ಕಲಾಪ್ರತಿಭೆಯೊಂದಿಗೆ ನಯವಿನಯ ಅಗತ್ಯ : ಹಿಪ್ಪರಗಿ ಸಿದ್ಧರಾಮ

ಧಾರವಾಡ 12: ಕಲಾವಿದನಲ್ಲಿಯ ಪ್ರತಿಭೆಯು ಪ್ರಕಟಗೊಳ್ಳಬೇಕಾದರೆ ನಯವಿನಯ, ತಾಳ್ಮೆ, ಸಹಕಾರ ಮನೋಭಾವದಂತಹ ಪೂರಕ ಗುಣಗಳನ್ನು ಆತ ಮೈಗೂಡಿಸಿಕೊಳ್ಳುವುದು ಅವಶ್ಯಕ ಎಂದು ರಂಗ ಸಮಾಜದ ಸದಸ್ಯ ಹಿಪ್ಪರಗಿ ಸಿದ್ಧರಾಮ ಅಭಿಪ್ರಾಯ ಪಟ್ಟರು. 

ಅವರು ಇತ್ತೀಚೆಗೆ (07-12-2019) ಧಾರವಾಡದ ಭಗವಾನ ಬುದ್ಧ ಪ್ರತಿಷ್ಟಾನ ಟ್ರಸ್ಟ್ ಆಯೋಜಿಸಿದ್ದ 'ಕಲಾ ಸೌರಭ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಕಲಾಲೋಕವೆಂಬುದು ಸಮುದ್ರವಿದ್ದಂತೆ. ಸಮುದ್ರದಲ್ಲಿ ರಾಜನಂತೆ ಮೆರೆದಾಡುವ ಬೃಹತ್ ತಿಮಿಂಗಲವು ಸತ್ತಾಗ ಅದೇ ಸಮುದ್ರ ತಿಮಿಂಗಲದ ಶವವನ್ನು ಕ್ಷಣವೂ ತನ್ನ ಒಡಲಲ್ಲಿ ಇಟ್ಟುಕೊಳ್ಳದೇ ದಡಕ್ಕೆ ತಂದು ಬಿಸಾಕುವಂತೆ ಕಲಾಲೋಕವೆಂಬ ಸಮದ್ರದಲ್ಲಿ ಕಲಾವಿದನು ತನ್ನ ಸದ್ಗುಣಗಳಿಂದ ಮಾತ್ರ ಬಹುಕಾಲ ಪ್ರತಿಭಾ ಪ್ರದರ್ಶನ ಮಾಡಬಲ್ಲನು. ಇಲ್ಲದಿದ್ದರೆ ಕಲಾಲೋಕವು ಸೈಲಂಟಾಗಿ ಕತ್ತಲೆಗೆ ಸರಿಸುತ್ತದೆ ಎಂದು ವಿವರಿಸಿದರು. 

ಅಧ್ಯಕ್ಷತೆ ವಹಿಸಿದ್ದ ಪಕ್ಕೀರವ್ವ ಗುಡಿಸಾಗರ ಜಾನಪದ ಕಲಾಭಿವೃದ್ಧಿ ಸಂಘದ ಅಧ್ಯಕ್ಷ ಮತ್ತು ಕಲಾವಿದ ಯಕ್ಕೇರಪ್ಪ ನಡುವಿನಮನಿವರು ಮಾತನಾಡುತ್ತಾ, ಯುವ ಪ್ರತಿಭಾವಂತರಲ್ಲಿಯ ಪ್ರತಿಭಾ ಪ್ರದರ್ಶನಕ್ಕೆ 'ಕಲಾ ಸೌರಭ' ಕಾರ್ಯಕ್ರಮದ ಮೂಲಕ ವೇದಿಕೆ ಒದಗಿಸುವ ಮೂಲಕ ಭಗವಾನ ಬುದ್ಧ ಪ್ರತಿಷ್ಟಾನ ಟ್ರಸ್ಟಿನವರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದ ಧಾರವಾಡದ ಬುದ್ಧಿಷ್ಟ್ ಪಾಲಿ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪೂಜ್ಯನೀಯ ಪಬ್ಬಜ್ಜೋರವಿತಿಪಾಲಿ ವಿಜ್ಜಾಮುನಿಯೋ ಅವರು ದಿನನಿತ್ಯದ ಜೀವನದಲ್ಲಿಯ ಒತ್ತಡದಂತಹ ಸಂಗತಿಗಳಿಂದ ಹೊರಬರಲು ಕಲಾಪ್ರದರ್ಶನಗಳ ಮೊರೆ ಹೋಗಬೇಕಾದುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ರಂಗ ಸಮಾಜಕ್ಕೆ ನಾಮನಿದರ್ೇಶನಗೊಂಡ ರಂಗಕಮರ್ಿ ಹಿಪ್ಪರಗಿ ಸಿದ್ಧರಾಮ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಲಾವಿದ ಶಿವಾನಂದ ಅಮರಶೆಟ್ಟಿ, ಹಲಗೆವಾದನ ಕಲಾವಿದ ಅಜರ್ುನ ಮರೇವಾಡ, ಬೀರಪ್ಪ ಮುಂತಾದವರು ಉಪಸ್ಥಿತರಿದ್ದರು. 

ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನಿಲ ಮೇತ್ರಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ, ವಿಜಯಲಕ್ಷ್ಮೀ ಕೊಪ್ಪದ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ನೃತ್ಯ ಮತ್ತು ಪ್ರವೀಣ ಬಡಿಗೇರ ಹಾಗೂ ಗೆಳೆಯರ ಗುಂಪಿನಿಂದ ಜಾನಪದ ನೃತ್ಯ ನಡೆಯಿತು. ಹಿರಿಯ ಕಲಾವಿದ ಡಾ.ಪ್ರಕಾಶ ಮಲ್ಲಿಗವಾಡ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.