ಗದಗ 14: ಯಾವುದಾದರೂ ಒಂದು ಘಟನೆ ನಿಮ್ಮ ಮುಂದೆ ನಡೆದಾಗ ಯಾವ ರೀತಿ ಪರಿಹಾರ ಅಥವಾ ಮಾಗರ್ೋಪಾಯ ಕಂಡುಕೊಳ್ಳಲು ದಿನನಿತ್ಯದ ಕಾನೂನುಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಪಠ್ಯದ ವಿಷಯದ ಜೊತೆಗೆ ಭಾರತೀಯ ಸಂವಿಧಾನ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾಥರ್ಿಗಳು ತಿಳಿದುಕೊಂಡು ಕಾನೂನಿನ ಚೌಕಟ್ಟಿನಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಚೌಕಟ್ಟನ್ನು ಮೀರಿದಾಗ ಕಾಯ್ದೆ ಬೆನ್ನು ಹತ್ತುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾನೂನನ್ನು ಗೌರವಿಸಿ ಮತ್ತೋಬ್ಬರ ಹಕ್ಕಿಗೆ ಚ್ಯುತಿ ಬರದಂತೆ ಜೀವನ ನಡೆಸುವುದೇ ಕಾನೂನನ್ನು ಪಾಲನೆ ಮಾಡಿದಂತೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ರೇಣುಕಾ ಜಿ. ಕುಲಕಣರ್ಿ ಅವರು ನುಡಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಿದ್ಧಲಿಂಗ ನಗರದ ಸಕರ್ಾರಿ ಪ್ರೌಢಶಾಲೆಯ ಲೀಗಲ್ ಲಿಟ್ರಸಿ ಕ್ಲಬ್ ಘಟಕದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಬಾಲ ಸ್ನೇಹಿ ಕಾನೂನು ಸೇವೆಗಳು ಮತ್ತು ಅವುಗಳ ಸಂರಕ್ಷಣೆ ಯೋಜನೆ-2015ರ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುವ ಸಂವಿಧಾನದ ಉದ್ಧೇಶದಂತೆ ಕಾನೂನು ಸೇವಾ ಪ್ರಾಧಿಕಾರವು 1987 ರಲ್ಲಿ ಜಾರಿಗೆ ಬಂದಿದ್ದು, ಜನಸಾಮಾನ್ಯರಿಗೆ ಕಾನೂನು ಪ್ರಸಾರ ಮಾಡಬೇಕು ಎಂಬ ಉದ್ಧೇಶದಿಂದ ಕಾನೂನು ಅರಿವು ನೆರವು ಕಾರ್ಯಕ್ರಮಗಳ ಜೊತೆಗೆ ಸಕರ್ಾರದ ಯೋಜನೆಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತಿವರ್ಷ ನವೆಂಬರ್-9 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಮ್ಮಿಕೊಳ್ಳುತ್ತ ಬರಲಾಗುತ್ತಿದೆ. ಹೆಣ್ಣು ಮಗು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ಕಲಿಸಿ ಎಂಬ ಯೋಜನೆ ಅನ್ವಯ ಗಂಡು ಮತ್ತು ಹೆಣ್ಣು ಲಿಂಗ ತಾರತಮ್ಯ ಹೋಗಲಾಡಿಸಲು ಸಹಕಾರಿಯಾಗಿದೆ. ಮತ್ತು ವಿದ್ಯಾಥರ್ಿಗಳು ಅಂಕಗಳು ಕಡಿಮೆ ಬಂದಿವೆ ಎಂದು ಧೈರ್ಯ ಕಳೆದುಕೊಳ್ಳಬಾರದು, ಜೀವನದಲ್ಲಿ ಉತ್ಸಾಹ ಇರಲಿ, ಪ್ರಯತ್ನ, ಸಾಧನೆ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ನುಡಿದರು.
ಸಮಾರಂಭದಲ್ಲಿ ಮಕ್ಕಳಿಗೆ ಬಾಲ ಸ್ನೇಹಿ ಕಾನೂನು ಸೇವೆಗಳು ಮತ್ತು ಅವುಗಳ ಸಂರಕ್ಷಣೆ ಯೋಜನೆ-2015, ಬಾಲ ನ್ಯಾಯ ಕಾಯ್ದೆ, ಮಕ್ಕಳ ಹಕ್ಕುಗಳು ಕುರಿತು ಶೋಭಾ ಉಮಚಗಿ ಪ್ಯಾನಲ್ ವಕೀಲರು ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಕರ್ಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಯರಾದ ಎಸ್ .ಎಸ್. ಮುಳಗುಂದಮಠ ವಹಿಸಿ ಇಂತಹ ಕಾನೂನು ಸಾಕ್ಷರತಾ ಕಾರ್ಯಕ್ರಮಗಳು ವಿದ್ಯಾಥರ್ಿಗಳ ಬಾಳಿಗೆ ಬೆಳಕಾಗಲಿವೆ ಎಂದು ನುಡಿದರು. ಶಿಕ್ಷಕಿಯರಾದ ಎಸ್. ಆರ್. ಹನಮಗೌಡ್ರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಎಸ್.ಎಮ್. ಪತ್ತಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಎಸ್. ಜಿ. ಕುಲಗೂಡ ವಂದಿಸಿದರು.