ಕೆ.ವಿ.ಬಿರಾದಾರಗೆ ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿ
ದೇವರಹಿಪ್ಪರಗಿ 31: ಪಟ್ಟಣದ ಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಂಸ್ಕೃತಿಕ ವೇದಿಕೆ ವತಿಯಿಂದ ಚತುರ್ಥ ವಾರ್ಷಿಕೋತ್ಸವ-2025 ಪ್ರಯುಕ್ತ ಕೊಡ ಮಾಡುವ ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆ.ವಿ.ಬಿರಾದಾರ ಸಹಕಾರಿ ಕ್ಷೇತ್ರದಲ್ಲಿ ಡಾ.ಆರ್.ಆರ್.ನಾಯಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಒಟ್ಟು 08 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು: ಡಾ.ಆರ್.ಆರ್.ನಾಯಕ(ಸಹಕಾರಿ ಕ್ಷೇತ್ರ), ಜಗದೀಶ ಸಾಲಳ್ಳಿ (ಸಾಹಿತ್ಯ ಕ್ಷೇತ್ರ), ಅನಿಲಪ್ರಸಾದ ಎಳಗಿ(ಸಹಕಾರಿ ಕ್ಷೇತ್ರ),ಕೆ.ವಿ.ಬಿರಾದಾರ(ಶಿಕ್ಷಣ ಕ್ಷೇತ್ರ),ಡಾ.ವ್ಹಿ.ಐ.ದೇಸಾಯಿ (ವೈದ್ಯಕೀಯ ಕ್ಷೇತ್ರ), ಮಹಾಂತಯ್ಯ ತಂಬೂರಿಮಠ (ವಿಜ್ಞಾನ ಕ್ಷೇತ್ರ),ನಾಗನಾತಗೌಡ ಬಿರಾದಾರ (ಕೃಷಿ ಕ್ಷೇತ್ರ) ಹಾಗೂ ಬಸನಗೌಡ ಬಿರಾದಾರ (ಶಿಕ್ಷಣ ಕ್ಷೇತ್ರ) ಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಏಪ್ರಿಲ್ 3ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ ಚತುರ್ಥ ವಾರ್ಷಿಕೋತ್ಸವ-2025ರ ಸಮಾರಂಭದ ದಿವ್ಯ ಸಾನಿಧ್ಯವನ್ನು ಪಟ್ಟಣದ ಗದ್ದಿಗಿ ಮಠದ ಮಡಿವಾಳೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಾನಿಧ್ಯವನ್ನು ಬ.ಬಾಗೇವಾಡಿಯ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟಕರಾಗಿ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಅಧ್ಯಕ್ಷತೆ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾಶಿಪತಿ ದೇವಣಗಾಂವ, ಸಂಚಾಲಕರಾಗಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಪಾಟೀಲ ಹಾಗೂ ಸದಾನಂದ ಬಬಲೇಶ್ವರ, ಮುಖ್ಯ ಅತಿಥಿಗಳಾಗಿ ವಿಜಯಪುರ ಡಿವೈಎಸ್ಪಿ ಬಸವರಾಜ ಎಲಿಗಾರ ಹಾಗೂ ಶಿಕ್ಷಕ ಹಾಗೂ ಸಾಹಿತಿಗಳಾದ ಅಶೋಕ ಹಂಚಲಿ, ಅತಿಥಿಗಳಾಗಿ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ವಾಯ್.ಬಿ.ಪಾಟೀಲ, ಪ.ಪಂ. ಅಧ್ಯಕ್ಷ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ ಹಾಗೂ ಪಟ್ಟಣದ ಪ್ರಮುಖ ಡಿ.ಕೆ. ಪಾಟೀಲ ಸೇರಿದಂತೆ ಪಟ್ಟಣದ ಪ್ರಮುಖರು ಗಣ್ಯರು ಭಾಗವಹಿಸಲಿದ್ದಾರೆ.