ರಾಷ್ಟ್ರೀಯ ಸಹಕಾರ ನೀತಿ ಮತ್ತು ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ

ರಾಷ್ಟ್ರೀಯ ಸಹಕಾರ ನೀತಿ ಮತ್ತು ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ National Cooperative Policy and Structural Guidelines for Cooperative Institutions

        ಗದಗ 17:  ಅಡರಕಟ್ಟಿ ಹಾಗೂ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ “ರಾಷ್ಟೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿೆ” ದಿನದ ಕಾರ್ಯಕ್ರಮವನ್ನು ಸೋಮವಾರದಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಡರಕಟ್ಟಿ ಇದರ ಸಹಕಾರ ಸಭಾಭವನದಲ್ಲಿ ನೆರವೇರಿಸಲ್ಪಟ್ಟಿತು. ಕಾರ್ಯಕ್ರಮವನ್ನು ಜರುಗಿಸುವ ಪೂರ್ವದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ     ಧರ್ಮಣ್ಣ ಮಹಾದೇವಪ್ಪ ಸಿದ್ದಾಪೂರವರು ಅಕಾಲಿಕ ಮರಣ ಹೊಂದಿದ ಸುದ್ದಿ ತಿಳಿದು ಸಭೆಯಲ್ಲಿ ಶೋಕ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮ ಮುಂದುವರೆಸಲಾಯಿತು.  

           ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿಯವರು ಮಾತನಾಡುತ್ತಾ ಇಂದು ಅಕಾಲಿಕ ಮರಣ ಹೊಂದಿದ ಸದರಿ ಸಂಘದ ನಿರ್ದೇಶಕರಾದ  ಧರ್ಮಣ್ಣ ಸಿದ್ದಾಪೂರ ಅವರ ಅವಧಿಯಲ್ಲಿ ಸಂಘವು ಪ್ರಗತಿ ಸಾಧಿಸಿದ ಬಗ್ಗೆ ಮತ್ತು ಕಾಲಕಾಲಕ್ಕೆ ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ನೀಡಿದ ಸಲಹೆ ಮತ್ತು ಮಾರ್ಗದರ್ಶನ ಕುರಿತು ಶ್ಲಾಘಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಮುಂದುವರೆದು ಗ್ರಾಮಿಣ ಉದ್ಯೋಗಕ್ಕೆ ಉತ್ತೇಜನ ನೀಡಿ, ವಿಶೇಷವಾಗಿ ರೈತರು, ಮಹಿಳೆಯರು, ಯುವಕರು, ಮತ್ತು ಸಣ್ಣ ಉದುಮಿಗಳಿಗೆ ದೊಡ್ಡ ಪ್ರಮಾಣದ ಉದ್ಯೊಗಾವಕಾಶಗಳನ್ನು ಸೃಷ್ಠಿಸುವುದು. “ವಿಕಸಿತ ಭಾರತ 2047” ಕ್ಕೆ ಕೊಡುಗೆ ನೀಡಿ, ಅಭಿವೃಧ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ದೃಷ್ಠಿಕೋನಕ್ಕೆ ಅನಕುಲವಾಗುವಂತೆ ಸದರಿ ಸಹಕಾರ ಸಂಘವು ತನ್ನ ಕೊಡುಗೆಯನ್ನು ನೀಡುತ್ತಿದೆ. ಮತ್ತು ಸಂಘದ ಲಾಭದಲ್ಲಿ 3 ಎಕರೆ ಜಮೀನು ಖರೀದಿಸಿ ಸಾವಯವ ಕೃಷಿಗೆ ಆಧ್ಯತೆ ನೀಡಿ ತನ್ನ ಸಂಘದ ಸದಸ್ಯರಿಗೆ ಕೃಷಿಯಲ್ಲಿ ಸಾಧಿಸಿದ ಸಾಧಕರನ್ನು ಕರೆಯಿಸಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವಲ್ಲಿ ಮಾರ್ಗದರ್ಶನ ನೀಡುತ್ತಿರುವುದು. ಉಳಿದ ಸಂಘಗಳಿಗೆ ಮಾದರಿಯಾಗಿದೆ. ಎಂದು ಹೇಳಿದರು.   

      ಕಾರ್ಯಕ್ರಮದಲ್ಲಿ ಅಡರಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಮಾನಪ್ಪ ಲಮಾಣಿ, ಹಾಲು ಉತ್ಪಾದರಕ ಸಹಕಾರ ಸಂಘದ ಅಧ್ಯಕ್ಷರಾದ ಬಸವರಾಜ ಯ. ಮಂಟೂರ, ಸಹಕಾರ ಸಂಘಗಳ ಲೆಕ್ಕ ಪರಿಶಶೊಧನಾ ಇಲಾಖೆ ಶಿರಹಟ್ಟಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಎಚ್‌. ಎ. ಬಂಡೆಣ್ಣವರ  ಶಿರಹಟ್ಟಿ ತಾಲೂಕಾ ಸಹಕಾರ ಅಭಿವೃಧ್ಧಿ ಅಧಿಕಾರಿಗಳಾದ ಕೆ.ಸಿ.ಕೂಸನೂರಮಠ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕಚೇರಿ ಮಾರಾಟಾಧಿಕಾರಿಗಳಾದ ಬಿ. ಆರ್‌. ನೀಡಗುಂದಿ, ಕೆ.ಸಿ.ಸಿ. ಬ್ಯಾಂಕ್ ಲಿ., ಗದಗ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಬ್ಯಾಂಕ್ ನೀರಿಕ್ಷಕರುಗಳಾದ ಮಂಜುನಾಥ ಹೂಗಾರ ವಿಶ್ವನಾಥ ಎಚ್‌. ಲಮಾಣಿ, ಸಹಾಯಕ ವ್ಯವಸ್ಥಾಪಕರು, ಮತ್ತು ಗದಗ ಜಿಲ್ಲಾ ಮುಖ್ಯಸ್ಥರು, ಧಾರವಾಡ ಹಾಲು ಒಕ್ಕೂಟದ ಗದಗ ಉಪವಿಭಾಗ ಡಾ. ಪ್ರಸನ್ನ ಎಸ್‌. ಪಟ್ಟೇದ, ಧಾರವಾಡ ಹಾಲು ಒಕ್ಕೂಟ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ವಿಸ್ತರಣಾಧಿಕಾರಿಗಳಾದ ಬಸವರಾಜ ಎಸ್‌. ಜುಮ್ಮಣ್ಣವರ, ಕಿರಣ ಎಸ್‌. ಪಾಟೀಲ ಉಪಸ್ಥಿತರಿದ್ದರು. 

      ಸಹಕಾರ ಸಪ್ತಾಹದ ನಾಲ್ಕನೇ ದಿನದ ವಿಷಯ “ ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾತರದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ” ಹಾಗೂ ಸಾವಯವ ಕೃಷಿ ಕುರಿತು ಬಸವರಾಜ ಶಿ. ಏಣಗಿ ಹಿರಿಯ ವಿಜ್ಞಾನಿಗಳು, (ಬೇಸಾಯ ಶಾಸ್ತ್ರ) ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಉಪನ್ಯಾಸ ನೀಡಿದರು. ಜಿಲ್ಲಾ ಆಯುಷ ಇಲಾಖೆಯ ಡಾ. ಜಯಪಾಲ್ ಸಿಂಗ್ ರವರು ಸಂಘದ ಸದಸ್ಯರ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು.