ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ ನೀಡುವಂತೆ ಕರವೇ ಒತ್ತಾಯ


ಬೆಳಗಾವಿ : ಶಾಲಾ ಕಾಲೇಜ ವಿದ್ಯಾಥರ್ಿಗಳಿಗೆ ಈ ಕೂಡಲೆ ಉಚಿತ ಬಸ್ಪಾಸ್ ನೀಡುವಂತೆ ಆಗ್ರಹಿಸಿ ಮಂಗಳವಾರ ಕನರ್ಾಟಕ ರಕ್ಷಾಣಾ ವೇದಿಕೆ ನಗರ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮಂಗಳವಾರ ದಿನದಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ, ನಗರದದಲ್ಲಿ ಹಳ್ಳಿಗಳಿಂದ ಬರುವ ಎಲ್ಲಾ ಶಾಲಾ ಕಾಲೇಜ ವಿದ್ಯಾಥರ್ಿಗಳಿಗೆ ಸರಿಯಾಗಿ ಬಸ್ಗಳ ವ್ಯವಸ್ಥೆ ಇರುವುದಿಲ್ಲ. ಹಾಗೂ ಮುಖ್ಯ ಮಂತ್ರಿ ಕುಮಾರಸ್ವಾಮಿವರು ನೀಡಿದ ಮಾತಿನಂತೆ ಸರಕಾರಿ ಶಾಲಾ ಕಾಲೇಜ್ ವಿದ್ಯಾಥರ್ಿಗಳಿಗೆ ಮಾತ್ರ ಉಚಿತ ಬಸ್ಪಾಸ್ ನೀಡುವುದಾಗಿ ಹೇಳಿದಾರೆ. ಅದು ಕೆವಲ ಆಶ್ವಾಸನೆ ಆಗದೇ ಆದಷ್ಟು ಬೇಗ ವಿದ್ಯಾಥರ್ಿಗಳಿಗೆ ಬಸ್ಪಾಸ್ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಇಂದಿನ ಪ್ರತಿಭಟನೆಯಲ್ಲಿ ನಗರ ಘಟಕದ ಅಧ್ಯಕ್ಷ ಸಂತೋಷ ರಾಠೋಡ, ಬಸವರಾಜ ಅವರೊಳ್ಳಿ, ಪ್ರಕಾಶ ಲಮಾಣಿ, ಸತೋಷ ತಳ್ಳಿಮಣಿ, ಶಶಿಕಾಂತ ಅಷ್ಟೆಕರ, ಆನಂದ ಪೂಜಾರಿ, ಅಭೀಷೇಕ ರಾಯಬಾಗ, ಕೃಷ್ಣಾ ನಾಯಕರ, ಚಂದ್ರಕಾಂತ ಜೋಳನ್ನವರ, ಗುರುನಾಥ ಪಮ್ಮಾರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.