ರಾಷ್ಟ್ರ ಮಟ್ಟದ ಯುಗ ದರ್ಶನಿ ರತ್ನ ಪ್ರಶಸಿ ಪ್ರದಾನ

National level Yuga Darshani Ratna Prasasi award

ರಾಷ್ಟ್ರ ಮಟ್ಟದ ಯುಗ ದರ್ಶನಿ ರತ್ನ ಪ್ರಶಸಿ ಪ್ರದಾನ  

ವಿಜಯಪುರ 08: ವಾರಣಾಸಿಯಲ್ಲಿ ರಾಷ್ಟ್ರಮಟ್ಟದ ಯುಗ ದರ್ಶಿನಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚಿಗೆ ಜರುಗಿತು. 

ವಿಜಯಪುರ ನಗರದ ವಾರ್ಡ್‌ ನಂ. 21 ರ ಸಾಯಿಪಾರ್ಕ್‌ನ ಸಿದ್ದು ಇಜೇರಿ ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ, ಲಕ್ಷ್ಮೀ ಕಿಣಗಿ ಉತ್ತಮ ಶಿಕ್ಷಕಿ ಶಿಕ್ಷಣ ಕ್ಷೇತ್ರದಲ್ಲಿ, ಸುಧಾ ರೆಬಿನಾಳ ಪಂಚಾಯತ ಅಭಿವೃದ್ಧಿ ಅಧಿಕಾರಿ, ಶ್ರೀಶೈಲ ಗಬ್ಬೂರ ನ್ಯಾಯವಾದಿಗಳು ಇವರುಗಳಿಗೆ ಕಾಶಿಯಲ್ಲಿ ರಾಷ್ಟ್ರಮಟ್ಟದ ಯುಗ ದರ್ಶಿನಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ವಾರಣಾಸಿ ಬನಾರಸ (ಕಾಶಿ) ಹಿಂದೂ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಪಶು ಸಂಗೋಪನ ಸಚಿವೆ ರೇಣುದೇವಿ ಹಾಗೂ ಇದರ ಮುಖ್ಯಸ್ಥ ಸಾಹಿತಿಗಳಾದ ಡಾ. ಸರಸ್ವತಿ ಚಿಮ್ಮಲಗಿ, ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ, ಚಲನಚಿತ್ರ ನಟಿ ಪ್ರೇಮಾ, ಚೇತನಾ ಪೂಜಾರಿ, ವಿಜಯ ಪೂಜಾರಿ ಇನ್ನು ಅನೇಕ ಪ್ರಮುಖರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.