ಲೋಕದರ್ಶನ ವರದಿ
ಬೆಳಗಾವಿ 03: ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ಕಾಲದಲ್ಲಿ ಪ್ರೋತ್ಸಾಹ ದೊರಕದ ಕಾರಣ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಘ ಸಂಸ್ಥೆಗಳು ಸ್ಥಳೀಯ ಮಟ್ಟದಲ್ಲಿ ಕ್ರೀಡೆಸ್ಫಧರ್ೆಗಳನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅಂತರ್ರಾಷ್ಟ್ರೀಯ ಕ್ರಿಡಾಪಟು ಮಲಪ್ರಭಾ ಜಾಧವ ಅವರು ಇಂದಿಲ್ಲಿ ಹೇಳಿದರು.
ರವಿವಾರ ಬೆಳಿಗ್ಗೆ ಬೆಳಗಾವಿಯ ಯುನಿಯನ್ ಜಿಮಖಾನಾ ಮೈದಾನದಲ್ಲಿ ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ವತಿಯಿಂದ ಆಯೋಜಿಸಲಾದ ಮೂರು ದಿನಗಳ ಜಿತೋ ಜೆಪಿಎಲ್ ಕ್ರೀಡಾ ಸ್ಫಧರ್ೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನೂ ಸಹ ಗ್ರಾಮೀಣ ಪ್ರದೇಶದಿಂದ ಬಂದಿದ್ದು, ನಾನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅನೇಕರು ಸಹಾಯ ಮತ್ತು ಸಹಕಾರ ನೀಡಿದ್ದಾರೆ. ಬೆಳಗಾವಿಯಂತಹ ಪ್ರದೇಶದಲ್ಲಿ ಅನೇಕ ಉದಯೋನ್ನುಖ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಉತ್ತೇಜನ ದೊರಕಿದ್ದಲ್ಲಿ ಅವರೂ ಸಹ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿಗೆ ಕೀತರ್ಿ ತರಬಹುದಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಕ್ರೀಡಾ ಸ್ಪಧರ್ೆಯ ಪ್ರಾಯೋಜಕ ಪ್ರದೀಪ ಹೊಸಮನಿ , ಹೇಮೇಂದ್ರ ಪೋರವಾಲ ಅವರು ಮಾತನಾಡಿದರು. ಉದ್ಯಮಿ ಗೋಪಾಲ ಜಿನಗೌಡ ಅವರು ಮಲಪ್ರಭಾ ಜಾಧವ ಅವರನ್ನು ಸನ್ಮಾನಿಸಿ ಗೌರವಿಸಿದರು. ಜಿತೋ ಸಂಸ್ಥೆಯ ಬೆಳಗಾವಿ ವಿಭಾಗದ ಅಧ್ಯಕ್ಷ ಸತೀಶ ಮೆಹತಾ ಅತಿಥಿಗಳನ್ನು ಸ್ವಾಗತಿಸಿದರು. ಕ್ರೀಡಾ ಸ್ಫಧರ್ೆಯ ಸಂಯೋಜಕ ನಿತಿನ ಪೋರವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಜಿತೋ ಸಂಸ್ಥೆಯ ಉಪಾಧ್ಯಕ್ಷ ಮನೋಜ ಸಂಚೇತಿ, ಸದಸ್ಯರಾದ ಜಬರಚಂದ ಸಾಮಸುಖ,ಸುನಿಲ ಕಟಾರಿಯಾ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದಶರ್ಿ ವಿಕ್ರಮ ಜೈನ ವಂದಿಸಿದರು. ಅಭಿಜೀತ ಬೋಜನ್ನವರ ಕಾರ್ಯಕ್ರಮ ನಿರೂಪಿಸಿದರು. ಜಿತೋ ಜೆಪಿಎಲ್ ಕ್ರೀಡಾ ಸ್ಪಧರ್ೆಯಲ್ಲಿ ಕ್ರಿಕೆಟ್, ಕ್ಯಾರಮ್, ಟೆಬಲ್ ಟೆನಿಸ, ಚೆಸ್ ಮತ್ತು ಬ್ಯಾಡಮಿಂಟನ ಸ್ಪಧರ್ೆಗಳನ್ನು ಆಯೋಜಿಸಲಾಗಿದೆ.