ಧಾರವಾಡ04: ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿದ್ದು ಪರಸ್ಪರ ಸಹಕಾರ ಸಹಬಾಳ್ವೆಯ ಸಂಕೇತ ಜನಪದ ಸಾಹಿತ್ಯವಾಗಿದೆ. ದುಡಿತವನ್ನೇ ನಾಡಿಮಿಡಿತವಾಗಿಸಿಕೊಂಡ ಜನರು ಬೆವರ ಹನಿಗೆ ದನಿಗೂಡಿಸಿದಾಗ ಹೊರಹೊಮ್ಮಿದ ಸಾಹಿತ್ಯವಾಗಿದೆ. ಅಲಿಖಿತವಾಗಿ ಬಾಯಿಯಿಂದ ಬಾಯಿ ಹರಿದುಬರುವುದರ ಜೊತೆಗೆ ಸಾಂಸ್ಕೃತಿಕ ಸತ್ಯವನ್ನು ಹೊತ್ತು ಸಾಗುತ್ತದೆ. ಬಾಂಧವ್ಯಗಳ ಬೆಸುಗೆ ಸಂಬಂಧಗಳ ಸತ್ವವನ್ನು ಇಲ್ಲಿ ಕಾಣಬಹುದಾಗಿದೆ.
ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಜಾನಪದ ಸಾಹಿತ್ಯದ ಸಾತ್ವಿಕ ಸಂಪತ್ತನ್ನು ಯುವಕರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಉಪನ್ಯಾಸಕ ಡಾ. ಕೆ. ಗಿರಿಮಲ್ಲ ನಗರದ ಗು.ವಿ.ಕ ಆವರಣದ ವಿಜ್ಞಾನೇಶ್ವರ ಸರಕಾರ ಕಾನೂನು ಮಹಾವಿದ್ಯಾಲಯದಲ್ಲಿ ಬೋಧಿವೃಕ್ಷ ಸಾಂಸ್ಕೃತಿಕ ಸೇವಾ ಸಂಘ ಆಯೋಜಿಸಿದ 'ಬೆವರ ಹನಿ ಜಾನಪದ ದನಿ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಲಬಗರ್ಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸಿ. ಸೋಮಶೇಖರ ಮಾತನಾಡಿ ಜಾನಪದ ಸಾಹಿತ್ಯ ಅಳಿವಿಲ್ಲದ ಸಾಹಿತ್ಯ ವಿಶ್ವರೂಪವಾದ ಇಂತಹ ಸಾಹಿತ್ಯವನ್ನು ಕಾಪಾಡಬೇಕಾಗಿದೆ ಎಂದರು. ಕಾಲೇಜಿನ ಪ್ರಾಚಾರ್ಯ ಡಾ. ಶಿವಾನಂದ ಲೇಂಗಟಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಪ್ರಾಧ್ಯಾಪಕಿ ಡಾ. ಚಿತ್ಕಳ. ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಕಲಬುರಗಿ ಅಧ್ಯಕ್ಷ ಎಂ.ಬಿ. ನಿಂಗಪ್ಪ, ಮಹಾದಾಯಿ ಹೋರಾಟ ಸಮಿತಿ ರೈತ ಸೇನಾ ಕನರ್ಾಟಕದ ಗೌರವಾಧ್ಯಕ್ಷ ಶಿವಪ್ಪ ಬಿ. ಹೊರಕೇರಿ ವೇದಿಕೆಯ ಮೇಲಿದ್ದರು.
ಜಾನಪದ ತಜ್ಞ ದಿವಂಗತ ಪ್ರೊ. ಮೃತ್ಯಂಜಯ ಬಿ. ಹೊರಕೇರಿ ರವರ ಸ್ಮರಣಾರ್ಥವಾಗಿ ಲೇಖಕ ಹೆಚ್.ಎಸ್. ಬೇನಾಳ ಹಾಗೂ ಗಾಯಕ ಸಿದ್ದಾರ್ಥ ಚಿಮ್ಮಯಿದಲಾಯಿಯವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ಸುಭಾಷ ವೈ. ಚಕ್ರವತರ್ಿ ಸರ್ವರನ್ನು ಸ್ವಾಗತಿಸಿದರು. ಪ್ರಾಧ್ಯಾಪಕಿ ವಾಣಿ ನಿರೂಪಿಸಿದರು. ಪ್ರಾರ್ಥನೆ ಗೀತೆ ಶಿವಲೀಲಾ ಸಲ್ಲಿಸಿದರು. ಶರಣಪ್ಪ ಅವರು ವಂದನಾರ್ಪಣೆ ಮಾಡಿದರು.
ಮೃತ್ಯಂಜಯ ಹೊರಕೇರಿಯವರ ಧರ್ಮಪತ್ನಿ ಪುತ್ರ ಹಾಗೂ ಕುಟುಂಬದ ಇತರ ಸದಸ್ಯರು ಹಾಗೂ ಸೋಮಶೇಖರ ರಾಮಬಾಣ, ಗು.ವಿ.ಕ. ಎ.ಇ.ಇ. ಅಶೋಕ ಜಗಳಮಡಿ, ಮೊಹಮ್ಮದ ನಜೀರ ಅಹ್ಮದ, ಕಲಾವಿದ ಶ್ರೀಧರ ಹೊಸಮನಿ, ಶ್ರೀನಾಥಗೌಡ, ರವಿ, ನಿಂಗಣ್ಣ ಪೂಜಾರಿ, ಪಿ.ಡಿ.ಓ. ಬಂಡೆಪ್ಪ ಧನ್ನಿ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾಥರ್ಿಗಳು ಸಿಬ್ಬಂದಿ ವರ್ಗ ಸೇರಿದಂತೆ ಹಲವಾರು ಜನ ಭಾಗವಹಿಸಿದರು.