ರಾಷ್ಟ್ರೀಯ ಬಾಯಿ ಕ್ಯಾನ್ಸರ್ ದಿನ

ಬೆಳಗಾವಿ 07:  ವಂಟಮರಿ ಗ್ರಾಮದಲ್ಲಿ ಕೆ ಎಲ್ ಇ ಜವಾಹರಲಾಲ್ ವೈದ್ಯಕೀಯ ವಿದ್ಯಾಲಯದ ಪಬ್ಲಿಕ್ ಹೆಲ್ತ್ ವಿಭಾಗ ಮತ್ತು ಎನ್ ಎಸ್ ಎಸ್ ಘಟಕ 9 ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಬೆಳಗಾವಿ ವಿಭಾಗ ಇವರ ಸಹಯೋಗದಲ್ಲಿ ರಾಷ್ಟ್ರೀಯ ಬಾಯಿ ಕ್ಯಾನ್ಸರ್ ದಿನ ಆಚರಿಸಲಾಯಿತು. ವಂಟಮುರಿ ಗ್ರಾಮದ ಜನರಿಗೆ ಬಾಯಿ ಕ್ಯಾನ್ಸರ್ನ ಪರೀಕ್ಷೆ ನಡೆಸಲಾಯಿತು. ಡಾ ಜಯಂತ್ ಧನವಂತ ಎಲ್ಲರನ್ನು ಸ್ವಾಗತಿಸಿದರು, ಎನ್ ಎಸ್ ಎಸ್ ಅಧಿಕಾರಿಗಳಾದ  ಡಾ ಅಶ್ವಿನಿ ನರಸಣ್ಣವರ್ ಅವರು ಬಾಯಿ ಕ್ಯಾನ್ಸರ್ನ ಕುರಿತು ಅರಿವು ಮೂಡಿಸಿ ಪ್ರಾಥಮಿಕ ಚಿಕಿತ್ಸೆ ಕುರಿತಾಗಿ ಜಾಗೃತಿ ಮೂಡಿಸಿದರು. ಡಾ ಸಚಿನ್ ಶಿವನಾಯ್ಕರ್ ಅವರು ಬಾಯಿಯ ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಡಾ ಸುಮಂತ್ ಗೋಯಲ್ , ಡಾ ಜಗದೀಶ್ ಕದಮ್ಮನವರ್ ಮತ್ತು ಡಾ ಸುಧಾ ಕುಂಬಾರ್ ಉಪಸ್ಥಿತರಿದ್ದರು. ಶ್ರೀಮತಿ ಸವಿತಾ ವಂದನಾರ್ಪಣೆಗೈದರು.