ರಾಷ್ಟ್ರೀಯ ಮತದಾರರ ದಿನಾಚರಣೆ ದೇಶದ ಉತ್ತಮ ಭವಿಷ್ಯಕ್ಕಾಗಿ ಯುವ ಮತದಾರರು ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಬೇಕು: ಸಬಿಹಾ ಭೂಮಿಗೌಡ

ಲೋಕದರ್ಶನ ವರದಿ

ವಿಜಯಪುರ 27:ಭಾರತ ದೇಶದ ಸಾಮಾಜಿಕ, ರಾಜಕೀಯ, ವಿದ್ಯಮಾನಗಳನ್ನು ತಿಳಿದು, ದೇಶದ ಉತ್ತಮ ಭವಿಷ್ಯದ ಆಧಾರದ ಮೇಲೆ ಮುಂದಿನ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುವಂತೆ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ: ಸಬಿಹಾ ಭೂಮಿಗೌಡ ಅವರು ಯುವ ಮತದಾರರಿಗೆ ಕರೆ ನೀಡಿದರು

ನಗರದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.,

ಭಾರತದ ಯುವ ಹಾಗೂ ಹಿರಿಯ ಮತದಾರರು ಚುನಾವಣೆಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡುವ ಮುಂಚಿತವಾಗಿ ಅವಶ್ಯಕ ಪೂವರ್ಾಲೋಚನೆ ಮಾಡುವಂತೆ ತಿಳಿಸಿದ ಅವರು, ಯೋಗ್ಯ ಅಭ್ಯಥರ್ಿಗಳನ್ನು ಹಾಗೂ ಭಾರತದ ಉತ್ತಮ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಪ್ರತಿಜ್ಞೆ ಮಾಡುವಂತೆ ಕರೆ ನೀಡಿದರು.

ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ನೂತನ ಯುವ ಮತದಾರರು ಉತ್ಸಾಹದಲ್ಲಿ ಮತದಾನ ಮಾಡುವ ಕಾಳಜಿ ಹೊಂದಿರಬೇಕು. ದೇಶದ ಹಿತ ಹಾಗೂ ಏಳಿಗೆಯ ದೃಷ್ಟಿಯಲ್ಲಿಟ್ಟುಕೊಂಡು ದೇಶದ ಸಮಗ್ರ ವಿದ್ಯಮಾನಗಳ ಮಾಹಿತಿಯನ್ನು ಅರಿತುಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಬೇಕು. ತಮ್ಮ ಪ್ರದೇಶಗಳ ಸಮಸ್ಯೆ, ಸಾಮಾಜಿಕ ಕಾಳಜಿ ಹೊಂದಿರುವ, ಸಾಮಾಜಿಕ ಬದ್ಧತೆ ಇರುವ ಯೋಗ್ಯ ಅಭ್ಯಥರ್ಿಗಳ ಆಯ್ಕೆಯಿಂದ ಸದೃಢ ರಾಷ್ಟ್ರ ನಿಮರ್ಾಣಕ್ಕೆ ಸಾಧ್ಯವಿದೆ. ಈ ಹಿನ್ನಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಪ್ರಾಮಾಣಿಕ, ಅಭ್ಯಥರ್ಿಗಳ ಆಯ್ಕೆಗೆ ಗಮನ ನೀಡುವ ಜೊತೆಗೆ ಯೋಗ್ಯ ಅಭ್ಯಥರ್ಿಗಳನ್ನು ಆಯ್ಕೆ ಮಾಡುವ ತೀಮರ್ಾನ ತಮ್ಮದಾಗಿರುತ್ತದೆ. ಅದರಂತೆ ಚುನಾವಣಾ ಆಯೋಗವು ಮತದಾರರಿಗೆ ನೋಟ ವಿಶೇಷ ಮತದಾನದ ಅವಕಾಶ ಸಹ ನೀಡಿದ್ದು, ವಿದ್ಯಮಾನಗಳ ಆಧಾರದ ಮೇಲೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಮುಂಬರುವ ಚುನಾವಣಾ ಪ್ರಕ್ರಿಯೆಗಳಲ್ಲಿ ಸ್ವಯಂ ಪ್ರೇರಿತರಾಗಿ ತಾವು ಸಕ್ರೀಯರಾಗುವ ಜೊತೆಗೆ ತಮ್ಮ ಕುಟುಂಬ ಬಂಧು-ಬಳಗ ಸೇರಿದಂತೆ ನೆರೆ-ಹೊರೆಯವರನ್ನು ಮನವೊಲಿಸಿ, ಕಡ್ಡಾಯವಾಗಿ ಮತದಾನ ಮಾಡುವ ಕುರಿತಂತೆ ಅರಿವು ಮೂಡಿಸಲು ಕರೆ ನೀಡಿದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಭದ್ರ ಬುನಾದಿಗೆ ಜನತೆ ತಮ್ಮ ಮತದಾನದ ಹಕ್ಕು ಚಲಾಯಿಸುವುದು ಅತ್ಯಂತ ಅವಶ್ಯಕವಾಗಿದೆ. ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಮತದಾನದ ಹಕ್ಕು ಇಲ್ಲದೇ ಹೋರಾಟ ಮಾಡುವಂತಹ ಪರಿಸ್ಥಿತಿ ಇದೆ. ಆದರೆ ಭಾರತವು ಪುರುಷ-ಮಹಿಳೆಯರೆಲ್ಲರಿಗೂ ಸಂವಿಧಾನದ ಅಡಿಯಲ್ಲಿ ಸಮಾನೆಯನ್ನು ಒದಗಿಸಿದೆ. ಹಿರಿಯ-ಕಿರಿಯ, ಶ್ರೀಮಂತ-ಬಡವರು, ಮೇಲ್ದಜರ್ೆ-ಕೆಳದಜರ್ೆ, ಮೇಲ್ಜಾತಿ-ಕೆಳಜಾತಿ, ಅಕ್ಷರಸ್ಥರು-ಅನಕ್ಷರಸ್ಥರಿಗೆ ಹಾಗೂ 18 ವರ್ಷ ಪೂರೈಸಿದ ಎಲ್ಲರಿಗೂ ಮತದಾನದ ಹಕ್ಕನ್ನು ಒದಗಿಸಿದ್ದು, ಮತದಾನದ ಮೌಲ್ಯವು ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಯುವಜನಾಂಗ ವಿಶೇಷವಾಗಿ 18 ವರ್ಷ ಪೂರೈಸಿದವರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ ಕುರಿತು ಖಾತ್ರಿಪಡಿಸಿಕೊಳ್ಳಬೇಕು. ಮತದಾರರ ಗುರುತಿನ ಚೀಟಿಯನ್ನು ತಪ್ಪದೇ ಪಡೆಯುವಂತೆ ತಿಳಿಸಿದ ಅವರು, ವಿಶೇಷವಾಗಿ ವಿಜಯಪುರ ಜಿಲ್ಲೆಯ ಯುವ ಮತದಾರರು ತಪ್ಪದೇ ಗುರುತಿನ ಚೀಟಿಯನ್ನು ಪಡೆಯುವುದರ ಜೊತೆಗೆ ಮುಂಬರುವ ಚುನಾವಣೆಯಲ್ಲಿ ತಮ್ಮ ಮೌಲ್ಯವಾದ ಮತವನ್ನು ಚಲಾಯಿಸುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಅವರು ಮಾತನಾಡಿ, ಭಾರತ ದೇಶದ ಪ್ರಗತಿಗಾಗಿ ಉತ್ತಮ  ಅಭ್ಯಥರ್ಿಗಳನ್ನು ಆಯ್ಕೆ ಮಾಡಬೇಕು. ಮತದಾರರ ಪಟ್ಟಿಯಲ್ಲಿ ತಪ್ಪದೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಸಂಬಂಧಪಟ್ಟಂತೆ ಅಂತರಜಾಲ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ಸಹ ಪಡೆದುಕೊಳ್ಳಬಹುದಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಹೆಚ್ಚು, ಹೆಚ್ಚು, ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಪ್ಪದೇ ಮತದಾನ ಮಾಡುವ ನಿರೀಕ್ಷೆಯನ್ನು ಭಾರತ ಯುವ ಜನಾಂಗದ ಮೇಲೆ ಇಟ್ಟಿದೆ ಎಂದು ಹೇಳಿದರು.

ಇಂದು ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ ಶ್ರೀಮತಿ ಮೋಹನಕುಮಾರಿ ಅವರು, ಮತದಾನ ಮಹತ್ವದ ಬಗ್ಗೆ ಪ್ರತಿಜ್ಞಾವಿದಿಯನ್ನು ಭೋಧಿಸಿದರು. ಅತ್ಯುತ್ತಮ ಬಿಎಲ್ಓಗಳಿಗೆ ಇಂದಿನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 18 ವರ್ಷ ವಯೋಮಾನ ಪೂರೈಸಿದ ಯುವ ಮತದಾರರಿಗೆ ನೂತನ ಮತದಾರರ ಗುರುತಿನ ಚೀಟಿಯನ್ನು ಸಹ ವಿತರಿಸಲಾಯಿತು. ಇದೇ ಪ್ರಥಮ ಬಾರಿಗೆ ಅಂಧ ಮತದಾರರಿಗೆ ಬ್ರೈಲ್ ಮತದಾರ ಗುರುತಿನ ಚೀಟಿ ಲಭ್ಯವಾಗಿದ್ದು, ಸಾಂಕೇತಿಕವಾಗಿ ಲಭ್ಯವಿರುವ ನಾಲ್ಕು ಬ್ರೈಲ್ ಮತದಾರರ ಗುರುತಿನ ಚೀಟಿಗಳನ್ನು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವಿ.ಜಿ.ಉಪಾಧ್ಯೆ ಅವರು ಪ್ರದಶರ್ಿಸಿದರು. 

ಕಾರ್ಯಕ್ರಮದಲ್ಲಿ  98 ವರ್ಷ ಪೂರೈಸಿದ ಹಿರಿಯ ಮತದಾರರಾದ ಗಂಗಯ್ಯ ಮಲ್ಲಯ್ಯ ಹಿರೇಮಠ ಅವರಿಗೂ ನೂತನ ಮತದಾರರ ಗುರುತಿನ ಚೀಟಿ ವಿತರಿಸಿರುವುದು ವಿಶೇಷವಾಗಿತ್ತು. ಕಾಲೇಜ್ ವಿದ್ಯಾಥರ್ಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪಧರ್ೆ, ಕ್ವಿಜ್ ಸ್ಪಧರ್ೆ, ಚಿತ್ರಕಲಾ ಸ್ಪಧರ್ೆ, ರಂಗೋಲಿ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾಪನ ಪಡೆದವರಿಗೆ 750 ರೂ,., ದ್ವೀತಿಯ ಸ್ಥಾನ ಪಡೆದವರಿಗೆ 500 ರೂ., ತೃತೀಯ ಸ್ಥಾನ ಪಡೆದವರಿಗೆ 250 ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಅದರಂತೆ ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ಆಯೋಜಿಸಲಾದ ಭಾಷಣ ಸ್ಪಧರ್ೆ, ಕ್ವಿಜ್, ಪ್ರಬಂಧ ಸ್ಪಧರ್ೆಯಲ್ಲಿ  ವಿಜೇತರಾದವರಿಗೂ ಸಹ ಬಹುಮಾನ ವಿತರಿಸಲಾಯಿತು. ನೂತನ ಮತದಾರರ ನೋಂದಣಿಗಾಗಿ ಹಾಗೂ ಅಜರ್ಿ ಪಡೆಯಲು ಸೆಲ್ಪ ಡೆಸ್ಕ್ನ್ನು ಸಹ ಸ್ಥಾಪಿಸಲಾಗಿತ್ತು. 

ನೂತನ ಮತದಾರರು ಮತದಾರರ ಗುರುತಿನ ಚೀಟಿ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆಯಾ ತಹಶೀಲ್ದಾರ ಕಚೇರಿ, ಆಯಾ ಮತಕ್ಷೇತ್ರದ ಬಿಎಲ್ಓಗಳ ಹತ್ತಿರ ಅಜರ್ಿ ನಮೂನೆಯನ್ನು ಸಹ ಪಡೆಯಹುದಾಗಿದೆ ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಮತದಾನ ಮಹತ್ವ ಕುರಿತು ಕಿರುಚಿತ್ರ ಪ್ರದಶರ್ಿಸಲಾಯಿತು. 

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಜಿಲ್ಲಾ ಪಂಚಾಯತ್ನ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಸ್.ವಾಯ್. ಅಮಾತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಂ.ಎನ್.ಸಿಂಧೂರ, ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಪ್ರಾಚಾರ್ಯ ಕಲ್ಲೂರಮಠ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ: ಎಸ್.ಆರ್.ಹಳ್ಳಿ ಉಪಸ್ಥಿತರಿದ್ದರು. ಕುಮಾರಿ ಅಶ್ವಿನಿ ಪ್ರಾಥರ್ಿಸಿದರು. ಉಪನ್ಯಾಸಕ ಎಸ್.ಬಿ. ಸಾವಳಸಂಗ ವಂದಿಸಿದರು. 

ಇದಕ್ಕೂ ಮೊದಲು ನಗರದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಮತದಾರರ ಜಾಗೃತಿ ಜಾಥಾಕ್ಕೆ ತಹಶೀಲ್ದಾರ ಶ್ರೀಮತಿ ಮೋಹನಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ವಿ.ಕುಂಬಾರ ಚಾಲನೆ ನೀಡಿದರು. ಜಾಥಾವು ನಗರದ ಗಾಂಧಿವೃತ್ತ, ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ್ ವೃತ್ತ ಮಾರ್ಗವಾಗಿ ಸಂಚರಿಸಿ ಮತದಾನ ಮಹತ್ವ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಸ್.ವಾಯ್. ಅಮಾತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಂ.ಎನ್.ಸಿಂಧೂರ, ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಪ್ರಾಚಾರ್ಯ ಕಲ್ಲೂರಮಠ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ಹಳ್ಳಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಸುಲೇಮಾನ ನದಾಫ್ ಉಪಸ್ಥಿತರಿದ್ದರು.