ಮುಧೋಳ 22: ಟಿ.ವಿ, ಹಾಗೂ ಮೊಬಾಯಿಲ್ ದಾಳಿಯಿಂದ ಅಳಿವಿನ ಅಂಚಿನಲ್ಲಿರುವ ವೃತ್ತಿರಂಗಭೂಮಿಗೆ ಸರಕಾರ ಹಾಗೂ ಸಾರ್ವಜನಿಕರು ಪ್ರೊತ್ಸಾಹ ನೀಡಬೇಕಾಗಿದೆಂದು ವಿರಕ್ತಮಠ ಗವಿಮಠದ ನಿಜಗುಣ ದೇವರು ಹೇಳಿದರು.
ಅವರು ನಗರದ ರನ್ನ ಭವನದಲ್ಲಿ, ಶ್ರೀ ಕೃಷ್ಣ ದೇವರಾಯ ನಾಟ್ಯ ಸಂಘ ವಿಜಯಪೂರ ಕಲಾ ತಂಡದಿಂದ ಪ್ರದಶರ್ಿಸಲ್ಪಟ್ಟ ಗೌಡ ಮೆಚ್ಚಿದ ಹುಡಗಿ, ನಾಟಕವನ್ನು ಉಧ್ಘಾಟಿಸಿ ಮಾತನಾಡಿ ಓಳ್ಳೆಯ ಹಳೆಯ ಸಾಮಾಜಿಕ ಹಾಗೂ ರಸವತ್ತಾದ ನಾಟಕಗಳನ್ನು ಪುನಶ್ಚೇತನಗೊಳಿಸುವ
ಕೇಲಸವನ್ನು ಸರಕಾರ ಮಾಡಿ ಮುಂದಿನ ಪಿಳಿಗೆಗೆ ರಂಗಭೂಮಿಯ ಮಹತ್ವ ತಿಳಿಸಿ ಕೊಡಬೇಕೆಂದು ಶ್ರೀಗಳು ಹೇಳಿದರು.
ಕನ್ನಡ ಮತ್ತೂ ಸಂಸ್ಕೃತಿ ಇಲಾಖೆ ಬಾಗಲಕೋಟ ಹಾಗೂ ವಿಜಯ ಮಹಾಂತೇಶ್ವರ ನಾಟ್ಯ ಸಂಘ ಇಲಕಲ್ ಇವರ ಆಶ್ರಯದಲ್ಲಿ ನಡೆದ ಸಾಮಾಜಿಕ ನಾಟಕವನ್ನು ಪತ್ರಕರ್ತ ಅಶೋಕ ಕುಲಕಣರ್ಿ ಅವರು ಉಧ್ಘಾಟಿಸಿ ಮಾತನಾಡಿ ಕಲಾವಿದರ ಬದುಕು ಅವರ ಆರೋಗ್ಯ, ಅವರ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ಅವರನ್ನು ಗುರುತಿಸಿ ಮಾಶಾಸನ ನೀಡಬೇಕು ಹಾಗೂ ಈಗಿದ್ದ ಮಾಶಾಸನವನ್ನು ಒತ್ತಾಯಿಸಿದರು.
ವೇದಿಕೆಯ ಮೇಲೆ ದುತ್ತರಗಿ ಟ್ರಸ್ಟ ಸಂಚಾಲಕ ಚಂದ್ರಶೇಖರ ದೇಸಾಯಿ, ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ ಹಿರಿಯರಾದ ಕಲ್ಲಪ್ಪಣ್ಣ ಸಬರದ, ಅಲ್ಲಯ್ಯ ದೇವರಮನಿ, ರಮೇಶ ನಿಡೋಣಿ, ಬಸವರಾಜ ಪರೀಟ, ಸಿ.ಎಚ್.ಪೂಜಾರಿ, ಶ್ರೀಕಾಂತ ಪೂಜಾರಿ ಉಪಸ್ಥಿತರಿದ್ದರು.ನಾಟಕ ಮಾಲಿಕರಾದ ಬಿ.ರಾಜ್ ಎಂಬತ್ನಾಳ ಸ್ವಾಗತಿಸಿದರು, ಸಂಗಮೇಶ ನೀಲಗುಂದ ನಿರುಪಿಸಿದರು. ಮ್ಯಾನೇಜರ್ ಭೀಮರಾವ ಚವ್ಹಾಣ ವಂದಿಸಿದರು. ದೇಶಮುಖ ಅವರ ಹಿಜಡಾನ ಪಾತ್ರ ಜನಮನ ರಂಜಿಸಿತು.