ಧಾರವಾಡ : ತಾಲೂಕಿನ ರೈತರ ಬಾಳು ಹಸನುಗೊಳಿಸಲು ತುಪರಿ ಹಳ್ಳದ ನೀರನ್ನು ವಿವಿಧ ಕೆರೆಗಳಿಗೆ ಹರಿಸುವ ಜೊತೆಗೆ ಅಂತರ್ ಜಲ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಅದರ ಸಂಪೂರ್ಣ ಸದ್ಭಳಕಗೆ ರಾಜ್ಯ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡ ಗ್ರಾಮೀಣ ಶಾಸಕಅಮೃತ ದೇಸಾಯಿ ಹೇಳಿದರು.
ಅವರು ಗುರುವಾರ ಧಾರವಾಡ ತಾಲೂಕಿನ ತಡಕೋಡ, ಗರಗ, ನೀರಲಕಟ್ಟಿ, ಹಳೆತೇಗೂರ, ಬೋಗೂರ ಮತ್ತು ಬೊಕ್ಯಾಪುರ ಕೆರೆ ಸೇರಿದಂತೆ 9 ಕೆರೆಗಳಿಗೆ ಏತ ನೀರಾವರಿ ಯೋಜನೆಯ ಜಾಕವೆಲ್ ಮತ್ತು ಪಂಪಹೌಸ್ ಬೃಹತ್ತ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಕುರಿತು ಈಗಾಗಲೇ ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲು ಆದಷ್ಟು ಬೇಗ ನೀಲನಕ್ಷೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಸ್ತಾವನೆ ಸಿದ್ದಗೊಂಡ ಬೆನ್ನಲ್ಲೇ ರಾಜ್ಯ ಸರಕಾರದಿಂದ ಇನ್ನಷ್ಟು ಅನುದಾನತಂದು ಕೊನೆ ಅಂಚಿನ ರೈತರ ಹೊಲಗಳಿಗೆ ನೀರು ತಲುಪುವಂತಾಗಲು ಶ್ರಮಿಸಲಾಗುವುದು ಎಂದರು.
ಇದಕ್ಕೂ ಮುನ್ನ ಅಮೃತ್ ದೇಸಾಯಿ ಅವರು ಗರಗ ಗ್ರಾಮಕ್ಕೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬಳಿಕ ಗರಗ ಗ್ರಾಮದಲ್ಲಿ ಕರ್ನಾ ಟಕ ನೀರಾವರಿ ನಿಗಮದಡಿ ಗ್ರಾಮದ ಅಯ್ಯಪ್ಪನ ಗುಡಿ ಹತ್ತಿರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾ ಣ ಕಾಮಗಾರಿ, ಪಂಚಾಯತ ರಾಜ್ಯ ಇಲಾಖೆ ಅನುದಾನದಡಿ ಗ್ರಾಮದ ಕುರ್ಲಿ ಲೇಔಟಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾ ಣ ಕಾಮಗಾರಿ, ಲೋಕೋಪಯೋಗಿ ಇಲಾಖೆಯ 5054 ಎಸ. ಸಿ . ಪಿ ಯೋಜನೆ ಅನುದಾನದಲ್ಲಿ ಗ್ರಾಮದ ಎಸ.ಟಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾ ಣ ಕಾಮಗಾರಿ, ದುಬ್ಬನಮರಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಗ್ರಾಮದ ಎಸ .ಟಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾ ಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದರು.
ಸತೀಶ ಶಟೋಜಿ, ಶಿವಲಿಂಗ ಕಾಶಿಗಾರ್, ಮಡಿವಾಳಿ ಮಾಳಾಪುರ, ಕಿರಣ ಬುಲಬುಲೆ, ಪ್ರವೀಣ್ ಕುರ್ಲಿ , ವೀರೇಂದ್ರ ಜೋಗಿ, ದೇವಪ್ಪಣ್ಣ ನರಸಿಂಗನವರ, ಈರಣ್ಣ ಕಲಿರ್ಂಗಣ್ಣವರ್, ಬಸವರಾಜ್ ಬುಡರಕಟ್ಟಿ, ರಾಜು ಜೀವಣ್ಣವರ್, ಮಹೇಶ್ ಯಲಿಗಾರ, ವಿಠ್ಠಲ ಪೂಜಾರ್ ಹಾಗು ಗರಗ ಮತ್ತು ದುಬ್ಬನಮರಡಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.