ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ National Girl Child Day and Environmental Awareness Program

ಧಾರವಾಡ 30: ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಮಕ್ಕಳ ಮಂಟಪ ಹಾಗೂ ಮಿಶ್ರಿಕೋಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಪರಶುರಾಮ ಚಿಕ್ಕಾಡಿ ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ವಿಷಯ ತಜ್ಞರಾದ ಧಾರವಾಡದ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ ಆಶಾ ಗುಳೇದಗುಡ್ಡ ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ ಕುರಿತು ಮಾತನಾಡಿದರು.  ಹೆಣ್ಣು ಮಕ್ಕಳ ಕುರಿತು ಧಾರವಾಡದ ವಿಶ್ರಾಂತ ಪ್ರಾಧ್ಯಾಪಕಿಡಾ ವಿ.ಶಾರದಾ ಅವರು“ಭೇಟಿ ಬಚಾವೋ ಬೇಟಿ ಪಡಾವೋ”ಯೋಜನೆಯ ಕುರಿತು ಮಾತನಾಡಿ ಹೆಣ್ಣು ಮಕ್ಕಳು ವಿದ್ಯಾವಂತರಾದಾಗ ಮಾತ್ರ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವೆಂದು ಅಭಿಪ್ರಾಯಪಟ್ಟರು. 

ಧಾರವಾಡದ ಇನ್ನೋರ್ವ ವಿಶ್ರಾಂತ ಪ್ರಾಧ್ಯಾಪಕಿಡಾ. ಅರುಣಾ ಹಳ್ಳಿಕೆರಿಯವರು ಹೆಣ್ಣು ಮಕ್ಕಳು ತಾವು ಹೆಣ್ಣೆಂಬ ಕೀಳರಿಮೆ ಬೆಳೆಸಿಕೊಳ್ಳದೆ ತಾವು ಮತ್ತೊಂದು ಜೀವದ ಸೃಷ್ಟಿಗೆ ಕಾರಣರಾಗುತ್ತೇವೆಂದು ಹೆಮ್ಮೆಪಟ್ಟು ಕೊಳ್ಳಬೇಕೆಂದರು. 

ಸಂಘದಮಹಿಳಾ ಮತ್ತು ಮಕ್ಕಳ ಮಂಟಪದ ಸಂಚಾಲಕಿ, ಧಾರವಾಡದ ಉಪನ್ಯಾಸಕಿ ಡಾ.ಶೈಲಜಾಅಮರಶೆಟ್ಟಿ ಅವರು ಹೆಣ್ಣು ಮಕ್ಕಳಲ್ಲಿ ಧೈರ್ಯ ಮತ್ತುಛಲ ಇದ್ದರೆ ಅವರು ಸಾಧಕರಾಗಲು ಸಾಧ್ಯಎಂದರು. ಸಂಘದ ಸಹಕಾರ್ಯದರ್ಶಿ ಶಂಕರ ಕುಂಬಿಯವರು ಮಕ್ಕಳು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್‌. ಎಫ್‌.ಪಾಟೀಲ ಗುರುಗಳು ಹೆಣ್ಣು ಮಕ್ಕಳು ತಮ್ಮ ಆಸಕ್ತ ಕ್ಷೇತ್ರದಲ್ಲಿ ಮುಂದೆ ಬರಬೇಕಾದರೆ ಪಾಲಕರು ಅವರನ್ನು ಹತ್ತಿಕ್ಕದೆ ಪ್ರೋತ್ಸಾಹಿಸಬೇಕೆಂದರು. 

ಶಿಕ್ಷಕ ಎಲ್‌. ಐ. ಲಕ್ಕಮ್ಮನವರ ಮಾತನಾಡಿದರು. ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಶಾಲೆಯ ಶಿಕ್ಷಕಿ   ಕಸ್ತೂರಿ ಗಂಜಿಗಟ್ಟಿ ಕಾರ್ಯಕ್ರಮ ನಿರೂಪಿಸಿ, ಎಲ್ಲರನ್ನೂ ಸ್ವಾಗತಿಸಿದರು. ಶಾಲೆಯಲ್ಲಿ ಹೆಣ್ಣು ಮಕ್ಕಳ ಕುರಿತು ಚಲನಚಿತ್ರಗೀತೆ ಮತ್ತು ಆಶುಭಾಷಣ ಸ್ಪರ್ಧೆಯನ್ನು ಶಾಲಾ ಮಕ್ಕಳಿಗಾಗಿ ಏರಿ​‍್ಡಸಲಾಗಿತ್ತು. ಸುಮಾರು 40ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಎಸ್‌.ಡಿ.ಎಂ.ಸಿ ಸದಸ್ಯರು ಹಾಜರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ರಶಸ್ತಿ ಪಡೆದ ಮಕ್ಕಳಿಗೆ ಸಂಘದ ಡಾ.ಮಹೇಶ ಹೊರಕೇರಿ ಬಹುಮಾನ ವಿತರಿಸಿದರು. ಸೌಮ್ಯ ಕೆಂಗಾನವರ ಹಾಗೂ ಉಮಾ ಅಕ್ಕೂರ ನಿರ್ಣಾಯಕರಾಗಿದ್ದರು.ದೇವಿಕಾ ಹುಬ್ಬಳ್ಳಿ, ಸೋನಿ ಪ್ರಮೀಳಾ ಜಕ್ಕಣ್ಣವರ, ಜ್ಯೋತಿ ಭಾವಿಕಟ್ಟಿ, ರೇಖಾ ಅಂತಕ್ಕನವರ ಸೇರಿದಂತೆ ಸಮಸ್ತ ಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದುಕಾರ್ಯಕ್ರಮ ಯಶಸ್ವಿಗೊಳಿಸಿದರು.