ಲೋಕದರ್ಶನ ವರದಿ
ರಾಣೇಬೆನ್ನೂರು23: ವಿದ್ಯಾಥರ್ಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೇ ಶ್ರಮವಹಿಸಲೇಬೇಕು ಹಾಗೂ ಶೈಕ್ಷಣಿಕವಾದ ಸಮಾಜಮುಖಿ ಕೆಲಸಗಳಲ್ಲಿ ವಿದ್ಯಾಥರ್ಿಗಳು ತೊಡಗಿಸಿಕೊಂಡರೆ ಒಂದು ಪ್ರಜ್ಞಾಪೂರ್ವಕವಾದ ದೇಶವನ್ನು ಕಟ್ಟುವಲ್ಲಿ ಸಫಲರಾಗಬಹುದು ಎಂದು ಹುಬ್ಬಳ್ಳಿ ತಾಲೂಕಿನ ಮಂಟೂರು ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಫಕ್ಕೀರಪ್ಪ ಬಿ. ಸೊರಟೂರ ಅಭಿಪ್ರಾಯಪಟ್ಟರು
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಾ ಸಮಾಜದಲ್ಲಿ ಆದರ್ಶಗಳಿಲ್ಲಿದೆ ಮೌಲ್ಯಗಳು ಕುಸಿಯುತ್ತವೆ. ವಿದ್ಯಾಥರ್ಿಗಳು, ಯುವಕರು ದೇಶದ ಅಮೂಲ್ಯ ಸಂಪತ್ತು ನೀವೇ ದಾರಿ ತಪ್ಪಿದರೆ ಸಮಾಜದ ಅಭಿವೃದ್ದಿಯಾಗದು ಮತ್ತು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಬೇಕಾದರೆ ಅವಿರತವಾಗಿ ಶ್ರವಮಿಸಬೇಕು, ನುಡಿದಂತೆ ನಡೆಯಬೇಕು. ಆಡುವ ನಾಲಿಗೆ ಸರಿಯಾಗಿರಬೇಕು ವಿದ್ಯೆ, ಕಲಿಕೆಗೆ ಬಡತನ ಸಿರಿತನ ಮುಖ್ಯವಲ್ಲ. ಟಿ.ವಿ. ಮೊಬೈಲ್ ದಿಂದ ದೂರವಿದ್ದು ಈ ವಯಸ್ಸನ್ನು ಕಲಿಕೆಗೆ ಮೀಸಲಿಡಿ. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಎನ್.ಎಸ್.ಎಸ್. ದಿಂದ ಶಿಸ್ತು ಸಂಯಮವು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಇರುವ ಅವಕಾಶವನ್ನು ಬಳಸಿಕೊಂಡು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ರಾಣೇಬೆನ್ನೂರಿನ ಈಸ್ಟ್ ವೆಸ್ಟ್ ಸೀಡ್ಸ್ ಕಂಪನಿ ವಲಯ ವ್ಯವಸ್ಥಾಪಕರಾದ ಸ್ವರನ್ನ.ಸಿ. ಅವರು ಮಾತನಾಡಿ ವಿದ್ಯಾಥರ್ಿಗಳು ವಿಶಿಷ್ಟ ಸಾಧನೆ ಮಾಡಲು ಪ್ರಯತ್ನಶೀಲರಾಗಬೇಕು. ಶಿಕ್ಷಣದಿಂದ ಬುದ್ಧಿವಂತಿಕೆ ಹೆಚ್ಚಾದಂತೆ ನೀವು ದೈಹಿಕವಾಗಿ ಮಾನಸಿಕವಾಗಿ ಪ್ರಭಲರಾಗುತ್ತೀರಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಯಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಅಲ್ಲಿ ಶಾಲೆಗೆ ಅತಿ ಹೆಚ್ಚು ಅಂಕಗಳಿಸಿದ ಮಹೇಶ ದೇವರಗಿರಿಮಠ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ರೋಹಿಣಿ ಆರ್ ಕುಸಗೂರ ಮತ್ತು ಭೂಗೋಳ ಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ರೇಣುಕಾ ಹೆಚ್.ಬಿ. ವಿರುಪಾಕ್ಷಪ್ಪ ಗೌಳೇರ, ರೋಹಿಣಿ ಆರ್. ಕುಸಗೂರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.