿಕೊಂಡವನು ಎಂದರು. 

    ತಾಲೂಕಿನ ಚೌಡಯ್ಯದಾನಪುರದ ತುಂಗಭದ್ರಾ ನದಿಯ ತಟದಲ್ಲಿ ಐಕ್ಯರಾಗಿರುವ ಅಂಬಿಗರ ಚೌಂಡಯ್ಯನು ಬಸವಣ್ಣನವರ ಸಮಕಾಲಿನರಾಗಿ ಕನ್ನಡ ಸಾಹಿತ್ಯದಲ್ಲಿ ಬಂಡಾಯದ ಮೊದಲ ಹೆಜ್ಜೆಗಳನ್ನು ಅತ್ಯಂತ ಸ್ಪಷ್ಟವಾಗಿ ಚಾಪಿಸಿದ ವಚನಕಾರರಾಗಿದ್ದರು. ಬಸವಣ್ಣನವರ ವಚನ ಚಳುವಳಿಗೆ ಮುಖ್ಯ ಆಧಾರ ಸ್ತಂಭಗಳಾಗಿದ್ದ ಅವರು ಇತರ ಕೆಳ ವರ್ಗಗಳ  ಶರಣರು ಮೂಕರಾಗುವಂತೆ ಮಾಡಿದ್ದ ಸಮಯದಲ್ಲಿ ಬಸವಣ್ಣನವರ ಪ್ರಭಾವ ಪ್ರೇರಣೆಯಿಂದ ಕನ್ನಡ ಸಾಹಿತ್ಯಕ್ಕೆ ಸತ್ವಶಾಲಿಯಾದ ವಚನಗಳನ್ನು ನೀಡಿ ಚೌಡಯ್ಯನವರು ದಾರೀದೀಪವಾಗಿದ್ದವರು ಅಂತವರ ವಚನಗಳ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲು ಸರ್ವರೂ ಮುಂದಾಗೋಣ ಎಂದರು. 

 ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಆರ್‌.ಎಚ್‌. ಐರಣಿ, ನ್ಯಾಯವಾದಿಗಳಾದ ಎಂ,ಬಿ. ಚಿನ್ನಪ್ಪನವರ, ಹೊನ್ನಪ್ಪ ತಿಮ್ಮೇನಹಳ್ಳಿ, ಸಮಾಜ ಮುಖಂಡರಾದ ಫಕ್ಕೀರ​‍್ಪ ತುಮ್ಮಿನಕಟ್ಟಿ, ಕರಬಸಪ್ಪ ಬಾರ್ಕಿ, ಕಾಳಪ್ಪ ಅಂಬಿಗೇರ, ಕೊಟ್ರೇಶ ಕುದರಿಹಾಳ, ರಾಜು ರಟ್ಟಿಹಳ್ಳಿ, ಮೂರ್ತಿ ಸುಣಗಾರ, ಆಂಜನೇಯ ಬಾಳಿಕಾಯಿ, ಹಾಲೇಶ ಜಾಡರ ಸೇರಿದಂತೆ ಮತ್ತಿತರ ಮುಖಂಡರು ಇದ್ದರು.