ಗ್ರಾಮದ ಕೆರೆ ಹಾಗೂ ನೂತನ ಗ್ರಾಮ ಪಂಚಾಯತ ಕಟ್ಟಡ ಉದ್ಘಾಟಿಸಿದ ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ

Navlagunda MLA NH inaugurated the village lake and the new village panchayat building. angle

ಗ್ರಾಮದ ಕೆರೆ ಹಾಗೂ ನೂತನ ಗ್ರಾಮ ಪಂಚಾಯತ ಕಟ್ಟಡ ಉದ್ಘಾಟಿಸಿದ ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ 

ಹುಬ್ಬಳ್ಳಿ 20: ಉಮಚಗಿ ಗ್ರಾಮದಲ್ಲಿ ಕುಡಿಯುವ ಕೆರೆಗೆ ಬರುವ ನಾಲ್ಕು ಸಿಡಿ ಹಾಗೂ ನೂತನವಾಗಿ ನಿರ್ಮಿಸಿದ ಗ್ರಾಮ ಪಂಚಾಯತ ಕಟ್ಟಡವನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು.  

ಅವರು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಉಮಚಗಿ ಗ್ರಾಮಕ್ಕೆ ಮಳೆಯಾದಾಗ ಗ್ರಾಮದಲ್ಲಿರುವ ಕೆರೆಗೆ ನೀರು ಬರಲು ಹೋಗಲು ತಡೆಯುವ ಸಲುವಾಗಿ ತಡೆಗೋಡೆ ಇಲ್ಲದೇ ಸಮಸ್ಯೆಯಾಗುತ್ತಿತ್ತು. ಅವುಗಳನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಒಳ್ಳೆಯ ರೀತಿಯಿಂದ ಗೇಟ್ ಅಳವಡಿಸಿ ಸೀಡಿಗಳನ್ನು ಹಾಗೂ ಕೆರೆ ಹೂಳೆತ್ತುವದನ್ನು ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯತ ಕಟ್ಟಡವನ್ನು ಉದ್ಘಾಟಿಸಿದರು. ಈಗಾಗಲೇ ಉಮಚಗಿ ದಿಂದ ಕೋಳಿವಾಡ ರಸ್ತೆ ಸಂಪೂರ್ಣ ಹಾಳಾಗಿ ಸಂಚಾರ ಸ್ಥಗಿತಗೊಂಡಿದ್ದನ್ನು ದುರಸ್ಥಿಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಉಮಚಗಿ-ಯರಗುಪ್ಪಿ ರಸ್ತೆ ಪೂರ್ಣಗೊಳಿಸಿದ್ದು ಗ್ರಾಮದಲ್ಲಿ ಸಿ.ಸಿ. ರಸ್ತೆ ಹಾಗೂ ದೇವಸ್ಥಾನಗಳಿ ಅನುದಾನದ ಬಗ್ಗೆ ಗ್ರಾಮದ ಗ್ರಾಮ ಪಂಚಾಯತ ಹಾಗೂ ಇತರೇ ಹಿರಿಯರು ಗ್ರಾಮಗಳ ಅಭಿವೃದ್ಧಿಗಾಗಿ ಮನವಿ ಮಾಡಿದರು.  

ಸಭೆಯ ನೇತೃತ್ವ ಹಾಗೂ ಸಾನಿಧ್ಯವನ್ನು ನಿರಂಜನ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ಫಕೀರೇಶ್ವರ ಸಂಸ್ಥಾನ ಭಾವೈಕ್ಯತೆ ಪೀಠ ಸುಕ್ಷೇತ್ರ ಶಿರಹಟ್ಟಿ ಅವರು ವಹಿಸಿದ್ದರು.  

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಶಿಗ್ಗಾವಿ, ಎಇಇ ಅಮೃತ ಸೋಳಂಕೆ, ಹುಬ್ಬಳ್ಳಿ ತಾಲೂಕ ಪಂಚಾಯತ ಇಓ ಯಶವಂತಕುಮಾರ, ಪಂ.ರಾ.ಇಂ ಉಪವಿಭಾಗ ಹುಬ್ಬಳ್ಳಿ ಎಇಇ ಬಿ.ಎನ್‌. ಗೌಡರ, ಆರ್‌.ಡಬ್ಲೂ.ಎಸ್‌. ಎಇಇ ರಾಘವೇಂದ್ರ ಹಕಾರೆ, ಉಮಚಗಿ ಮಲ್ಲಿಗವಾಡ ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಷ್ಮವ್ವ ರೇವಣೆಪ್ಪ ಮುತ್ತಣ್ಣವರ, ಸದಸ್ಯರುಗಳಾದ ಪ್ರವೀಣ ನಾಗರಹಳ್ಳಿ, ಮಂಜುಳಾ ಹರಿಜನ, ಬಸವ್ವ ಗಂ ವಾಲಿ, ಪಾರ್ವತೆವ್ವ ಶೇ ಗೂಳಣ್ಣವರ, ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಆಡಿನ, ಕೃಷಿಕ ಸಮಾಜದ ನಿರ್ದೆಶಕ ಸುಭಾಷ ಬೂದಿಹಾಳ, ಡಿ.ಜಿ.ಜಂತ್ಲಿ, ಮಂಜುನಾಥ ಗೋಜನೂರ, ದ್ಯಾಮಣ್ಣ ಭಗವತಿ, ಅಶೋಕ ಗೋನಾಳ, ರಮೇಶ ಗೋನಾಳ,  ಚಂಬಣ್ಣಶೆಟ್ಟರ ಲಿಂಗದಾಳ, ರಮೇಶ ಲಿಂಬಣ್ಣವರ, ರಾಜಾಕ್ ಮುಲ್ಲಾ, ನೀಲಪ್ಪ ಗೋನಾಳ, ಹುಬ್ಬಳ್ಳಿ ತಾಲೂಕ ಕೆ.ಡಿ. ಪಿ ಸದಸ್ಯ ಬಸವರಾಜ ಬೀರಣ್ಣನವರ, ಹುಬ್ಬಳ್ಳಿ ತಾಲ್ಲೂಕ ಭೂ ನ್ಯಾಯ ಮಂಡಳಿ ಸದಸ್ಯರು ಮಲ್ಲಪ್ಪ ಕಾಳಿ, ಕೋಳಿವಾಡ ಗ್ರಾ.ಪಂ ಅಧ್ಯಕ್ಷ ಬಸವರಾಜ ಜಂತ್ಲಿ, ವೆಂಕನಗೌಡ ಪಾಟೀಲ್, ತುಳಚಪ್ಪ ಯರಗುಪ್ಪಿ, ದ್ಯಾವನಗೌಡ ಪಾಟೀಲ್, ಶಿವಣ್ಣ ಹುಬ್ಬಳ್ಳಿ, ಶಿವರಾಜ ಮಂಟೂರ, ಗುರುಪಾದ ಶಿರೂರ, ಗುರು ಹಳ್ಳೂರ, ಪ್ರಭು ತೀರ್ಲಾಪುರ, ಮುತ್ತು ಕಾಲವಾಡ, ಗುತ್ತಿಗೆದಾರ ಅಶೋಕ ಶೇಟ್ಟರ ಹಾಗೂ ಹಸನಸಾಬ ರೊಕ್ಕದಕಟ್ಟಿ, ಪಿಡಿಓ ಲಲಿತಾ ಗು ವಡ್ಡರ ಸೇರಿಂದತೆ ಮುಂತಾದವರು ಉಪಸ್ಥಿತರಿದ್ದರು.