ಜೀವಜಲಕ್ಕೆ ನಿತ್ಯ ಪರದಾಟ: ಕೃಷಿಹೊಂಡದ ನೀರು ಬಳಕೆ

ಲೋಕದರ್ಶನ ವರದಿ

ಕೊಪ್ಪಳ 18: ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದ್ದರೂ ವಿಪರೀತ ಬೇಸಿಗೆಯ ತಾಪ ತಗ್ಗಿಲ್ಲ.ಜಲಮೂಲಗಳೆಲ್ಲಾ ಬಹುತೇಕ ಈಗ ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಕೊಪ್ಪಳ, ಯಲಬುಗರ್ಾ, ಕುಕನೂರು, ಕುಷ್ಟಗಿ ಸೇರಿದಂತೆ ಜಿಲ್ಲೆಯ ಇನ್ನಿತರೆ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನ ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. 

ಅದರಲ್ಲೂ ಕೊಪ್ಪಳದ ಕಟ್ಟಕಡೆಯ ಗ್ರಾಮವಾಗಿರುವ ಗುಡಗೇರಿಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಆ ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಆಯುವರ್ೇದ ಕಾಲೇಜ್ನ ಹಿರಿಯ ಪ್ರಾಧ್ಯಾಪಕರಾದ ಡಾ. ಕುಮಾರಸ್ವಾಮಿ.ಬಿ. ಹಿರೇಮಠರ ಕೃಷಿಹೊಂಡದಲ್ಲಿ ಸಂಗ್ರಹವಾಗಿರುವ ನೀರೇ, ಗುಡಗೇರಿ ಗ್ರಾಮದ ಜನರ ದಾಹ ನೀಗಿಸುತ್ತಿದೆ. ಪತ್ರಿಕೆಯು ಡಾ. ಕುಮಾರಸ್ವಾಮಿ.ಬಿ.ಹಿರೇಮಠರನ್ನು ಮಾತನಾಡಿಸಿದಾಗ ಗ್ರಾಮದ ಜನತೆ ಕುಡಿಯಲು ತಮ್ಮ ಕೃಷಿಹೊಂಡದ ನೀರು ಬಳಕೆ ಮಾಡುತ್ತಿರುವುದಕ್ಕೆ ನಮಗೆ ಸಂತಸವಾಗಿದೆ ಮನುಷ್ಯನಿಗೆ ಜೀವಜಲ ಅಮೂಲ್ಯವಾದದ್ದು ಸರಕಾರ ತಮ್ಮ ಹೊಲದಲ್ಲಿ ಈಗಿರುವ ಕೃಷಿಹೊಂಡವನ್ನು ಇನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಜನತೆಗೆ ಕುಡಿಯುವ ನೀರು ಒದಗಿಸಲಿ ಎಂದರು.

ಗ್ರಾಮದ ಜನತೆ ಎತ್ತಿನಬಂಡಿ, ಬೈಕ್, ಸೈಕಲ್ ಹಾಗೂ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ನೀರು ತರುತ್ತಾರೆ,ಕೃಷಿ ಹೊಂಡದ ನೀರೇ ಈ ಗ್ರಾಮದ ಜನರಿಗೆ ಆಸರೆ.

ಇದೇ ರೀತಿಯಲ್ಲಿ ಕುಕನೂರು, ಯಲಬುಗರ್ಾ, ಕುಷ್ಟಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿಯೂ ನೀರಿಗಾಗಿ ತತ್ವಾರವಿದೆ. ಗ್ರಾಮೀಣ ಭಾಗದಲ್ಲಿ ಶುದ್ಧ ನೀರಿನ ಘಟಕಗಳಿದ್ದರೂ, ಅವುಗಳು ಕೆಟ್ಟು ಕೆಲಸಕ್ಕೆ ಬಾರದಂತಾಗಿವೆ. ಕುಕನೂರು ತಾಲೂಕಿನ ಬಿನ್ನಾಳ, ಸೋಂಪುರ, ಸಿದ್ನೇಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಸಮಸ್ಯೆ ಬಿಗಡಾಯಿಸಿದ್ದು,ನೀರಿಗಾಗಿ ಪಕ್ಕದ ಚಿಕ್ಕೇನಕೊಪ್ಪ ಗ್ರಾಮದ ಕೆರೆಗೆ ಹೋಗಬೇಕಿದೆ.ಪ್ರತಿ ಬಾರಿಯೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದರೆ, ಅದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಈ ಬಗ್ಗೆ ಕೆಲಸ ಮಾಡುವುದಿಲ್ಲ ಎಂದು ಬಿನ್ನಾಳ ಗ್ರಾಮದ ಜನತೆ   ಅಸಮಾಧಾನ ತೋಡಿಕೊಂಡರು.