ಲೋಕದರ್ಶನ ವರದಿ
ಕೊಪ್ಪಳ 16: ತಾಲೂಕಿನ ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಫಂಡಿತ್ ಜವಾಹರಲಾಲ್ ನೆಹರೂ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶಾಲಾ ಸಂಸತ್ತು ಪ್ರಧಾನ ಮಂತ್ರಿ ಯೋಗೇಶ ಭೋವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿ ಮಾತನಾಡಿ ನೆಹರೂರವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ, ಮಕ್ಕಳ ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ. ಮಕ್ಕಳಿಗೂ ಕೂಡಾ ಈ ವೇದಿಕೆಯ ಮೇಲೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದೆ ಎಂದರೆ ಮಾಜಿ ಪ್ರಧಾನಿ ನೆಹರೂರವರೇ ಕಾರಣ ಎಂದು ಸ್ಮರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯೋಪಾಧ್ಯಾಯ ಫಕೀರಪ್ಪ ಎನ್ ಅಜ್ಜಿ ಮಾತನಾಡಿ ಎಲ್ಲಾ ಮಕ್ಕಳಿಗೂ ಸಾಮಾನ್ಯ ಹಕ್ಕು, ಸೌಲತ್ತುಗಳು ಸಿಗುವಂತಾಗಬೇಕು. ಬಾಲಕಾಮರ್ಿಕ ಪದ್ದತಿ ತೊಲಗಬೇಕು ಮಕ್ಕಳ ಭವಿಷ್ಯದಲ್ಲಿ ದೇಶದ ಭವಿಷ್ಯ ಅಡಗಿದೆ ಎಂಬುದನ್ನು ತಿಳಿದಾಗ ಮಾತ್ರ ಈ ಜಯಂತಿ ಆಚರಣೆ ಸಾರ್ಥಕ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಕೊಟ್ರಯ್ಯ ಗುಡ್ಲಾನೂರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪಪ್ರಧಾನ ಮಂತ್ರಿ ಅನುಶ್ರೀ, ಶಿಕ್ಷಣ ಮಂತ್ರಿ ಅಶ್ವಿನಿ, ಕ್ರೀಡಾಮಂತ್ರಿ ಕೊಟ್ರಯ್ಯ, ಆರೋಗ್ಯ ಮಂತ್ರಿ ಯಶೋಧಾ, ಮಹಿಳಾ ಮಂತ್ರಿ ಭಾರತಿ, ಆಹಾರ ಮಂತ್ರಿ ಮಂಜುನಾಥ, ಸಾಂಸ್ಕೃತಿಕ ಮಂತ್ರಿ ರಕ್ಷಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿಕ್ಷಕರಾದ ರಜೀಯಾ ಬೇಗಂ ಪ್ರಾಥರ್ಿಸಿದರು. ನಾಗರತ್ನ ಮಾಲಿ ಪಾಟೀಲ ನಿರೂಪಿಸಿದರು. ಮರಿಯಮ್ಮ ಹರಿಜನ ಸ್ವಾಗತಿಸಿದರು ಕೊನೆಯಲ್ಲಿ ಫಕೀರಮ್ಮ ತಳವಾರ ವಂದಿಸಿದರು.