ಲೋಕದರ್ಶನ ವರದಿ
ಕೊಪ್ಪಳ 26: ಇಂದಿನ ಯಾಂತ್ರಿಕ ಜೀವನದಲ್ಲಿ ಸುಸ್ಥಿರ ಸಮಾಜದ ಪ್ರಗತಿಗೆ ಪತ್ರಿಕೆಗಳು ಸಹಾಯಕ ಎಂದು ಸ್ಥಳೀಯ ಅನ್ನದಾನೇಶ್ವರ ಶಾಖಾಮಠದ ಮಹಾದೇವ ದೇವರು ಅಭಿಪ್ರಾಯ ಪಟ್ಟರು. ಗುರುವಾರ ಸಂಜೆ ಕುಕನೂರಿನ ಪತ್ರಿಕಾ ಭವನದ ಆವರಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಷ್ಟ್ ಜಂಟಿಯಾಗಿ ಆಯೋಜಿಸಿದ್ದ ಅಪ್ಪಳಿಸು ಪತ್ರಿಕೆ ದಶಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾಧ್ಯಮಗಳ ಮತ್ತು ಪತ್ರಿಕೆಗಳ ಪೈಪೋಟಿ ಜಗತ್ತಿನಲ್ಲಿ ಪತ್ರಿಕೆಗಳನ್ನು ನಡೆಸುವುದು ಸಾಮಾನ್ಯವಾದ ಕೆಲಸವಲ್ಲ. ನಾಡಿನಲ್ಲಿ ಅನೇಕ ಜನರು ಪತ್ರಿಕಾ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದ್ದಾರೆ ಆದರೆ ಅವರಲ್ಲಿ ಪತ್ರಿಕೆಗಳಿಗಿಂತ ವಾಣಿಜ್ಯ ಕ್ಷೇತ್ರ ಜೊತೆಗಿದೆ, ಇನ್ನು ಗ್ರಾಮೀಣ ಮಟ್ಟದಲ್ಲಿ ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳು ಸ್ಥಳೀಯ ಜನರ ಸಾರ್ವಜನಿಕ ಹಿತಾಸಕ್ತಿಗಳನ್ನು ಮೈಗೂಡಿಸಿಕೊಂಡಿದ್ದು, ಬೇಗನೇ ಜನರ ಪ್ರೀತಿ ವಿಶ್ವಾಸ ಗಳಿಸುತ್ತವೆ ಆದರೆ ಪತ್ರಿಕೆಗಳನ್ನು ಕೊಂಡು ಓದುವಂತಾದರೆ ಮತ್ತು ಪತ್ರಿಕೆಗಳು ನಮ್ಮ ಭಾಗದ ಜೀವನಾಡಿ ಎಂಬ ಅಭಿಮಾನ ಎಲ್ಲರಲ್ಲಿ ಮೂಡಿದರೆ ಆ ಪ್ರದೇಶದ ಅಭಿವೃದ್ಧಿ ತನ್ನಿಂತಾನೇ ಸುಧಾರಣೆ ಸಾಧ್ಯ. ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಅಪ್ಪಳಿಸು ಪತ್ರಿಕೆಯು ಯಾವುದೇ ಧರ್ಮ, ರಾಜಕೀಯ ಗುಂಪು ಹೀಗೆ ಯಾವುದಕ್ಕೂ ಸೀಮಿತಗೊಳ್ಳದೇ 10 ವರ್ಷಗಳನ್ನು ಪೊರೈಸಿರುವುದು ಸಣ್ಣ ಮಾತಲ್ಲ. ಇದು ಬರುವ ದಿನಗಳಲ್ಲಿ ಇನ್ನಷ್ಟು ದಿನಗಳವರೆಗೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ವೇ.ಮೂ.ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ ಅವರು ಮಾತನಾಡಿ, ಎಲ್ಲ ಕ್ಷೇತ್ರಗಳ ಸುದ್ದಿ, ಲೇಖನಗಳನ್ನು ಬರೆಯುವ ಮೂಲಕ ಈ ಪತ್ರಿಕೆ ಸೊಗಸಾಗಿ ಮುನ್ನಡೆಯುತ್ತಿದೆ, ಇದರ ಇನ್ನಷ್ಟು ಬೆಳವಣಿಗೆಗೆ ಸಾರ್ವಜನಿಕರು ಓದುಗರು ಪ್ರೋತ್ಸಾಹಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಅವರು ಮಾತನಾಡಿ, ಕಠಿಣ ಪರಿಶ್ರಮದಿಂದ ಇಂಥ ಪತ್ರಿಕೆ ಮುನ್ನಡೆಸಿಕೊಂಡು ಬಂದಿದ್ದು ಉತ್ತಮ ಬೆಳವಣಿಗೆ, ಯಾವುದೇ ವಿವಾದಾತ್ಮಕ ವಿಷಯಗಳಿರಲಿ, ಅನ್ಯಾಯ ಅಕ್ರಮ ವರದಿಗಳನ್ನು ಚಾಚೂ ತಪ್ಪದೇ ಬರೆಯುವ ಮೂಲಕ ಪತ್ರಿಕೆಗಳು ಪ್ರಾಮಾಣಿಕ ಕೆಲಸ ಮಾಡಬೇಕಿದೆ, ಜನರ ಆಶೋತ್ತರಗಳಿಗೆ ಪತ್ರಿಕೆಗಳು ಕೈಗನ್ನಡಿ, ನ್ಯಾಯ, ನಿಷ್ಠುರತೆಗಳಿಂದ ಪತ್ರಿಕೆ ಇನ್ನಷ್ಟು ಉಜ್ವಲವಾಗಿ ಬೆಳೆಯಲಿ. ಪತ್ರಿಕೆಗಳಿಗೆ ಆಪತ್ತು ಬಂದಾಗ ಸಂಘಟನೆಗಳಿವೆ ಬೆಳೆಸುತ್ತವೆ ಸಂಪಾದಕರು ಮತ್ತು ಪತ್ರಕರ್ತರು ಧೃತಿಗೆಡದೆ ಕಾಯಕನಿಷ್ಠೆಯಲ್ಲಿ ಸಕ್ರಿಯರಾಗಬೇಕೆಂದು ಹುರಿದುಂಬಿಸಿದರು.
ಪತ್ರಿಕೆ ಸಂಪಾದಕ ರುದ್ರಪ್ಪ ಭಂಡಾರಿ ಮಾತನಾಡಿ, ಶುದ್ಧ ಭಾಷೆಯ ಮೂಲಕ ಓದುಗರ ಮನಸ್ಸನ್ನು ಗೆದ್ದಿದೆ, ಯಾವುದೇ ಪತ್ರಿಕೆಯ ಮೂಲಕ ಹಲವು ಪ್ರತಿಭೆಗಳನ್ನು ಬೆಳೆಸಿದ ಕೀತರ್ಿ ಇದೆ ಮುಂಬರುವ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯಗೊಳಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಎಪಿಎಂಸಿ ಮಾಜಿ ಸದಸ್ಯ ದೇವಪ್ಪ ಹಟ್ಟಿ,ಕನರ್ಾಟಕ ಜಾನಪದ ಪರಿಷತ್ ಅಧ್ಯಕ್ಷ ಹನುಮಂತಪ್ಪ ಜಳಕಿ, ಕಸಾಪ ಕಾರ್ಯದಶರ್ಿ ಕಳಕಪ್ಪ ಕುಂಬಾರ, ಪತ್ರಕರ್ತರಾದ ಪಂಚಯ್ಯ ಹಿರೇಮಠ, ಶಿವರಾಜ ದೊಡ್ಡಮನಿ, ವಿರೇಶ ಆಡೂರು, ಶಂಕರ್ ಭಂಡಾರಿ, ಪ್ರಜ್ವಲ ಜಿ.ಮುಂತಾದವರು ಮಾತನಾಡಿ ಪತ್ರಿಕೆಗೆ ಶುಭ ಕೋರಿದರು. ಪತ್ರಕರ್ತ ಮುರಾರಿ ಭಜಂತ್ರಿ ಹಾಗೂ ಶಿಕ್ಷಕಿ, ಗಾಯಕಿ ಪಾರ್ವತಿ ಮುಲ್ಲಾ ಅವರು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಪತ್ರಕರ್ತರಾದ ನಾಗರಾಜ ಬೆಣಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕೊಡ್ಲಿ ಸ್ವಾಗತಿಸಿದರು. ರುದ್ರೇಶ ಆರಬೆರಳಿನ್ ನಿರೂಪಿಸಿದರು. ಪ್ರಶಾಂತ ಭಂಡಾರಿ ವಂದಿಸಿದರು. ಇದೇ ಸಂದರ್ಭದಲ್ಲಿ ಅಪ್ಪಳಿಸು ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಸಂಪಾದಕ ರುದ್ರಪ್ಪ ಭಂಡಾರಿ ಅವರನ್ನು ಸತ್ಕರಿಸಲಾಯಿತು. ನಂತರ ಸಿಹಿ ವಿತರಿಸಲಾಯಿತು.