ನವದೆಹಲಿ ಬಿಜೆಪಿ ಗೆಲುವು : ವಿಜಯೋತ್ಸವ
ಮಹಾಲಿಂಗಪುರ 8 : ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಪಕ್ಷದ ಮುಖಂಡರು ,ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ದೆಹಲಿ ರಾಜ್ಯದಲ್ಲಿ ಕೊನೆಯ ಗಳಿಗೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ , ಪಕ್ಷದ ಅಭ್ಯರ್ಥಿಗಳ ಎದುರಿಗೆ ಕಣದಲ್ಲಿ ಬಿಜೆಪಿಯು 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಯನ್ನು ಎದುರಿಸಿ ಏಕೈಕ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವುದು ಪಕ್ಷದ ಕಾರ್ಯಕರ್ತರಲ್ಲಿ ಸ್ಪೂರ್ತಿ ಹೆಚ್ಚಿಸಿದೆ ಎಂದು ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷರಾದ ಬಸನಗೌಡ ಪಾಟೀಲ, ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸುಭಾಸಗೌಡ ಪಾಟೀಲ, ಪುರಸಭೆ ಸದಸ್ಯ ಶೇಖರ ಅಂಗಡಿ, ಬಿಜೆಪಿ ಮುಖಂಡರಾದ ಶ್ರೀಮಂತ ಹಳ್ಳಿ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ಚಂದ್ರು ಅಷ್ಟಗಿ, ಶಿವಬಸುಗೌಂಡಿ, ಶಿವಾನಂದ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ,ಆನಂದ ಖೋತ, ಪ್ರಶಾಂತ ಮುಕ್ಕೆನ್ನವರ, ಪ್ರಕಾಶ ತಟ್ಟಿಮನಿ, ಮಹಾಂತೇಶ ಮಡಿವಾಳ,ಬಸವರಾಜ ಮಡಿವಾಳ, ನಾಗಪ್ಪ ಖೋತ, ಅಜಯ ಹಂದ್ರಾಳ,ಮಹೇಶ ಜಿಡ್ಡಿಮನಿ, ರವಿ ಮುಂಡಗನೂರ, ಪರಮಾನಂದ ಬಂದಕ್ಕನ್ನವರ, ಶಿವಾನಂದ ಸಣ್ಣಕ್ಕಿ, ಸುದೀಪ ಮೇಟಿ, ಚೇತನ ಬಂಡಿವಡ್ಡರ, ಆಕಾಶ ನಾವಿ, ನಾಗಲಿಂಗ ಬಡಿಗೇರ, ಅಮಿತಷಾ ಮದ್ದಿನಮಠ,ರವಿ ಗಿರಿಸಾಗರ, ಪ್ರಣವ ಅಂಗಡಿ,ಮಹಾಲಿಂಗ ಕಲಾಲ, ರಾಜು ಕೋಳ್ಳಿಗುಡ್ಡ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.