ಪಾಲಿಕೆ ಅಧಿಕಾರಿಗಳ ನಿರ್ಲಕ್ಷಯ: ಅಪಾರ ನೀರು ಪೋಲು

ಲೋಕದರ್ಶನ ವರದಿ

ಬೆಳಗಾವಿ 9, ನಗರದ ಚನ್ನಮ್ಮ ವೃತ್ತದ ಬಳಿ ಅಪಾರ ನೀರು ಪೋಲಾಗುತ್ತಿದೆ. ಇತ್ತ ಕುಡಿಯುವ ನೀರಿನ ಕೊರತೆ ಇದ್ದಾಗಲೇ ಅತ್ತ ಅಷ್ಟೊಂದು ನೀರು ರಸ್ತೆಯ ಮೇಲೆ ಹರಿದು ಚರಂಡಿ ಸೇರುತ್ತಿದೆ. ನೀರು ಪೋಲಾಗುವದರ ಜೊತೆಗೆ ರಸ್ತೆ ಸಂಚಾರದಲ್ಲಿರುವ ದ್ವಿಚಕ್ರ ವಾಹನದಾರರಿಗೂ ಕಂಟಕವಾಗಿದೆ. ವೃತ್ತದ ತಿರುವಿನಲ್ಲಿ ನೀರು ಹರಿದು ಹೋಗುತ್ತಿರುವುದರಿಂದ ದ್ವಿಚಕ್ರ ವಾಹಗಳು ತಿರುವಿನಲ್ಲಿ ಸಂಚರಿಸುವಾಗ ವಾಹನದ ಜಕ್ರಗಳು ಜಾರುವ ಸಂಭವವಿದ್ದು, ಸವಾರರು ಬಿದ್ದು ಪ್ರಾಣ ಹಾನಿಯಾಗುವ ಸಂಭವವೂ ಇದೆ.

ಹತ್ತಿರದಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿ, ನ್ಯಾಯಾಲಯ, ಪೊಲೀಸ ಚೌಕಿಗಳಿವೆ. ಎಲ್ಲ ಅಧಿಕಾರಿಗಳು ಇದೇ ಮಾರ್ಗವಾಗಿ ತಮ್ಮ ಕಚೇರಿ-ಕೆಲಸಗಳಿಗೆ ಹೋಗಬೇಕು. ಆದರೂ ಯಾರೋಬ್ಬ ಅಧಿಕಾರಿಗಳ ಕಣ್ಣಿಗೂ ಇದು ಕಂಡುಬಂದಿಲ್ಲವೇ? ಅಥವಾ ಕಂಡರೂ ಕಾಣದಂತೆ ವತರ್ಿಸುತ್ತಿರುವರೇ?

ನಗರದ ಆಡಳಿತ ಮಂಡಳಿ ಆದಷ್ಟೂ ಬೇಗನೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ನೀರು ಪೋಲಾಗದಂತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ.