ಜಿಲ್ಲಾ ಜಂಗಮ ಸಮಾಜದ ಘಟಕದಿಂದ ನೂತನವಾಗಿ ಜಿಓಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆ

Newly selected as Director of GOCC Bank from Zilla Jangam Samaj unit

ಜಿಲ್ಲಾ ಜಂಗಮ ಸಮಾಜದ ಘಟಕದಿಂದ ನೂತನವಾಗಿ ಜಿಓಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆ 

     

   ವಿಜಯಪುರ 21: ದಿನಾಂಕ 18 ಜನವರಿ 2025 ರಂದು ಶನಿವಾರ ಸಂಜೆ ಆರು ಗಂಟೆಗೆ ಜಿಲ್ಲಾ ಜಂಗಮ ಸಮಾಜದ ಘಟಕದಿಂದ ನೂತನವಾಗಿ ಜಿಓಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಜಂಗಮ ಸಹೋದರಿ ಶ್ರೀಮತಿ ಪುಷ್ಪ ಶ್ರೀಶೈಲ್ ಗಚ್ಚಿನಮಠ ಹಾಗೂ ಅವರೊಂದಿಗೆ ಆಯ್ಕೆಯಾದ ಅರ್ಜುನ್ ಲಮಾಣಿ, ಹನುಮಂತ್‌ಯಿಯಿಕೊಣದಿ, ಅಲ್ಲಾಭಕ್ಷ್‌ ವಾಲಿಕಾರ್, ಅವರ ತಂಡದ ಉಳಿದೆಲ್ಲ ನಿರ್ದೇಶಕರನ್ನು ಪರಮಪೂಜ್ಯ  ಡಾ. ವಿವೇಕಾನಂದ ದೇವರು ಕಲ್ಯಾಣೇಶ್ವರ ಹಿರೇಮಠ ಗುಣದಾಳ ಇವರ ಸಾನಿಧ್ಯದಲ್ಲಿ ಮತ್ತ ಜಿಲ್ಲಾ ಜಂಗಮ ಸಂಘದ ಅಧ್ಯಕ್ಷ ಸಂಜೀವ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು ವೇದಿಕೆ ಮೇಲೆ ಜಂಗಮ ಸಂಘದ  ಜಿಲ್ಲಾ ಕಾರ್ಯದರ್ಶಿಗಳಾದ ಎಸ್ ಕೆ ಸಾವಳಿಗಿಮಠ ಅವರು ಉಪಸ್ಥಿತರಿದ್ದರು. ಸಾನಿಧ್ಯ ವನ್ನು ವಹಿಸಿದ ಸ್ವಾಮೀಜಿಗಳು ಸಭೆಯನ್ನು ಉದ್ದೇಶಿಸಿ ಆಯ್ಕೆಯಾದ ಎಲ್ಲ ನಿರ್ದೇಶಕರು ಬ್ಯಾಂಕಿನ ಏಳಿಗೆಗಾಗಿ ಶ್ರಮಿಸಬೇಕು ನಿಮ್ಮ ಬ್ಯಾಂಕಿನ ಶಾಖೆಗಳು ರಾಜ್ಯಾದ್ಯಂತ ಹಬ್ಬಲಿ ಎಂದು ಹಾರೈಸಿದರು. ಎಸ್ ಕೆ ಸಾವಳಗಿ ಮಠ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಲ್ಪ ಸಂಖ್ಯೆಯನ್ನು ಹೊಂದಿದ ಜಂಗಮ ಸಮಾಜದ ಸಹೋದರಿಯನ್ನು ಆರಿಸಿ ತಂದದ್ದಕ್ಕಾಗಿ ತಂಡದ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಬಿಜಾಪುರ್ ತಾಲೂಕಿನ ಗ್ರಾಮೀಣ ಭಾಗದ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಎಸ್‌. ಮಠ ಅವರು ಮಾತನಾಡಿ,ಜಂಗಮ ಸಂಘದ ನೌಕರರಿಗೆ ಸಾಲ ಸೌಲಭ್ಯದ ಹಾಗೂ ಅವರ ಮಕ್ಕಳಿಗೆ ಬ್ಯಾಂಕಿನ ನೇಮಕಾತಿಯಲ್ಲಿ ಪ್ರಾಸ್ತತ್ಯ ಕೊಡಲು ವಿನಂತಿಸಿಕೊಂಡರು ನಿರ್ದೇಶಕರ ಪರವಾಗಿ ಚಂದ್ರಶೇಖರ ್‌ಜತ್ತಿಯವರು ಮಾತನಾಡಿ, ಸಣ್ಣ ಸಮುದಾಯವಾದ ಸಂಗಮ ಸಮಾಜಯಾವತ್ತು ನಮಗೆ ಇದೇ ರೀತಿ ಆಶೀರ್ವಾದ ಮಾಡುತ್ತಿರಬೇಕು ನಮ್ಮ ಏಳಿಗೆಗೆ ಸಹಕಾರ ನೀಡುತ್ತಿರಬೇಕು ತಮ್ಮ ಆಹ ವಾಲುಗಳನ್ನ ಮುಂದಿನ ಬ್ಯಾಂಕಿನ ದಿನಗಳಲ್ಲಿ ಈಡೇರಿಸಲು ಶ್ರಮಿಸುತ್ತೇವ ೆಎಂದು ಆಶ್ವಾಸನೆಯನ್ನು ನೀಡಿದರು ಇವತ್ತಿನ ಸಭೆಯಲ್ಲಿ ಜಿಲ್ಲಾ ಜಂಗಮ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಪ್ರಸಾದ್ ವಸ್ತ್ರದ ಗುರುಸಿದ್ದಯ್ಯ ಹಿರೇಮಠ್ ಪ್ರಭು ಹಿರೇಮಠ ಕಾಶಿನಾಥ್ ಹಿರೇಮಠ್ ವಿಶ್ವನಾಥ್ ಹಿರೇಮಠ ಶರಣಯ್ಯ ಹಿರೇಮಠ, ಮಹಾಂತಯ್ಯ ಮಠಪತಿ, ನಾಗಯ್ಯ ಹಿರೇಮಠ ,ಆರ್ ಜಿ ಮಠಪತಿ, ದಾನಯ್ಯ ನಂದಿ ಕೋಲ್ ಮಠ,ರಾಚಯ್ಯ ಚೌಕಿಮಠ, ರಾಚಯ್ಯ ಮಠಪತಿ, ಗುರಯ್ಯ ಯಾದವಾಡಮಠ, ನಿಂಗಯ್ಯ ಯಾದವಾಡ, ಹಿರಿಯರಾದಬಸಯ್ಯಚೆನ್ನ ಕಾಳಿ ಮಠ, ಶ್ರೀಮತಿ ರೋಗಿಮಠ ಮೇಡಂಅವರು ಹಾಗೂ ನಂದಿ ಕೋಲ್ ಮಠ ಮೇಡಂ ಅವರು ಈರಯ್ಯ ಚಿನ್ನಕಾಳಿಮಠ ಇನ್ನೂ ಅನೇಕ ಜಂಗಮಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.