ಲೋಕದರ್ಶನ ವರದಿ
ಸಂಬರಗಿ 02: ಗಡಿ ಗ್ರಾಮದಲ್ಲಿ ಇರುವ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಸ್.ನೇಮಗೌಡ ಇವರು ಭೇಟಿ ನೀಡಿ ಮಕ್ಕಳಿಗೆ ಶಿಕ್ಷಕರು ಸರಿಯಾಗಿ ಪಾಠ ಹೇಳುತ್ತಾರೆ ಅಥವಾ ಇಲ್ಲವೋ ಎಂಬುದನ್ನು ತಾವೇ ಖುದ್ದಾಗಿ ತರಗತಿಗಳಿಗೆ ಹೋಗಿ ವಿದ್ಯಾಥರ್ಿಗಳನ್ನು ವಿಚಾರಿಸಿ ನಿರ್ಲವಹಿಸುತ್ತಿರುವ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಬೊಮ್ಮನಾಳ, ಖಿಳೇಗಾಂವ, ಶಿರೂರ, ಆಜೂರ ಮತ್ತು ಅರಳಿಹಟ್ಟಿ ಸೇರಿದಂತೆ ಅನೇಕ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಕುರಿತು ಮಾಹಿತಿ ಪಡೆದರು. ಪ್ರತಿ ಶಾಲೆಗೆ ಶಿಕ್ಷಕರ ಕೊರತೆ ಎಷ್ಟಿದೆ? ಕನ್ನಡ ಶಿಕ್ಷಕರು ಸರಿಯಾಗಿ ಬೋಧನೆ ಮಾಡುತ್ತಾರೋ ಇಲ್ಲವೋ? ಎಂದು ಕೂಲಂಕುಶವಾಗಿ ಮಾಹಿತಿ ಪಡೆದರು. ಗಡಿ ಭಾಗದ ಕನ್ನಡ ಶಾಲೆಗಳಿಗೆ ಮಕ್ಕಳ ಸಂಖ್ಯೆ, ದಾಖಲಾತಿ ಹೆಚ್ಚು ಮಾಡಿಸಬೇಕು. ಯಾವ ಮಕ್ಕಳ ಶಾಲೆಯಿಂದ ಹೊರಗುಳಿದ ಮಕ್ಕಳ ಪಾಲಕರಿಗೆ ತಿಳುವಳಿಕೆ ಹೇಳಿ ಶಾಲೆಗೆ ಕಳುಹಿಸಲು ಪ್ರಯತ್ನ ಮಾಡಬೇಕು.
ಗಡಿ ಭಾಗದ ಶಾಲೆಗಳಿಗೆ ಶಿಕ್ಷಕರು ಶಾಲಾ ವೇಳೆಯಲ್ಲಿ ಹಾಜರಿರಬೇಕು. ಸರಿಯಾಗ ಬರದ ಶಿಕ್ಷಕರ ಮೇಲೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವದು. ಅರಳಿಹಟ್ಟಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಿ ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಬರುವ ವರ್ಷದಲ್ಲಿ ಆ ಶಾಲೆಗೆ ಹೆಚ್ಚುವರಿ ಶಿಕ್ಷಕರ ನೇಮಕಾತಿ ಮಾಡಲಾಗುವದು ಎಂದು ಹೇಳಿದರು.