ನ್ಯೂಸ್ ಫೈಲ್ಹಂದಿಗುಂದ ಶ್ರೀ ಸಿದ್ದಾರೂಢ ಮಠದಲ್ಲಿ 18ನೇ ವರ್ಷದ ಪಾರಮಾರ್ಥಿಕ ಮಹೋತ್ಸವ ಸಂಪನ್ನ

ನ್ಯೂಸ್ ಫೈಲ್ಹಂದಿಗುಂದ ಶ್ರೀ ಸಿದ್ದಾರೂಢ ಮಠದಲ್ಲಿ 18ನೇ ವರ್ಷದ ಪಾರಮಾರ್ಥಿಕ ಮಹೋತ್ಸವ ಸಂಪನ್ನ News File 18th year of spiritual festival celebrated at Handigund Sri Siddharoodha Math

ಪಾಲಬಾವಿ 03:   ಸಮೀಪದ ಹಂದಿಗುಂದ ಗ್ರಾಮದಲ್ಲಿಯ ನವನಗರದಲ್ಲಿ ಪ್ರತಿಷ್ಠಾಪನಗೊಂಡಿರುವ ಸದ್ಗುರು ಶ್ರೀ ಸಿದ್ಧಾರೂಢ ಮಠದಲ್ಲಿ ಈ ವರ್ಷದಂತೆ ಈ ವರ್ಷವೂ ಸದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ 18ನೇ ವರ್ಷದ ಪಾರಮಾರ್ಥಿಕ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವವು ಶುಕ್ರವಾರ (ದಿ.03) ರಂದು ಮುಂಜಾನೆ 10ಗಂಟೆಗೆ ಸಡಗರ ಸಂಭ್ರಮದಿಂದ ಜರುಗಿತು.ಶುಕ್ರವಾರ ದಿ:03ರಂದು ಮುಂಜಾನೆ 6ಗಂಟೆಗೆ ಅರ್ಚಕ ಬರಮಪ್ಪ ಪೂಜಾರಿ ಇವರಿಂದ ಸದ್ಗುರು ಸಿದ್ಧಾರೂಢರ ಕರ್ತೃ ಗದ್ದುಗೆಗೆ ಪಂಚಾಕ್ಷರಿ ಮಹಾಮಂತ್ರದೊಂದಿಗೆ ವಿಶೇಷ, ಪೂಜೆನೆರವೇರಿತು,

ಸಿದ್ಧಾರೂಢರ ಮೂರ್ತಿಗೆ ವಸ್ತ್ರಧಾರಣೆ, ನೈವೇದ್ಯ ಸಮರ​‍್ಿಸಲಾಯಿತು. ಮುಂಜಾನೆ 9ಗಂಟೆಗೆ ಗ್ರಾಮದ ಆರಾಧ್ಯ ದೇವರಾದ ಶ್ರೀ ಹಾಲಸಿದ್ದೇಶ್ವರ ದೇವಸ್ಥಾನದಿಂದ ಸುಮಂಗಲೆಯರಿಂದ ಪೂರ್ಣಕುಂಭ, ಆರತಿಯೊಂದಿಗೆ ಶ್ರೀ ಹಾಲಸಿದ್ದೇಶ್ವರ ದೇವರ ಪಲ್ಲಕ್ಕಿ, ಯಲ್ಲಮ್ಮತಾಯಿಯ ಜಗ ಹಾಗೂ ಸದ್ಗುರು ಸಿದ್ಧಾರೂಢ ಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನವನಗರದಲ್ಲಿರುವ ಸಿದ್ಧಾರೂಢ ಮಠವನ್ನು ತಲುಪಿತು. ನಂತರ ಸುಮಂಗರಿಯರಿಗೆ ಉಡಿ ತುಂಬ ಧಾರ್ಮಿಕ ಕಾರ್ಯಕ್ರಮವು ಜರುಗಿದವು.ಮಹಾಲಿಂಗಪುರ ಬ್ರಹ್ಮ ವಿದ್ಯಾಶ್ರಮದ ಪೀಠಾಧಿಪತಿ ಸಹಜಾನಂದ ಮಹಾಸ್ವಾಮಿಗಳು ಪಾವನ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೊರಕಿದವು.

ಈ ಸಂದರ್ಭದಲ್ಲಿ ಗುರುಮಠದ ಗುರುಲಿಂಗಯ್ಯ ಸ್ವಾಮಿಜಿ, ಸಿದ್ಧೇಶ್ವರ ಮಠದ ಅರ್ಚಕರು ಗುರುಲಿಂಗಯ್ಯ ಸ್ವಾಮೀಜಿ, ಮಹಾಲಿಂಗಪುರದ ಸಿದ್ದರಾಮ ಶರಣರು. ಬಿಜೆಪಿ ಕುಡಚಿ ಮಂಡಲ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಸಹಕಾರಿ ದೂರಿನ ಮಲ್ಲಿಕಾರ್ಜುನ ತೇಲಿ, ಮಹಾಕಾಳಿ ಕೃಷಿ ಸೇವಾ ಕೇಂದ್ರದ ಮುಖ್ಯಸ್ಥ ಆರಿ​‍್ಜ.ಉಳ್ಳಾಗಡ್ಡಿ, ರುದ್ರ​‍್ಪ ಭದ್ರಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಪಾಟೀಲ, ಉಪಾಧ್ಯಕ್ಷ ಸಂಗಪ್ಪ ಮಿರ್ಜಿ, ಕುಮಾರ ಹಿರೇಮಠ, ಅಶೋಕ ಗುಡ್ಡದಮಣಿ,  ಶ್ರೀ ಸಿದ್ಧಾರೂಢ ಮಠ ಅಭಿವೃದ್ಧಿ ಕಮಿಟಿ ಅಧ್ಯಕ್ಷ ಲಕ್ಷ್ಮಣ ಚಿನಗುಂಡಿ, ಕಾರ್ಯದರ್ಶಿ ಈರ​‍್ಪ ನಾವಿ, ಹಾಲಪ್ಪ ಗುಲಗಾವಿ ಅಲ್ಲಪ್ಪ ಮೆಲವಂಕಿ, ಹಾಲಸಿದ್ದೇಶ್ವರ ದೇವಸ್ಥಾನದ ಅರ್ಚಕ ಶ್ರೀಮಂತ ಪೂಜಾರಿ, ಮಲ್ಲಪ್ಪ ಸಪ್ತಸಾಗರ, ಶಂಕರ ಕುಲಕರ್ಣಿ, ಹಾಲಪ್ಪ ಮೇಟಿ, ಶೇಖರ ಘಂಟಿ, ಶಂಕರ ಹಳ್ಳೂರ, ಪ್ರಕಾಶ ತೇರದಾಳ, ಶೇಖರ ಮುಕಾಶಿ, ಚಿದಾನಂದ ಯರಗಾನಿ ಇತರರು. ಮಧ್ಯಾಹ್ನ 1:30ಕ್ಕೆ ದಾಸೋಹದ ಮಹಾಮನೆಯಲ್ಲಿ ಅನ್ನಸಂತರೆ​‍್ಣ ನೆರವೇರಿತು.