ಜೇಸಿಐ ಸಂಸ್ಥೆಯಿಂದ ರಾಷ್ಟ್ರೀಯ ಯುವ ದಿನ ಆಚರಣೆ ಸದೃಢ ಭಾರತ ನಿಮರ್ಾಣಕ್ಕೆ ಯುವಕರು ಸನ್ನದ್ಧರಾಗಿ: ಸಕ್ರಹಳ್ಳಿ ಕೊಟ್ರೇಶ್

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ 17:ದೇಶದ ಉನ್ನತಿಯಲ್ಲಿ ಯುವಕರ ಪಾತ್ರ ಹಿರಿದಾದುದು, ಸ್ವಸ್ಥ ಹಾಗೂ ಸದೃಢ ಭಾರತ ನಿಮರ್ಾಣಕ್ಕೆ ಯುವರು ಸನ್ನದ್ಧರಾಗಬೇಕಿದೆ ಎಂದು ಜೇಸಿಐ ಸಂಸ್ಥೆಯ ತರಬೇತುದಾರ ಜೇಸಿ ಸಕ್ರಿಹಳ್ಳಿ ಕೊಟ್ರೇಶ್ ಹೇಳಿದರು. 

ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ನಲ್ಲಿ ಜೇಸಿಐ ಹಗರಿಬೊಮ್ಮನಹಳ್ಳಿ ಸನ್ಫ್ಲವರ್ ಹಾಗೂ ಕಾಲೇಜಿನ ಸಾಂಸೃತಿಕ ವಿಭಾಗದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಹಾಗೂ ರಾಷ್ಟ್ರೀಯ ಯುವ ದಿನ ಆಚರಣೆ ನಿಮಿತ್ತ ಕಾಲೇಜಿನ ವಿದ್ಯಾಥರ್ಿಗಳಿಗೆ ಯುವ ಸಬಲೀಕರಣ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು. ದೇಶ ನಮಗೆ ಏನು ಮಾಡಿದೆ ಎನ್ನುವ ಆಲೋಚನೆಗಿಂತ ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬ ಪ್ರಶ್ನೆಯನ್ನು ಯುವಕರು ಹಾಕಿಕೊಳ್ಳಬೇಕಿದೆ. ಸಕರ್ಾರ ಹಾಗೂ ರಾಜಕಾರಣವನ್ನು ತೆಗಳುವ ಬದಲಾಗಿ ಸ್ವಾವಲಂಬಿ ಬದುಕನ್ನು ನಿಮರ್ಿಸಿಕೊಳ್ಳಲು ಹತ್ತು ಹಲವು ಮಾರ್ಗಗಳಿವೆ. ಯುವಕರು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿಕೊಂಡು ಅದಕ್ಕೆ ಪೂರಕವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ ಎಂದರು. 

ಕಾಲೇಜಿನ ಪ್ರಾದ್ಯಾಪಕ ಚಂದ್ರಮೌಳಿ ಮಾತನಾಡಿ ಪ್ರಸ್ತುತ ಯುಗವು ತಂತ್ರಜ್ಞಾನ ಯುಗವಾಗಿದ್ದು ಇಡೀ ಜಗತ್ತೇ ಕಣ್ಣೆದುರು ಕಾಣುವಷ್ಟು ಪರಿಜ್ಞಾನ ಅನಾವರಣಗೊಂಡಿದೆ ಯಾದರೂ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ತಲ್ಲೀನರಾಗಿ ಯುವಕರು ಹತಾಶರಾಗುತ್ತಿದ್ದಾರೆ. ಪ್ರತಿಯೊಬ್ಬರೂ  ನಿದರ್ಿಷ್ಠ ಗುರಿಯನ್ನು ಅಳವಡಿಸಿಕೊಂಡು ಸಾಧನೆಯತ್ತ ನಡೆಯಬೇಕು ಆದರೆ ಎಲ್ಲಾ ಬಲ್ಲೆ ಎಂಬ ಹುಂಬತನದಲ್ಲಿ ಗುರಿಯನ್ನು ತಲುಪದೇ ಸಮಾಜವನ್ನು ತೆಗಳುವ ಮನಸ್ಥಿತಿಯನ್ನು ಹೊಂದುತ್ತಿದ್ದಾರೆ. ಸಾಧನೆಗೆ ಪೂರಕವಾದ ವಾತವರಣವನ್ನು ಯುವಕರಿದ್ದಾಗಲೇ ರೂಪಿಸಿಕೊಳ್ಳಬೇಕು ಎಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು. 

ಈ ವೇಳೆ ಜೇಸಿಐ ಸಂಸ್ಥೆಯ ಅಧ್ಯಕ್ಷ ಅಶೋಕ ಉಪ್ಪಾರ, ಉಪಾಧ್ಯಕ್ಷ ಆನಂದ ಎತ್ತಿನಮನಿ, ಕಾರ್ಯದಶರ್ಿ ವಿಶಾಲ್.ವಿ.ಎಂ, ಪೂರ್ವ ವಲಯಾಧ್ಯಕ್ಷ ಚಂದ್ರಮಪ್ಪಾ, ಪ್ರಾಧ್ಯಾಪಕರಾದ ಅಣ್ಣೋಜಿರೆಡ್ಡಿ, ಬುಳ್ಳಪ್ಪ, ಈಶಪ್ಪ, ಸಂಧ್ಯಾ, ರೀಟಾ, ಜ್ಯೋತಿ, ಜೇಸಿ ಸದಸ್ಯರಾದ ಮಹೇಂದ್ರ ರೆಡ್ಡಿ, ಕೆ.ರುದ್ರೇಶ್, ದೊಡ್ಡಬಸವರಾಜ, ಕೆ.ಪ್ರಸಾದ್ ಇತರರಿದ್ದರು.