ಲೋಕದರ್ಶನ ವರದಿ
ಬೆಳಗಾವಿ 29: ಉದ್ಯಮವನ್ನು ಪ್ರಾರಂಭಿಸಲು ಇಪತ್ತು ಲಕ್ಷ ರೂಪಾಯಿಗಳ ಸಹಾಯಧನವನ್ನು ಬಹುಮಾನವಾಗಿ ಪಡೆದ ಜಿ ಐ ಟಿ ತಂಡ ಬೆಳಗಾವಿಯ ಕೆ.ಎಲ್.ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ )ಯ ನಾಲ್ಕು ವಿದ್ಯಾಥರ್ಿಗಳಾದ ಶರ್ಮದ ತಡ್ಕೋಡ್ಕರ್, ಯಶ್ ತೆಂಡೂಲ್ಕರ್, ಕಾತರ್ಿಕ್ ಕುಲಕಣರ್ಿ ಹಾಗೂ ಅಭಿಷೇಕ ಶ್ರೇಯಕರ ಅವರ ತಂಡವು ವಿನ್ಯಾಸಗೊಳಿಸಿದ ಅಗ್ನಿ ಅವಘಡ ಸಂಭವಿಸಿದ ಸಮಯದಲ್ಲಿ ರಕ್ಷಣಾ ಸಹಾಯಕ "ಫೈರ್ ಫೈಟ್ ಅಸಿಸ್ಟ್" ಸಾಧನ ಕ್ಕೆ ಭಾರತ ಸಕರ್ಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿ ಎಸ ಟಿ ) ಹಾಗೂ ಬೆಂಗಳೂರಿನ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐ ಐ ಎಂ ಬಿ) ಸಹಯೋಗದಲ್ಲಿ ಎಲೆಕ್ಟ್ರಾನ್ ಸಾಧನಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಂತರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆ "ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್" ಆಯೋಜಿಸಿದ್ದ ರಾಷ್ಟ್ರ ಮಟ್ಟದ ವಿನ್ಯಾಸ ಸ್ಪಧರ್ೆ "ಭಾರತದ ಇನ್ನೋವೇಶನ್ ಚಾಲೆಂಜ್ ಕಾಂಟೆಸ್ಟ್ -17 (ಐಐಸಿಡಿಸಿ -17 )" ರಲ್ಲಿ ಜಿಐಟಿ ವಿದ್ಯಾಥರ್ಿಗಳ ತಂಡವು ಮೊದಲ 10 ತಂಡಗಳಲ್ಲಿ ಪ್ರಥಮ ಸ್ಥಾನವನ್ನು ವನ್ನು ಪಡೆದಿದೆ ಜೊತೆಗೆ 20,00,000 ರೂ.ಅನ್ನು ತಮ್ಮದೇ ಒಂದು ಸ್ವಂತ ಉದ್ಯಮವನ್ನು ಪ್ರಾರಂಭಮಾಡಲು "ಸೀಡ್ ಮನಿ" ಸಹಾಯ ಧನವಾಗಿ ಪಡೆದುಕೊಂಡಿದೆ. ರಾಷ್ಟ್ರದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಾದ ಐ ಐ ಟಿ ಮತ್ತು ಏನ್ ಐ ಟಿ ಹಾಗೂ ಹೆಸರಾಂತ ತಾಂತ್ರಿಕ ವಿಶ್ವವಿದ್ಯಾಲಯಗಳೊಂದಿಗೆ ಸುಮಾರು 965 ತಾಂತ್ರಿಕ ಸಂಸ್ಥೆಯಿಂದ 5000 ಕ್ಕಿಂತಲೂ ಹೆಚ್ಚು ತಂಡಗಳು ಇದರಲ್ಲಿ ಭಾಗವಹಿಸಿದ್ದವು ಆದರೆ ಜಿ ಐ ಟಿ ವಿದ್ಯಾಥರ್ಿಗಳ ತಂಡ ಈ ಎಲ್ಲ ತಂಡಗಳನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಪಡೆದದ್ದು ಜಿಐಟಿಯ ಶ್ರೇಷ್ಠ್ಟತೆಗೆ ಹಾಗೂ ನಾವಿನ್ಯತೆ ಮತ್ತು ವಿದ್ಯಾಥರ್ಿಗಳ ಸಂಶೋಧನಾ ಮನೋಭಾವದ ಸಾಮಥ್ರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಜಿಐಟಿ ತಂಡವು ಯು "ಫೈರ್ ಫೈಟ್ ಅಸಿಸ್ಟ್" ಎಂಬುದು ಒಂದು ವಿದ್ಯುನ್ಮಾನ ತಂತ್ರಜ್ಞಾನವನ್ನು ಒಳಗೊಂಡ ಅಗ್ನಿಶಾಮಕ ಸಾಧನವಾಗಿದೆ. ಈ ತಂಡವು ಇದರ ಕಾರ್ಯನಿರತ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಇದರ ಮೂಲ ಉದ್ದೇಶ ಅಗ್ನಿ ಅವಘಡ ಸಂಭವಿಸಿದ ಪ್ರದೇಶದಲ್ಲಿ ಅಥವಾ ಬೆಂಕಿಯಿಂದ ಪೀಡಿತವಾದ ಪ್ರದೇಶದಲ್ಲಿ ಮನುಷ್ಯರನ್ನು ಪತ್ತೆಹಚ್ಚಿ ಅವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯವರಿಗೆ ಸಹಾಯ ಮಾಡುವುದರ ಜೊತೆಗೆ ಸಿಬ್ಬಂದಿ ಸಾಗಿದ ದಾರಿಯ ಟ್ರ್ಯಕಿಂಗ್ ವ್ಯವಸ್ಥೆಯನ್ನು ಹೊಂದಿರುವದರಿಂದ ಅಗ್ನಿ ಅವಘಡದ ಪ್ರದೇಶದಿಂದ ಯಾವುದೇ ಅಪಾಯವಿಲ್ಲದೆ ಹೊರಬರಲು ಸಹಾಯ ಮಾಡುತ್ತದೆ. ಪತ್ತೆಮಾಡುವಿಕೆಯ ವ್ಯಾಪ್ತಿಯು ಸುಮಾರು 20 -25 ಮೀಟರ್ಗಳಷ್ಟಿರುತ್ತದೆ. ಐಐಎಂ ಬೆಂಗಳೂರಿನ ಇನ್ಕ್ಯುಬೇಷನ್ ಕೇಂದ್ರವಾದ ಎನ್ ಎಸ್ ಆರ್ ಸಿ ಎಲ್ ನಲ್ಲಿ "ಸಲ್ಯೂಸ್ ಎಂಬ ಉದ್ಯಮವನ್ನು ಈಗಾಗಲೇ ಜಿ ಐ ಟಿ ವಿದ್ಯಾಥರ್ಿಗಳು ಪ್ರಾರಂಭಿಸುವ ಮೂಲಕ ಈ ವಿದ್ಯಾಥರ್ಿಗಳು ಯುವ ಉದ್ಯಮಿಗಳಾಗಿದ್ದಾರೆ ಮತ್ತು ಇದರ ಜೊತೆಗೆ ಈ ಸಾಧನದ ವಿನ್ಯಾಸಕ್ಕೆ ಸಂಬಂಧಿಸಿದಂತೆ ಮೂರು ಪೇಟೆಂಟ್ಗಳನ್ನು ಈಗಾಗಲೇ ಸಲ್ಲಿಸಿದ್ದಾರೆ.
ಪ್ರತಿಷ್ಠಿತ ಸ್ಪಧರ್ೆಯಲ್ಲಿ ಗೆಲುವು ಸಾಧಿಸುವ ಮೊದಲು ತಂಡ ಉಖಿ ಯು ಬಹಳ ಕಠಿಣವಾದ ಪ್ರಕ್ರಿಯೆಗೆ ಮುಖಾಂತರ ಆಯ್ಕೆಯಾಗಿದೆ. ಐಐಸಿಡಿಸಿ 2017 ಸ್ಪಧರ್ೆಯ ಮೊದಲ ಹಂತದಲ್ಲಿ 965 ತಾಂತ್ರಿಕ ಇಲಾಖೆಗಳಿಂದ 5049 ಕ್ಕೂ ಹೆಚ್ಚು ನವೀನ ಪರಿಕಲ್ಪನೆಗಳು ಬಂದಿದ್ದವು. ಮೌಲ್ಯಮಾಪನದ ನಂತರ ಕೇವಲ 510 ತಂಡಗಳು ಎರಡನೇ ಸುತ್ತಿಗೆ ಆಯ್ಕೆಯಾದವು. ಅಲ್ಲಿ ಅವರ ನವೀನ ಪರಿಕಲ್ಪನೆಗಳನ್ನು ಮೂಲಮಾದರಿಯನ್ನು ಕಾರ್ಯನಿರತ ಮಾದರಿಯನ್ನಾಗಿ ಪರಿವತರ್ಿಸುವ ಅವಕಾಶವನ್ನು ನೀಡಲಾಯಿತು ಮತ್ತು ಮಾದರಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ವೀಡಿಯೊವನ್ನು ಸಲ್ಲಿಸಬೇಕಾಗಿತ್ತು. ಮೂರನೇ ಹಂತದಲ್ಲಿ, ತಮ್ಮ ಸಾಧನದ ವ್ಯಾಪಾರ ಯೋಜನೆಗಳನ್ನು ಪ್ರಸ್ತುತಪಡಿಸಲು ಹಾಗೂ ತಂಡದ ಸಂವಹನ ಮತ್ತು ವ್ಯಾಪಾರೋದ್ಯಮ ಯೋಜನೆಗಳನ್ನು ನಿರ್ಧರಿಸುವ ಮತ್ತು ತಂಡಗಳು ಸಾಮಾಜಿಕ-ಆಥರ್ಿಕ ಪರಿಸ್ಥಿತಿಗಳ ಅರ್ಥಮಾಡಿಕೊಂಡ ಮತ್ತು ಅದಕ್ಕೆ ತಕ್ಕಂತೆ ಸಾಧನವನ್ನು ತಯಾರಿಸುವ ಅಂಶಗಳ ಮೇಲೆ ಕೊನೆಯ ಸುತ್ತಿಗೆ ಕೇವಲ 30 ತಂಡಗಳನ್ನು ಆಯ್ಕೆ ಮಾಡಲಾಯಿತು. ಈ ಆಯ್ಕೆ ಪ್ರಕ್ರಿಯೆವು ಔದ್ಯೋಗಿಕ ವಲಯದಿಂದ 50 ಕ್ಕಿಂತಲೂ ಹೆಚ್ಚು ತಜ್ಞರ ಜೊತೆಗೆ ಟೆಕ್ಸಾಸ್ ಇನ್ಟ್ಸ್ರುಮೆಂಟೇಷನ್ ದಿಂದ ನುರಿತ ತಾಂತ್ರಿಕ ತಜ್ಞರಿಂದ ನಾಲ್ಕು ಸುತ್ತುಗಳಲ್ಲಿ ನಡಯಿತು. ಹಲವು ಸುತ್ತಿನ ಚಚರ್ೆಗಳ ನಂತರ ಅಂತಿಮ 10 ವಿಜೇತರನ್ನು ಆರಿಸಲಾಯಿತು. ಈ ಹತ್ತು ತಂಡಗಳು ಈಗಾಗಲೇ ಐಐಎಂ ಬೆಂಗಳೂರಿನ ಇನ್ಕ್ಯುಬೇಷನ್ ಕೇಂದ್ರ - ಎನ್ ಎಸ್ ರಾಘವಾನ್ ಸೆಂಟರ್ ಫಾರ್ ಎಂಟಪ್ರರ್ೆನ್ಯುರಿಯಲ್ ಲನರ್ಿಂಗ್ (ಎನ್ಎಸ್ಆಸರ್ಿಎಲ್) ದಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿವೆ ಆ ಶ್ರೇಷ್ಠ್ ಹತ್ತರಲ್ಲಿ ಜಿ ಐ ಟಿ ತಂಡವು ಪ್ರಥಮ ಸ್ಥಾನದಲ್ಲಿದೆ. ಈ ವಿದ್ಯಾಥರ್ಿಗಳಿಗೆ ಜಿ ಐ ಟಿ ಸಿಬ್ಬಂದಿಗಳಾದ ಪ್ರೊ. ಉತ್ತಮ ದೇಶಪಾಂಡೆ, ಪ್ರೊ ಪ್ರವೀಣ್ ಕಾಲಕುಂದ್ರಿ, ಪ್ರೊ. ಸಂತೋಷ್ ಸರಾಫ್, ಪ್ರೊ ವೀಣಾ ದೇಸಾಯಿ, ಗೌರವ್ ಕಾಮತ್ ಇವರ ಮಾರ್ಗದರ್ಶನವಿತ್ತು. ಕೆ ಎಲ್ ಎಸ ಸಂಸ್ಥೆಯ ಕಾರ್ಯಧ್ಯಕ್ಷ ಎಂ ಆರ್ ಕುಲಕಣರ್ಿ, ಜಿ ಐ ಟಿ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಯು ಏನ್ ಕಾಲಕುಂದ್ರಿಕರ್, ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ, ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಈ ವಿದ್ಯಾಥರ್ಿಗಳನ್ನು ಅಭಿನಂದಿಸಿದ್ದಾರೆ.