ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ಕರಾಟೆ: ವಿಜಯ ಅಗಡಿ ಮಾರ್ಸಲ್ ಆರ್ಟ್ಸ ವಿದ್ಯಾರ್ಥಿಗಳ ಸಾಧನೆ
ರಾಣೇಬೆನ್ನೂರು 1: ಹುಬ್ಬಳ್ಳಿಯ ವಾಸವಿ ಕಲ್ಯಾಣ ಮಂಟಪ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ 1ನೇ ರಾಷ್ಟ್ರ ಮಟ್ಟದ 2024-ರ ರಾಷ್ಟ್ರಮಟ್ಟದ ಕರಾಟೆ ಪಂದಾವಳಿ ನಡೆದು, ಎಂದಿನಂತೆ ನಗರದ ವಿಜಯ್ ಅಗಡಿ ಮಾರ್ಸಲ್ ಆರ್ಟ್ಸ ಕ್ಲಬ್ ನ ವಿದ್ಯಾರ್ಥಿಗಳು, ವಿವಿಧ ವಿಭಾಗದಲ್ಲಿ ಸ್ಪರ್ಧಿಸಿ, ಸಾಧನೆ ಬೆರೆದು ಕೀರ್ತಿ ತಂದಿದ್ದಾರೆ. ಹುಬ್ಬಳ್ಳಿಯ ಅಪೈರ್ ಸ್ಪೋರ್ಟ್ಸ ಅಕಾಡೆಮಿ ಗೋಜೋರಿಯೋ ಕರಾಟೆಡು ಸುಕಾರ ಕಾಯ್ ಇಂಡಿಯಾ ಅವರು ಸ್ಪರ್ಧೆ ಆಯೋಜಿಸಿದ್ಧರು. ಸದರಿ ಸ್ಪರ್ಧೆಯಲ್ಲಿ ಮಾರ್ಷಲ್ ಆರ್ಟ್ಸ ನ 40 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಟಾ ಮತ್ತು ಕುಮಟೆ ವಿಭಾಗದಲ್ಲಿ ಸ್ಪರ್ಧಿಸಿ, 16 ಚಿನ್ನ 12 ಬೆಳ್ಳಿ ಹಾಗೂ 9 ಕಂಚಿನ ಪದಕ ಪಡೆದಿದ್ದಾರೆ . ಶಿಹಾನ್ ವಿಜಯ ಅಗಡಿ ಅವರು, ತರಬೇತಿಗೊಳಿಸಿದ್ದರು. ಸಾನ್ವಿತ್ ಎಂ. ಕೆ, ವಿಜಯ ಎಂ. ಕೆ, ಸನ್ನಿಧಿ, ಮಾಹುಲ್ ಬಿ.ಎನ್, ವಿಕ್ಕಿ ಎಮ್. ಮಾಲೆ, ಭವಿತ್ ಸಿ. ರೆಡ್ಡಿ, ಭುವನ್ ಎಸ್. ಡಬ್ಲುಯೂ, ಭರತ್ ಕೆ, ಶರಧಿ ನಾಯಕ್, ಸಂಜೀವಕುಮಾರ್ ಬನ್ನಿಕೊಡ, ಝಮೀನ್, ಮತ್ತು ಗೌಸ್. ಪ್ರಥಮ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ದ್ವಿತೀಯ ವಿಭಾಗ ಬೆಳ್ಳಿ ಪದಕ ವಿಜೇತರು, ಉನ್ನತಿ, ದೀಕ್ಷಾ, ಚಿರಂಜೀವಿ, ಪ್ರಸನ್ನ, ಧ್ರುವ, ಭರತ್ ಜಿ, ಮತ್ತು ಕಂಚಿನ ಪದಕ ವಿಜೇತರು, ಎಸ್. ಕೆ. ಚಿನ್ಮಯ್, ಸೋಮನಗೌಡ, ಯಶ್ ಕೆ, ಪ್ರಣವ್ ಮಾಳಗಿ, ವಿಶಾಲ್ ಎಸ್. ಬಿ,ನಿಶ್ಚಿಲ್ ಬಿ, ಹಾಗೂ ಜೀವನ್, ಸಾಧಕ ವಿದ್ಯಾರ್ಥಿಗಳಿಗೆ ವಿಜಯ್ ಅಗಡಿ ಮತ್ತು ಸಹ ತರಬೇತುದಾರರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.