ಟೆಕ್ವಾಂಡೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಧಾರವಾಡ 12: ನಗರದ ಜಿಲ್ಲಾ ಟೆಕ್ವಾಂಡೋ ಅಸೋಸಿಯೆಶನ್ ನ ಅಂಜಲಿ ಪರ್ಪ ಮತ್ತು ಪರ್ಪ ಕೆ. ಅವರ ಮಾರ್ಗದರ್ಶನದಲ್ಲಿ ಟೆಕ್ವಾಂಡೋ ತರಬೇತಿ ಹೊಂದಿದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮಿಂಚಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಡಿ.5 ಮತ್ತು 6 ರಂದು ಹಾವೇರಿಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜುಗಳ 2024-25 ನೇ ಸಾಲಿನ ರಾಜ್ಯಮಟ್ಟದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಧಾರವಾಡ ಜಿಲ್ಲೆಯಿಂದ ಸ್ಪರ್ಧಿಸಿ ಬಾಲಕರ ವಿಭಾಗದಲ್ಲಿ ಸಾಯಿಪ್ರಸಾದ ಪಿ.ಕೆ ಮತ್ತು ಬಾಲಕೀಯರ ವಿಭಾಗದಲಿ ಪ್ರೀಯಾ ಬಿ ವೆಂಕಟಾಪೂರ ಪ್ರಥಮ ಸ್ಥಾನದಲ್ಲಿ ಮಿಂಚಿ ಬಂಗಾರದ ಪದಕ ಪಡೆಯುವುದರೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.
ಇವರು ಮುಂಬರುವ ಯು-19 ನ್ಯಾಶನಲ್ ಸ್ಕೂಲ್ ಗೇಮ್ಸ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಜಿಲ್ಲಾ ಟೆಕ್ವಾಂಡೋ ಅಸೋಸಿಯೆಶನ್ ಮತ್ತು ಪಾಲಕರು ಅಭಿನಂದಿಸಿದ್ದಾರೆ.